ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ

Social Share

ಬೀಜಿಂಗ್,ನ.26- ಅಮೆರಿಕಾದ ನಾಸಾ ಸಂಸ್ಥೆಗೆ ಸಡ್ಡು ಹೊಡೆಯಲು ಮುಂದಾಗಿರುವ ಚೀನಾ 2028ರ ವೇಳೆಗೆ ಚಂದ್ರನ ಅಂಗಳದಲ್ಲಿ ತನ್ನ ಮೊದಲ ಪರಮಾಣು ಶಕ್ತಿ ಚಾಲಿತ ನೆಲೆ ನಿರ್ಮಿಸುವ ಯೋಜನೆಯನ್ನು ತ್ವರಿತಗೊಳಿಸಿದೆ.

ಲ್ಯಾಂಡರ್, ಹಾರ್ಪರ್, ಆರ್ಬಿಟರ್ ಮತ್ತು ರೋವರ್‍ಗಳನ್ನು ಒಳಗೊಂಡಿರುವ ಪರಮಾಣು ಶಕ್ತಿ ಚಾಲಿತ ನೆಲೆಯನ್ನು ಚಂದ್ರನ ಮೇಲೆ ಸ್ಥಾಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪತ್ಯ ಸಾಧಿಸಲು ಚೀನಾ ಮುಂದಾಗಿದೆ ಎಂದು ಕೈಕ್ಸಿನ್ ಸಂಸ್ಥೆ ವರದಿ ಮಾಡಿದೆ.

ಚಂದ್ರನ ಮೇಲ್ಮೈನಲ್ಲಿ ಪರಮಾಣು ಶಕ್ತಿ ನೆಲೆ ಸ್ಥಾಪಿಸುವುದರಿಂದ ನಮ್ಮ ಗಗನಯಾತ್ರಿಗಳು ಮುಂದಿನ 10 ವರ್ಷಗಳಲ್ಲಿ ಚಂದ್ರನತ್ತ ಹೋಗಲು ಸಹಕರಿಸಲಿದೆ ಎಂದು ಚೀನಾ ಚಂದ್ರ ಪರಿಶೋಧನಾ ಕಾರ್ಯಕ್ರಮದ ಮುಖ್ಯಸ್ಥ ವು ವಿರಾನ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ಸಜ್ಜು

ಚೀನಾ ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ಸಂಶೋಧನೆಯತ್ತ ಹೆಚ್ಚು ಗಮನ ಹರಿಸಿದೆ. ಮಾತ್ರವಲ್ಲ ಚಂದ್ರನ ಅಂಗಳದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುತ್ತಿದೆ. ಮತ್ತು ಮಂಗಳ ಗ್ರಹದ ಮೇಲೂ ತನ್ನ ದೃಷ್ಟಿಯನ್ನು ಹರಿಸಿದೆ.

ವೋಟರ್ ಡೇಟಾ ಅಕ್ರಮ ನಡೆದಿಲ್ಲ ಎಂದಾದರೆ IAS ಅಧಿಕಾರಿಗಳ ಅಮಾನತಾಗಿದ್ದೇಕೆ..?

ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ತಮ್ಮ ಪ್ರಾಬಲ್ಯಕ್ಕಾಗಿ ಅಮೆರಿಕಾ ಮತ್ತು ಚೀನಾ ನಡುವೆ ಪೈಪೋಟಿ ಆರಂಭವಾಗಿದ್ದು, ಎರಡು ದೇಶಗಳು ಬಾಹ್ಯಾಕಾಶ ಕ್ಷೇತ್ರದ ಮೇಲೆ ಕೋಟ್ಯಂತರ ಡಾಲರ್ ಹಣ ವ್ಯಯ ಮಾಡುತ್ತಿವೆ.

China, Plans, Build, Nuclear, Powered, Moon,

Articles You Might Like

Share This Article