Saturday, September 23, 2023
Homeಅಂತಾರಾಷ್ಟ್ರೀಯಬಾಹ್ಯಾಕಾಶ ಕೇಂದ್ರಕ್ಕೆ ಚೀನಾ ಮೊದಲ ನಾಗರೀಕ

ಬಾಹ್ಯಾಕಾಶ ಕೇಂದ್ರಕ್ಕೆ ಚೀನಾ ಮೊದಲ ನಾಗರೀಕ

- Advertisement -

ಬೀಜಿಂಗ್,ಮೇ.29- ಮೊದಲ ಬಾರಿಗೆ ನಾರೀಕರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಚೀನಾ ಮುಂದಾಗಿದೆ. ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಕಾರ್ಯಾಚರಣೆಯ ಭಾಗವಾಗಿ ತನ್ನ ಮೊದಲ ನಾಗರಿಕ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಇಲ್ಲಿಯವರೆಗೆ ಚೀನೀ ಗಗನಯಾತ್ರಿಗಳಾಗಿದ್ದು ಸೇನಾ ಯೋಧರು ಈಗ ವಿಜ್ಞಾನಿ,ಪ್ರಾಧ್ಯಾಪಕರಿಗೆ ಅವಕಾಶ ಸಿಕ್ಕಿದೆ.ರಾಕೆಟ್‍ಪೇಲೋಡ್ ತಜ್ಞ ಗುಯಿ ಹೈಚಾವೋ ಗಗಮಯಾತ್ರಿಯಾಗಲಿದ್ದಾರೆ. ಬೀಜಿಂಗ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರು ಗುಯಿ ಬಾಹ್ಯಾಕಾಶ ವಿಜ್ಞಾನದ ಪ್ರಾಯೋಗಿಕ ಪೇಲೋಡ್‍ಗಳ ಆನ್-ಆರ್ಬಿಟ್ ಕಾರ್ಯಾಚರಣೆಗೆ ಪ್ರಮುಖ ಜವಾಬ್ದಾರಿ ಹೊಂದಿದ್ದಾರೆ.

- Advertisement -

ಮನೆಗೆ ನುಗ್ಗಿ ದರೋಡೆ : ಮೂವರ ಬಂಧನ

ಮಂಗಳವಾರ ಬೆಳಗ್ಗೆ 9.31ಕ್ಕೆ ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಗಗನನೌಕೆ ಹೊತ್ತ ರಾಕೆಟ್ ಉಡಾವಣೆಯಾಗಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಚೀನಾ ಚಂದ್ರನ ಮೇಲೆ ನೆಲೆಯನ್ನು ನಿರ್ಮಿಸಲು ಯೋಜಿಸುತ್ತಿದೆ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ಸಚಿವಾಲಯ 2029 ರ ವೇಳೆಗೆ ಚಂದ್ರನ ಅಂಗಳಕ್ಕೆ ಗಗನಯಾತ್ರಿ ಕಳುಹಿಸುವ ಗುರಿಯನ್ನು ಹೊಂದಿದೆ.

ಚೀನಾ ಕಂಡುಹಿಡಿದಿರುವ ಬಾಹ್ಯಾಕಾಶ ವಿಮಾನ ಹೆಚ್ಚು ಚರ್ಚೆಯಾಗುತ್ತಿದೆ. ಕಳೆದ 9 ತಿಂಗಳಿಂದ ಬಾಹ್ಯಾಕಾಶ ವಿಮಾನವು ಬಾಹ್ಯಾಕಾಶದಲ್ಲಿ ಸುತ್ತುತ್ತಿತ್ತು. ಮೇ ತಿಂಗಳ ಆರಂಭಿಕ ದಿನಗಳಲ್ಲಿ ಮರಳಿದಾಗ, ಆದಾಗ್ಯೂ, ಚೀನಾ ತನ್ನ ಹೊಸ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಬಹುತೇಕ ರಹಸ್ಯವಾಗಿರಿಸಿದೆ.

China, #Send, #FirstCivilian, #Space,

- Advertisement -
RELATED ARTICLES
- Advertisment -

Most Popular