ಚೀನಾದಲ್ಲಿ ಕೊರೊನಾ ಸಾವಿನ ಕೇಕೆ

Social Share

ಬೀಜಿಂಗ್,ಡಿ.26- ಚೀನಾದಲ್ಲಿ ಮಿತಿ ಮೀರಿರುವ ಕೊರೊನಾ ಪ್ರಕರಣಗಳು ಹೊಸ ವರ್ಷದ ಆರಂಭದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಚೀನಾದಲ್ಲಿ ಕೊರೊನಾ ಮರಣ ಮೃದಂಗ ಮಿತಿ ಮೀರಿದೆ ಎಂಬ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಅಲ್ಲಿನ ಸರ್ಕಾರ ಕೊರೊನಾ ದೈನಂದಿನ ಪ್ರಕರಣಗಳ ಡೇಟಾ ಪ್ರಕಟಿಸುವುದನ್ನು ನಿಲ್ಲಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ತಡೆಹಿಡಿಯಲು ಸಾಧ್ಯವಾಗದೆ ಸರ್ಕಾರ ಅಂಕಿ ಅಂಶಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಇದರ ಪರಿಣಾಮ ಜನವರಿ ನಂತರ ಚೀನಾದಲ್ಲಿ ಕೊರೊನಾ ಸೋಂಕಿನ ತೀವ್ರತೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಲ್ಲಿನ ಟೆಕ್ ಹಬ್ ಝೆಜಿಯಾಂಗ್ ಪ್ರಾಂತ್ಯದಲ್ಲಿ ಪ್ರತಿದಿನ 1 ಮಿಲಿಯನ್ ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ. ಆ ಅಂಕಿಅಂಶವು ಮುಂದಿನ ಎರಡು ವಾರದೊಳಗೆ ದ್ವಿಗುಣಗೊಳ್ಳಬಹುದು, ನಂತರ ಜನವರಿಯಲ್ಲಿ ಸಾವು-ನೋವಿನ ಪ್ರಕರಣಗಳು ಹೆಚ್ಚಳವಾಗುವ ಅಂದಾಜಿದೆ.

ರೆಡ್ಡಿ ಹೊಸ ಪಕ್ಷ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ : ಶ್ರೀರಾಮುಲು

ಮಧ್ಯ ಚೀನಾದ ಐಫೋನ್ ನಗರವಾದ ಝೆಂಗ್‍ಝೌನಲ್ಲೂ ಕೊರೊನಾ ಸ್ಪೋಟಿಸಿದೆ. ಇದು ಜನವರಿ ಮಧ್ಯದಲ್ಲಿ ಸೋಂಕು ಉಲ್ಬಣಿಸುವ ನೀರಿಕ್ಷೆ ಹೊಂದಲಾಗಿದೆ. ಕಳೆದ ವಾರ ಒಂದೇ ದಿನದಲ್ಲಿ ದೇಶವು ಸುಮಾರು 37 ಮಿಲಿಯನ್ ಪ್ರಕರಣಗಳ ದೈನಂದಿನ ಸೋಂಕನ್ನು ಕಂಡಿರಬಹುದು ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ಅಂದಾಜಿಸಿದೆ.

ಚೀನಾದ ಮೆಗಾಸಿಟಿಗಳನ್ನು ಮೀರಿ, ವೈರಸ್ ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳತ್ತ ಸಾಗುತ್ತಿದೆ. ವಾರಾಂತ್ಯದಲ್ಲಿ ಚೀನಾದ ಬಿಸಿನೆಸ್ ನ್ಯೂಸ್ ಪೆÇೀರ್ಟಲ್ ಕೈಜಿಂಗ್‍ನ ವರದಿಯ ಪ್ರಕಾರ, ಕಡಿಮೆ ಸಂಪನ್ಮೂಲ ಹೊಂದಿರುವ ಪ್ರಾದೇಶಿಕ ಆಸ್ಪತ್ರೆಗಳು ರೋಗವನ್ನು ನಿಭಾಯಿಸುವಲ್ಲಿ ಕಡಿಮೆ ಅನುಭವವನ್ನು ಹೊಂದಿವೆ ಮತ್ತು ಜ್ವರ-ಕಡಿಮೆಗೊಳಿಸುವ ಔಷಧಿಗಳು ಮತ್ತು ಇತರ ಮೂಲಭೂತ ಚಿಕಿತ್ಸೆಗಳಿಗೆ ಸೀಮಿತ ಪೂರೈಕೆಗಳಿಲ್ಲದೆ ಹೆಣಗಾಡುತ್ತಿವೆ ಎಂದು ತಿಳಿಸಿದೆ.

ಔಟ್‍ಪೋಸ್ಟ್ ನಲ್ಲಿ ಲಂಚ ಪಡೆಯುತ್ತಿದ್ದ ಕಾನ್‍ಸ್ಟೆಬಲ್ ಅಮಾನತು

ಪೂರ್ವ ಪ್ರಾಂತ್ಯದ ಜಿಯಾಂಗ್ಸಿ ನಗರವೂ ಜನವರಿಯ ಆರಂಭದಲ್ಲಿ ಕೋವಿಡ್ ಸೋಂಕಿನ ಉತ್ತುಂಗವನ್ನು ಅಂದಾಜು ಮಾಡುತ್ತಿದೆ, ಹಾಗೆಯೇ ದಕ್ಷಿಣದ ಮಹಾನಗರವಾದ ಗುವಾಂಗ್‍ಝೌ. ಹತ್ತಿರದ ಅನ್ಹುಯಿ ಪ್ರಾಂತ್ಯಗಳಲ್ಲೂ ಕೊರೊನಾ ಮಹಾಮಾರಿ ಹೆಮ್ಮಾರಿಯಂತೆ ಹರಡುತ್ತಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

#China, #reports, #37millionCases #Covidcases, #globalrecord,

Articles You Might Like

Share This Article