ಲಾಕ್‍ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ

Social Share

ಬೀಜಿಂಗ್, ನ 27- ಹೆಚ್ಚುತ್ತಿರುವ ಕೋವಿಡ್‍ನಿಂದಾಗಿ ಹೇರುತ್ತಿರುವ ಕಠಿಣ ನಿರ್ಬಂಧದ ಕ್ರಮಗಳ ವಿರುದ್ಧ ಜನರು ಹಲವಾರು ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿ ಕಳೆದ ರಾತ್ರಿ ಬೆಂಕಿಯ ಪಂಜು ಹಿಡಿದು ಪ್ರತಿಭಟನೆಗಳು ನಡೆದಿದ್ದು ಸರ್ಕಾರದ ಕ್ರಮಕ್ಕೆ ಜನ ಕಿಡಿಕಾರಿದ್ದಾರೆ.

ಪೊಲೀಸರು ಬಲ ಪ್ರಯೋಗ ಮಾಡಿದ್ದು ಕೆಲವಡೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅನೇಕ ಕಡೆ ಪ್ರತಿಭಟನೆಗಳು ತೀವ್ರಗೊಂಡಿದ್ದುಹತ್ತಿಕ್ಕುವ ಪ್ರಯತ್ನ ನಡೆದಿದೆ. ಪ್ರಮುಖ ನಗರಿ ಶಾಂಘೈನಲ್ಲಿ, ಮಧ್ಯರಾತ್ರಿ ಉರುಂಕಿ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ಜಮಾಯಿಸಿದ ಸುಮಾರು 300 ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾರೆ.

ಜನರ ಪ್ರತಿಭಟನೆ ಹೆಚ್ಚುತ್ತಿರುವುದನ್ನು ಅರಿತು ಕಡಿಮೆ ಅಪಾಯದ ಪ್ರದೇಶಗಳಲ್ಲಿ ಮುಕ್ತವಾಗಿ ಓಡಾಡಲು ಅನುಮತಿಸಲಾಗುವುದು ಎಂದು ಅಧಿಕಾರಿಗಳು ಬೆಳಿಗ್ಗೆ ಘೋಷಿಸಿದರೂ ಕೂಡ ಇನ್ನೂ ಅನೇಕ ಪ್ರದೇಶಗಳಲ್ಲಿ ಲಾಕ್‍ಡೌನ್ ಮುಂದುವರೆದಿದೆ.

ಶೀಘ್ರದಲ್ಲೇ ವಿಷ್ಣು ಸ್ಮಾರಕ ಲೋಕಾರ್ಪಣೆ

ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾದ ನಿಲುವಿಗೆ ಅಪಹಾಸ್ಯ ಮಾಡಿದ್ದಾರೆ. ಆದರೆ ಇದನ್ನುತಂತ್ರಜ್ಞಾನ ಬಳಸಿ ಸರ್ಕಾರಿ ಐಟಿ ಅಧಿಕಾರಿಗಳು ಅಳಿಸಿಹಾಕುತ್ತಿದ್ದಾರೆ. ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿಲ್ಲಿ ಕಳೆದ ಆಗಸ್ಟ್‍ನಿಂದ ಲಾಕ್‍ಡೌನ್ ಮಾಡಲಾದ್ದು, ಇಲ್ಲಿನ ನಿವಾಸಿಗಳು ತಮ್ಮ ಮನೆಗಳಿಂದ ಹೊರ ಬರಲು ನಿರ್ಬಂಧಿಸಲಾಗಿದೆ.

ಆಹಾರ ನೀರು ಸರಿಯಾಗಿ ದೊರೆಯದೆ ಹಸಿವಿನಿಂದ ಬಳಲುತ್ತಿದ್ದಾರೆ. ಸುಮಾರು ಈ ಪ್ರದೇಶದಲ್ಲಿ ಪ್ರತಿದಿನ ಸುಮಾರು 200ರಿಂದ 300 ಜನ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ ಹೆಚ್ಚಿನವರಿಗೆ ರೋಗ ಲಕ್ಷಣಗಳೇ ಕಾಣುತ್ತಿಲ್ಲ.

ಪ್ಲಾಸ್ಟಿಕ್ ಮುಕ್ತವಾಗಿರಲಿದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಇಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ, ಮಹಿಳೆಯೊಬ್ಬರು ಕಳೆದ ಮೂರು ತಿಂಗಳಿನಿಂದ ತಮ್ಮ ಅಪಾರ್ಟ್‍ಮೆಂಟ್‍ನಲ್ಲೇ ಗೃಹಬಂಧನದಲ್ಲಿದ್ದು, ಮನೆ ಕಿಟಕಿಯನ್ನು ತೆರೆಯಲು ಸಹ ಅನುಮತಿ ನೀಡಿಲ್ಲ.

BIG NEWS : ಯಾವುದೇ ದಾಖಲೆಗಳನ್ನು ಪಡೆಯಲು ಜನನ ಪತ್ರ ಕಡ್ಡಾಯ..!

ಆದರೆ ನಿನ್ನೆ ಸ್ಥಳೀಯ ನಿವಾಸಿಗಳು, ತಮ್ಮ ಮನೆಯ ಕಿಟಕಿಗಳನ್ನು ತೆರೆದು ಘೋಷಣೆ ಕೂಗುತ್ತಿರುವ ವಿಡಿಯೋ ಜಾಲತಾಣದಲ್ಲಿ ಅಪ್‍ಲೋಡ್ ಮಾಡಲಾಗಿದೆ.

China, Covid, Unrest, Boils, Citizens, Defy, Lockdown, Efforts,

Articles You Might Like

Share This Article