ಬೀಜಿಂಗ್,ಡಿ.19- ಚೀನಾದಲ್ಲಿ ಮತ್ತೆ ಕೊರೊನಾ ಉಲ್ಬಣಗೊಂಡಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವವರು ಕೆಲಸ ಕಾರ್ಯಗಳಿಗೆ ತೆರಳಬಹುದು ಎಂದು ಚೀನಾ ಸರ್ಕಾರ ಆದೇಶ ಹೊರಡಿಸಿದೆ.
ಸಾವಿರಾರು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಮತ್ತೆ ಲಾಕಡೌನ್ ವಿದಿಸಲಾಗುವುದು ಎಂಬ ಹೇಳಿಕೆಯಿಂದ ಹಿಂದೆ ಸರಿದಿರುವ ಚೀನಾ ಸರ್ಕಾರ ಇದೀಗ ಉಲ್ಟಾ ಹೊಡೆದಿದ್ದು ಸೋಂಕು ಲಕ್ಷಣ ಇರುವವರು ಸಾಮಾನ್ಯರಂತೆ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಸೂಚಿಸಿದೆ.
ಸೋಂಕನ್ನು ಏಕಾಏಕಿ ಪತ್ತೆಹಚ್ಚಲು ಅಸಾಧ್ಯ ಎಂದು ಅಧಿಕಾರಿಗಳು ಒಪ್ಪಿಕೊಳ್ಳುವುದರೊಂದಿಗೆ, ದಕ್ಷಿಣದ ಮೆಗಾಸಿಟಿ ಚಾಂಗ್ಕಿಂಗ್ನ ಸುಮಾರು 32 ಮಿಲಿಯನ್ ಜನರಿಗೆ ಸೋಂಕಿನ ರೋಗಲಕ್ಷಣಗಳು ಕಂಡು ಬಂದಿದ್ದು, ಇಲ್ಲಿನ ಜನರು ಮಾಮೂಲಿ ಕೆಲಸ ಕಾರ್ಯಗಳಿಗೆ ತೆರಳಬಹುದು ಎಂದು ಸರ್ಕಾರ ಆದೇಶಿಸಿದೆ ಎಂದು ಚಾಂಗ್ಕಿಂಗ್ ಡೈಲಿ ವರದಿ ಮಾಡಿದೆ.
ಸಿಎಂ ಬೊಮ್ಮಾಯಿ ಸುಳ್ಳಿನ ರಾಜ : ಡಿಕೆಶಿ
ಸರ್ಕಾರ, ಪಕ್ಷ ಮತ್ತು ರಾಜ್ಯ ಕಾರ್ಯಕರ್ತರು ತಮ್ಮ ದೈಹಿಕ ಪರಿಸ್ಥಿತಿಗಳು ಮತ್ತು ಅವರ ಕೆಲಸದ ಅಗತ್ಯಗಳಿಗೆ ಅನುಗುಣವಾಗಿ ವೈಯಕ್ತಿಕ ರಕ್ಷಣೆಯನ್ನು ಕೈಗೊಂಡ ನಂತರ ಸಾಮಾನ್ಯ ರೀತಿಯಲ್ಲಿ ಕೆಲಸ ಮಾಡಬಹುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಆರೈಕೆ ಮನೆಗಳು, ಶಾಲೆಗಳು ಮತ್ತು ಕಾರಾಗೃಹಗಳಂತಹ ಕೆಲವು ಸೌಲಭ್ಯಗಳನ್ನು ಹೊರತುಪಡಿಸಿ, ಅನಗತ್ಯವಾಗಿ ವೈರಸ್ ಪರೀಕ್ಷೆಗಳನ್ನು ತೆಗೆದುಕೊಳ್ಳಬಾರದು ಅಥವಾ ಜನರು ನಕಾರಾತ್ಮಕ ಫಲಿತಾಂಶವನ್ನು ತೋರಿಸಬಾರದು ಎಂದು ಇದು ನಿವಾಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಚೀನಾದಾದ್ಯಂತ ಸ್ಥಳೀಯ ಸರ್ಕಾರಗಳು ಸಾಮಾನ್ಯವಾಗಿ ರೋಗದಿಂದ ಚೇತರಿಸಿಕೊಳ್ಳುವಾಗ ಜನರು ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಪ್ರೋತ್ಸಾಹಿಸುತ್ತವೆ ಪರಿಸ್ಥಿತಿ ಹೀಗಿದ್ದರೂ ಚೀನಾ ಸರ್ಕಾರದ ಈ ನಡೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದೆ : ಕಾರಜೋಳ
ಚೀನಾ ಸರ್ಕಾರದ ಈ ನಡೆಯನ್ನು ಗಮನಿಸಿದರೆ ತಮ್ಮ ದೇಶದ ಪ್ರಜೆಗಳನ್ನು ಸೋಂಕಿನೊಂದಿಗೆ ಸಾಮಾನ್ಯ ಜೀವನ ನಡೆಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಡಿದಂತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
China, Megacity, New Work Rule, Covid, Patients,