ಬೀಜಿಂಗ್,ಡಿ.25- ಗಡಿ ಭಾಗದ ಗಲಾಟೆಯ ನಡುವೆಯೂ ಚೀನಾದ ವಿದೇಶಾಂಗ ಸಚಿವ ವಾಂಗ್ಯಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸಮಗ್ರ ಅಭಿವೃದ್ದಿಗಾಗಿ ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ದವಿದೆ ಎಂದು ಹೇಳಿದ್ದಾರೆ.
ವರ್ಷದ ಪ್ರಗತಿ ಪರಿಶೀಲನೆಯ ಬಳಿಕ ಬೀಜಿಂಗ್ನ ರಾಜತಾಂತ್ರಿಕತೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚೀನಾ ಮತ್ತು ಭಾರತ ಪರಸ್ಪರ ಸಂಹವನವನ್ನು ನಿರ್ವಹಣೆ ಮಾಡುತ್ತಿದೆ. ರಾಜತಾಂತ್ರಿಕತೆ ಮತ್ತು ಸೇನೆಯಿಂದ ಸೇನೆಯ ನಡುವೆ ಚರ್ಚೆಗಳಾಗುತ್ತಿವೆ. ಉಭಯ ರಾಷ್ಟ್ರಗಳು ಗಡಿ ಭಾಗದಲ್ಲಿ ಸುಸ್ಥಿರತೆಯನ್ನು ಎತ್ತಿ ಹಿಡಿಯಲು ಬದ್ದವಾಗಿದೆ ಎಂದಿದ್ದಾರೆ.
ತಮಿಳುನಾಡು-ಪುದುಚೇರಿಯಲ್ಲಿ ಗುಡುಗು ಸಹಿತ ಭಾರೀ ಮಳೆ
ಕಮ್ಯುನಿಸ್ಟ್ ಪಾರ್ಟಿಯ ಪಾಲಿಟ್ ಬ್ಯೂರೊ ಮತ್ತು ಸಂಸದರು ಆಗಿರುವ ವಾಂಗ್ಯಿ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ಬದ್ದತೆ ಉತ್ತಮವಾಗಿದೆ. ಸರಿಯಾದ ದಿಕ್ಕಿನಲ್ಲಿ ಸಮಗ್ರ ಅಭಿವೃದ್ಧಿಗೆ ನಾವು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರಿಗರಿಗೆ ಕಾದಿದೆಯಾ ಬಿಗಿ ಕ್ರಮದ ಭಯ..? ನಾಳೆ ಮಹತ್ವದ ಕಾವಿಡ್ ಸಭೆ
2020ರ ಮೇನಲ್ಲಿ ಲಡಾಕ್ನಲ್ಲಿ ಮತ್ತು ಇದೇ ವರ್ಷದ ಡಿ.9ರಂದು ಅರುಣಾಚಲಪ್ರದೇಶದ ತವಾಂಗ್ನಲ್ಲಿ ಚೀನಾದ ಯೋಧರು ಭಾರತದ ವಾಸ್ತವ ಗಡಿರೇಖೆಯನ್ನು ನುಗ್ಗಲು ಯತ್ನಿಸಿದ್ದರು. ಭಾರತೀಯ ಯೋಧರು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದರು. ಇದು ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿತ್ತು.
#China, #stands, #readytowork #India, #Chinese, #foreignminister, #WangYi,