ಚೀನಾದಲ್ಲಿ ಮತ್ತೆ ಕೋವಿಡ್ ಹೆಚ್ಚಳ, ಶಾಲಾ-ಕಾಲೇಜು ಬಂದ್..!

Social Share


ಬೀಜಿಂಗ್,ನ.22- ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಬಹುತೇಕ ಶಾಲೆಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸೂಚಿಸಲಾಗಿದೆ.

ಕೆಲವು ಕೋವಿಡ್ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.
ಮಧ್ಯ ಹೆನಾನ್ ಪ್ರಾಂತ್ಯದ ಝೆಂಗ್‍ಝೌದಿಂದ ನೈಋತ್ಯದ ಚಾಂಗ್‍ಕಿಂಗ್‍ವರೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬಾಧಿಸಿದೆ ಪ್ರತಿ ದಿನ 25 ಸಾವಿದ ಹೊಸ ಪ್ರಕರಣಗಳನ್ನು ವರದಿಯಾಗುತ್ತಿದೆ.

ಇಂದು ಬೀಜ್‍ನಲ್ಲಿ ಎರಡು ಸಾವು ಸಹ ದಾಖಲಿಸಿದೆ .ಹಲವಾರು ಚೀನೀ ನಗರಗಳಲ್ಲಿ ಕಳೆದ ವಾರ ಕೋವಿಡ್ ಪರೀಕ್ಷೆಯನ್ನು ಕಡಿತಗೊಳಿಸಲು ಪ್ರಾರಂಭಿಸಿದ್ದವು ಆದರೆ ಮತ್ತೆ ಸೋಂಕು ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಂಗಳೂರಲ್ಲಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವರ ಭೇಟಿ

ದೇಶದಲ್ಲಿ ಬೃಹತ್ ವ್ಯಕ್ಸೀನ್ ಅಭಿಯಾನ ಪುನರಾರಂಭ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ರೋಗಿಗಳನ್ನು ಪರೀಕ್ಷಿಸಲು ಹೆಚ್ಚಿನ ಆಸ್ಪತ್ರೆ ಸಾಮಥ್ರ್ಯ ಮತ್ತು ಚಿಕಿತ್ಸಾಲಯಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಮತ ಮಾಹಿತಿಗೆ ಕನ್ನ : ಆರೋಪ ಮುಚ್ಚಿಹಾಕುವ ಯತ್ನ ನಡೆದಿತ್ತೆ..?

China, Locks, Down,  school, college, COVID, Case,

Articles You Might Like

Share This Article