ಬೀಜಿಂಗ್,ಫೆ.10- ಆಕಾಶದಲ್ಲಿ ಹಾರಾಡುತ್ತಿದ್ದ ನಮ್ಮ ಬಲೂನ್ ಅನ್ನು ಬೇಹುಗಾರಿಕೆ ಶಂಕೆಯ ಮೇಲೆ ಅಮೆರಿಕಾ ಹೊಡೆದುರಿಳಿಸಿದ ನಂತರ ಮಾತುಕತೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿಲ್ಲ ಎಂದು ಚೀನಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‍ರ ಕರೆಯನ್ನು ಸ್ವೀಕರಿಸಲು ನಿರಾಕರಿಸಲಾಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಚೀನಾದ ಸಚಿವಾಲಯದ ವಕ್ತಾರ ಟಾನ ಕೆಫೀ ಸ್ಪಷ್ಟನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ಅಮೆರಿಕಾದೊಂದಿಗೆ ಮಾತುಕತೆಗೆ ಪರಿಸ್ಥಿತಿ ಪೂರಕವಾಗಿಲ್ಲ. ಮೇಲಾಗಿ ಅಮೆರಿಕಾ ಅಂತರಾಷ್ಟ್ರೀಯ ಕಾನೂನುಗಳನ್ನು ಗಂಭೀರವಗಿ ಉಲ್ಲಂಘಿಸಿದೆ ಮತ್ತು ವಿನಾಶಕಾರಿ ಪೂರ್ವ ನಿರ್ದಶನದ ಮುನ್ಸೂಚನೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಬೇಜವಾಬ್ದಾರಿ ಮತ್ತು ಗಂಭೀರವಾದ ತಪ್ಪು ಕ್ರಮ ಎರಡು ದೇಶಗಳ ಮಿಲಿಟರಿ ವಿನಿಮಯ ಮತ್ತು ಸಮಾಲೋಚನೆಗೆ ಸೂಕ್ತವಾದ ವಾತಾವರಣವನ್ನು ಕದಡಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಚೀನಾದ ಬಲೂನ್ ಅಮೆರಿಕಾ ವಾಯು ನೆಲೆ ಪ್ರವೇಶಿಸುತ್ತಿದ್ದಂತೆ ಲಾಯ್ಡ್ ಆಸ್ಟಿನ್ ತಮ್ಮ ಉದ್ದೇಶಿತ ಚೀನಾ ಪ್ರವೇಶವನ್ನು ಮುಂದೂಡಿದರು.
ಇಸ್ರೋ ಮತ್ತೊಂದು ಮೈಲಿಗಲ್ಲು : ಬಾಹ್ಯಾಕಾಶದ ಕಕ್ಷೆ ಸೇರಿದ 3 ಉಪಗ್ರಹಗಳು
ಅಮೆರಿಕಾದ ಅಧ್ಯಕ್ಷರ ಸೂಚನೆಯ ಮೇರೆಗೆ ಸೇನಾ ಅಧಿಕಾರಿಗಳು ಕ್ಷಿಪಣಿ ಬಳಸಿ ಬಲೂನ್ ಅನ್ನು ಧ್ವಂಸಗೊಳಿಸಿದ ಬಳಿಕ ಲಾಯ್ಡ್ ಆಸ್ಟಿನ್ ಚೀನಾದ ರಕ್ಷಣಾ ಸಚಿವರ ಜೊತೆ ದೂರವಾಣಿಯಲ್ಲಿ ಮಾತನಾಡಲು ಬಯಸಿ ಕರೆ ಮಾಡಿದ್ದರು. ಆದರೆ ಚೀನಾದ ಸಚಿವರು ಮತ್ತು ರಾಜತಾಂತ್ರಿಕರು ಕರೆ ಸ್ವೀಕರಿಸಲಿಲ್ಲ ಎಂದು ಹೇಳಲಾಗಿತ್ತು.
ಅದನ್ನು ಚೀನಾದ ಅಧಿಕಾರಿಗಳು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
ಇಂತಹ ಸಂದರ್ಭಗಳನ್ನು ಎದುರಿಸಲು ಅಗತ್ಯ ವಿಧಾನಗಳನ್ನು ಬಳಸುವ ಹಕ್ಕನ್ನು ಚೀನಾ ಕಾಯ್ದಿರಿಸಿಕೊಂಡಿದೆ. ಹವಮಾನ ಆಧ್ಯಯನಕ್ಕಾಗಿ ಹಾರಿ ಬಿಡಲಾಗಿದ್ದ ಬಲೂನ್ ಆಕಸ್ಮಿಕವಾಗಿ ಅಮೆರಿಕಾದ ವಾಯು ನೆಲೆಯನ್ನು ಪ್ರವೇಶಿಸಿತ್ತು. ನಾಗರೀಕ ಸೇವೆಯ ವಿಮಾನವನ್ನು ಹೊಡೆದುರಿಳಿಸುವ ಮೂಲಕ ಅಮೆರಿಕಾ ತಪ್ಪು ಮಾಡಿದೆ ಎಂದು ಚೀನಾದ ವಕ್ತಾರರು ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.
ಪಂಜಾಬ್‍ನ ಗಡಿಯಲ್ಲಿ ಚೀನಾ ಮೇಡ್ ಶಸ್ತ್ರಾಸ್ತ್ರ, ಡ್ರಗ್ಸ್ ಎಸೆದ ಪಾಕ್ ಡ್ರೋನ್
ಆದರೆ ಚೀನಾದ ವಾದವನ್ನು ಅಲ್ಲಗಳೆದಿರುವ ಅಮೆರಿಕಾರ, ಪೀಪಲ್ಸ್ ಲಿಬರೇಶನ್ ಆರ್ಮಿಯ ನಿರ್ದೇಶನದಡಿಯಲ್ಲಿ ಚೀನಾ 40 ಕ್ಕೂ ಹೆಚ್ಚು ದೇಶಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ಕಣ್ಗಾವಲು ಕಾರ್ಯಕ್ರಮ ಆಯೋಜಿಸಿದೆ. ಅದರ ಭಾಗವಾಗಿ ಬಲೂನ್ ಅಮೆರಿಕಾ ಪ್ರವೇಶಿಸಿತು. ಇದೇ ರೀತಿಯ ಆಕಾಶಬುಟ್ಟಿಗಳು ಐದು ಖಂಡಗಳ ಮೇಲೆ ಹಾರಾಟ ನಡೆಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.
China, declines, US, call, balloon, incident,