ಬೀಜಿಂಗ್,ಮಾ.5-ರಷ್ಯಾಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೆ ಚೀನಾ ತನ್ನ ಸೇನಾ ಬಜೆಟ್‍ನಲ್ಲಿ ಭಾರಿ ಏರಿಕೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ.ಅಮೆರಿಕಾ ನಂತರ ಸೇನಾ ಸಾಮಥ್ರ್ಯಕ್ಕೆ ಅತಿ ಹೆಚ್ಚು ಹಣ ನೀಡುವ ಚೀನಾ ತನ್ನ ಸೇನಾ ಬಜೆಟ್ ಸಾಮಥ್ರ್ಯವನ್ನು ಶೆ.7.1ರಷ್ಟು ಹೆಚ್ಚಳ ಮಾಡಿದೆ.
ತನ್ನ ದೇಶದ ರಕ್ಷಣೆಗೆ ಚೀನಾ 230 ಬಿಲಿಯನ್ ಅಮೆರಿಕನ್ ಡಾಲರ್‍ನಷ್ಟು ಹಣ ವ್ಯಯ ಮಾಡಲು ತೀರ್ಮಾನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶ್ವದ ಬಲಾಡ್ಯ ರಾಷ್ಟ್ರಗಳಿಗೆ ಸಡ್ಡು ಹೊಡೆಯುವಂತೆ ನಡೆದುಕೊಳ್ಳುತ್ತಿರುವ ಚೀನಾ ಮೇಲೆ ಹಲವು ರಾಷ್ಟ್ರಗಳು ಕೆಂಗಣ್ಣು ಬೀರಿವೆ. ಇಂತಹ ಸಂದರ್ಭದಲ್ಲೇ ಚೀನಾ ತನ್ನ ಸೇನಾ ಬಜೆಟ್ ಏರಿಕೆ ಮಾಡಿಕೊಳ್ಳುವ ಮೂಲಕ ಎದುರಾಳಿಗಳಿಗೆ ಟಾಂಗ್ ನೀಡಲು ಮುಂದಾಗಿದೆ.
