ತೈಪೆ,ಡಿ.13- ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾ 18 ಅಣ್ವಸ್ತ್ರಗಳ್ನು ರವಾನಿಸಿದೆ ಎಂದು ತೈಪೆ ಗಂಭೀರ ಆರೋಪ ಮಾಡಿದೆ. ತೈವಾನ್ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟ ನಂತರ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲೇ ಚೀನಾ ಅಣ್ವಸ್ತ್ರ ರವಾನಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ನಾವು ಯಾವುದೇ ಕಾರಣಕ್ಕೂ ಚೀನಾದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ತೈವಾನ್ ಸ್ಪಷ್ಟಪಡಿಸಿದ ನಂತರ ಚೀನಾ ದಬ್ಬಾಳಿಕೆ ಮೂಲಕ ನಮ್ಮನ್ನು ಬೆದರಿಸಿ ತೈವಾನ್ ವಶಪಡಿಸಿಕೊಳ್ಳುವ ಕಾರ್ಯದ ಭಾಗವಾಗಿ ರಕ್ಷಣಾ ವಲಯದಲ್ಲಿ ಶಸ್ತ್ರಾಸ್ತ್ರ ಕ್ರೋಢಿಕರಿಸತೊಡಗಿದೆ.
ತೈವಾನ್ ಗಡಿಭಾಗದಲ್ಲಿ 18 ಅಣ್ವಸ್ತ್ರ ಸಿಡಿತಲೆಗಳನ್ನೊಳಗೊಂಡ ಹೆಚ್-6 ಬಾಂಬರ್‍ಗಳನ್ನು ಚೀನಾ ರವಾನಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಠೇವಣಿ ಸಂಗ್ರಹಿಸಿ ವಂಚಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ: ಅಶೋಕ್
ಚೀನಾ ಕಳೆದ ವಾರ ತೈವಾನೀಸ್ ಆಹಾರ, ಪಾನೀಯಗಳು, ಆಲ್ಕೋಹಾಲ್ ಮತ್ತು ಮೀನುಗಾರಿಕೆ ಉತ್ಪನ್ನಗಳ ಮೇಲೆ ಹೊಸ ಆಮದು ನಿಷೇಧಗಳನ್ನು ವಿಧಿಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ತೀವ್ರಗೊಂಡಿದೆ.
#China, #Sends, #18NuclearAircrafts, #TaiwanDefence,