ನವದೆಹಲಿ,ಫೆ.25-ಅಮೆರಿಕದ ಬಾಹ್ಯಾಕಾಶದಲ್ಲಿ ಕಾಣಿಸಿಕೊಂಡಿದ್ದ ದೈತ್ಯ ಬಲೂನ್ ಮಾದರಿಯ ವಸ್ತುವೊಂದು ಒಂದು ವರ್ಷದ ಹಿಂದೆ ಭಾರತದಲ್ಲೂ ಕಾಣಿಸಿಕೊಂಡಿತ್ತು ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಸಿಂಗಾಪುರಕ್ಕೆ ಸಮೀಪವಿರುವ ಭಾರತೀಯ ದ್ವೀಪಗಳಾದ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಅಸಾಮಾನ್ಯ ವಸ್ತುವೊಂದು ಹಾರಾಟ ನಡೆಸಿದ್ದವು. ಇದು ಭಾರತದ ರಕ್ಷಣಾ ವ್ಯವಸ್ಥೆಗೆ ಗಾಬರಿ ತರಿಸಿತ್ತು ಎನ್ನಲಾಗಿದೆ.
ಭಾರತ ಕ್ಷಿಪಣಿ ಪರೀಕ್ಷಾ ಪ್ರದೇಶಗಳಿಗೆ ಸಮೀಪದಲ್ಲಿರುವ ಹಾಗೂ ಮಲಕ್ಕಾ ಜಲಸಂಧಿಯಿರುವ ಪ್ರದೇಶಗಳ ಆಕಾಶದಲ್ಲಿ ದೈತ್ಯ ವಸ್ತು ಮಾದರಿಯ ಬಲೂನ್ ಹಾರಾಟ ಮಾಡುವುದನ್ನು ಅಲ್ಲಿನ ಜನರು ಸೆರೆ ಹಿಡಿದಿದ್ದರು ಎಂದು ತಿಳಿದುಬಂದಿದೆ.
ಔರಂಗಬಾದ್, ಉಸ್ಮಾನಬಾದ್ ಹೆಸರು ಬದಲಾವಣೆಗೆ ಕೇಂದ್ರ ಸಮ್ಮತಿ
ಚೀನಾದ ಕಣ್ಗಾವಲು ಭಾಗವಾಗಿದೆ ಎನ್ನಲಾದ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿದ ನಂತರ, ಭಾರತೀಯ ಅಧಿಕಾರಿಗಳು ಇದೇ ರೀತಿಯ ಬೆದರಿಕೆಗಳನ್ನು ಪತ್ತೆಹಚ್ಚುವ ಮತ್ತು ಭವಿಷ್ಯದಲ್ಲಿ ಹೆಚ್ಚು ವೇಗವಾಗಿ ಪ್ರತಿಕ್ರಿಯಿಸುವ ಸಾಮಥ್ರ್ಯವನ್ನು ಸುಧಾರಿಸಲು ಪ್ರೋಟೋಕಾಲ್‍ಗಳನ್ನು ಅಭಿವೃದ್ಧಿಪಡಿಸಲು ಸನ್ನದ್ಧರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶಂಕಿತ ಚೀನೀ ಕಣ್ಗಾವಲು ಬಲೂನ್ ಅನ್ನು ಉರುಳಿಸಲು ಅಮೆರಿಕ ಬಳಸಿದ್ದ ಸೈಡ್‍ವಿಂಡರ್ ಕ್ಷಿಪಣಿಗಿಂತ ಭಿನ್ನವಾಗಿ ಭಾರತವು ಫೈಟರ್ ಜೆಟ್‍ಗಳು ಅಥವಾ ಟ್ರಾನ್ಸ್‍ಪೋರ್ಟರ್ ಏರ್‍ಕ್ರಾಫ್ಟ್‍ಗಳಿಗೆ ಲಗತ್ತಿಸಲಾದ ಹೆವಿ ಮೆಷಿನ್ ಗನ್‍ಗಳಂತಹ ಅಗ್ಗದ ಆಯ್ಕೆಗಳನ್ನು ಬೆಂಬಲಿಸುತ್ತದೆ ಎಂದು ಅಧಿಕಾರಿಗಳು ಸೇರಿಸಿದ್ದಾರೆ.
ಅಂಡಮಾನ್, ನಿಕೋಬಾರ್ ದ್ವೀಪಗಳ ಮೇಲೆ ಕಾಣಿಸಿಕೊಂಡಿದದ ಬಲೂನ್ ಮಾದರಿಯ ವಸ್ತುವನ್ನು ಹೊಡೆದುರುಳಿಸಬೇಕೆ ಇಲ್ಲವೇ ಎಂಬ ತೀರ್ಮಾನ ಕೈಗೊಳ್ಳುವ ಮುನ್ನವೆ ಆ ವಸ್ತು ಆಕಾಶದಿಂದ ಮಾಯವಾಗಿತ್ತು ಎನ್ನಲಾಗಿದೆ.
ಭಾರತೀಯ ಅಧಿಕಾರಿಗಳು ಬಲೂನಿನ ಮೂಲದ ಬಗ್ಗೆ ಊಹಿಸಲು ಇಷ್ಟವಿರಲಿಲ್ಲ. ಭಾರತವು ಈ ವರ್ಷ G 20 ಸಭೆಗಳ ಗುಂಪನ್ನು ಆಯೋಜಿಸುತ್ತಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲದ ಹೊರೆಯನ್ನು ತಗ್ಗಿಸುವಂತಹ ಗುರಿಗಳ ಮೇಲೆ ಪ್ರಗತಿ ಸಾಧಿಸಲು ನೋಡುತ್ತಿರುವ ಕಾರಣ ರಾಜತಾಂತ್ರಿಕ ಬಿರುಕುಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ.
ಪಾಕ್ ಮತ್ತು ಶ್ರೀಲಂಕಾ ಮೇಲೆ ಹತೋಟಿ ಸಾಧಿಸಲು ಚೀನಾ ಪ್ಲಾನ್
ಅಂಡಮಾನ್,ನಿಕೋಬಾರ್ ದ್ವೀಪಗಳ ಮೇಲೆ ಬಲೂನ್ ಮಾದರಿಯ ವಸ್ತು ಹಾರಾಟದ ಬಗ್ಗೆ ಹೇಳಿಕೆ ನೀಡಲು ವಿದೇಶಾಂಗ ಸಚಿವಾಲಯವಾಗಲಿ, ಸೇನಾ ಮೂಲಗಳಾಗಲಿ ಹೇಳಿಕೆ ನೀಡಲು ನಿರಾಕರಿಸಿವೆ.
China, spy, balloon, snoop, Andaman, Nicobar, islands,