ಬ್ರಸೆಲ್ಸï, ಜ. 5-ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಿಗೆ ಬರುವ ಚೀನ ಪ್ರಜೆಗಳು ಕೊವಿಡ್- ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ ಎಂದು ಕಠಿಣ ನಿರ್ಭಂಧ ಹೇರಲು ಚಿಂತನೆ ಮುಂದುವರೆಸಿದೆ.
ಕಳೆದ ಒಂದು ವಾರದಿಂದ ಐರೋಪ್ಯ ಒಕ್ಕೂಟದ ಆರೋಗ್ಯ ತಜ್ಞರ ನಡುವಿನ ಮಾತುಕತೆಯ ನಂತರ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್ನಂತಹ ದೇಶಗಳು ಈಗಾಗಲೇ ಜಾರಿಗೆ ತಂದ ಪ್ರಯಾಣದ ನಿರ್ಬಂಧವನ್ನು ಎಲ್ಲಾ 27 ಸದಸ್ಯ ರಾಷ್ಟ್ರಗಳು ಪಾಲಿಸಲು ಮುಂದಾಗಿದೆ. ಚೀನಾ ಈ ಕ್ರಮಗಳನ್ನು ತೀವ್ರವಾಗಿ ತಿರಸ್ಕರಿಸಿದೆ ಮತ್ತು ಪ್ರತಿಕ್ರಮದ ಎಚ್ಚರಿಕೆ ನೀಡಿದೆ.
ಬಿಜೆಪಿಯಲ್ಲಿ ಸೋಮಣ್ಣಗೆ ಮಹತ್ವದ ಜವಾಬ್ದಾರಿ
ಚೀನಾದಿಂದ ಹೊರಹೊಮ್ಮುವ ಕರೋನವೈರಸ್ ರೂಪಾಂತರಗಳು ಈಗಾಗಲೇ ಯುರೋಪ್ನಲ್ಲಿ ಪ್ರಚಲಿತದಲ್ಲಿರುವುದರಿಂದ ಪ್ರಯಾಣದ ಮೇಲೆ ಯಾವುದೇ ನಿರ್ಬಂಧಗಳ ಅಗತ್ಯವಿಲ್ಲ ಎಂದು ಚೀನಾ ಸರ್ಕಾರ ಮತ್ತು ಯುರೋಪಿಯನ್ ಆರೋಗ್ಯ ತಜ್ಞರು ಹೇಳಿದ್ದಾರೆ.
ವಿಶ್ವಾದ್ಯಂತ ಸುಮಾರು 300 ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ ಇಂಟನ್ರ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಇದಕ್ಕೆ ಪ್ರಬಲ ಧ್ವನಿನೀಡಿದೆ.
ಸಿದ್ದರಾಮಯ್ಯನವರಿಗೆ ಸಂಸ್ಕಾರ ಇದೆಯಾ..? : ರೇಣುಕಾಚಾರ್ಯ ಬೆಂಕಿ
ಯುರೋಪಿಯನ್ ಯೂನಿಯನ್ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಸ್ವೀಡನ್ ಮಾತ್ರ , ಚೀನಾದಿಂದ ಬರುವ ಪ್ರಯಾಣಿಕರು ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಿದ್ಧರಾಗಿರಬೇಕು ಎಂದು ತಿಳಿಸಿದೆ.
China, opposes, Covid travel, restrictions,