ಥೈವಾನ್‍ಗೆ ಮೇಲೆ ಯುದ್ಧದ ಕಾರ್ಮೋಡ

Social Share

ತೈಪೆ, ಆ.4- ಅಮೆರಿಕದ ಸ್ಪೀಕರ್ ಸ್ಯಾನ್ಸಿ ಪೆಲೋಸಿ ಭೇಟಿ ನಂತರ ಕೆರಳಿರುವ ಚೀನಾ ಥೈವಾನ್ ಮೇಲೆ ಮುಗಿಬೀಳಲು ತುದಿಗಾಲ ಮೇಲೆ ನಿಂತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಭಾರೀ ಪ್ರತಿರೋಧದ ನಡುವೆ ಅಮೆರಿಕದ ಸ್ಪೀಕರ್ ಸ್ಯಾನ್ಸಿ ಅವರ ನೇತೃತ್ವದ ನಿಯೋಗ ಥೈವಾನ್‍ಗೆ ಭೇಟಿ ನೀಡಿ ರಾಜಧಾನಿ ತೈಪೆಗೆ ಭೇಟಿ ನೀಡಿ ಅಧ್ಯಕ್ಷೆ ಇಂಗ್ ಮೆನ್ ಅವರನ್ನು ಭೇಟಿ ಮಾಡಿ ಪ್ರಜಾಪ್ರಭುತ್ವದ ರಕ್ಷಣೆಗೆ ನಾವು ನಿಮ್ಮೊಂದಿಗಿದ್ದೇವೆ. ಅಮೆರಿಕ ನಿಮ್ಮ ರಾಷ್ಟ್ರಕ್ಕೆ ರಕ್ಷಾಕವಚವಾಗಲಿದೆ ಎಂದು ತಿಳಿಸಿದ ನಂತರ ಚೀನಾ ಕೆಂಡಾಮಂಡಲವಾಗಿದೆ.

ಅಮೆರಿಕದ ಯುದ್ಧನೌಕೆಗಳು ಥೈವಾನ್‍ನ ಉತ್ತರದ ಕಡಲಲ್ಲಿ ಬೀಡುಬಿಟ್ಟಿದ್ದು, ಅತ್ತ ಚೀನಾ ಕೂಡ ತನ್ನ ಫೈಟರ್ ಜೆಟ್‍ಗಳನ್ನು ಥೈವಾನ್‍ನ ವಾಯು ಪ್ರದೇಶದೊಳಗೆ ನುಗ್ಗಿಸಿ ಎಚ್ಚರಿಕೆ ನೀಡಿದೆ.

ಇದಲ್ಲದೆ, ದ್ವೀಪರಾಷ್ಟ್ರದ ಸುತ್ತಲೂ ತನ್ನ ಪಡೆಗಳನ್ನು ನಿಲ್ಲಿಸಿ ದಾಳಿಯ ಮುನ್ಸೂಚನೆ ನೀಡಿದೆ. ಥೈವಾನ್ ತನ್ನ ರಾಷ್ಟ್ರದ ಭಾಗ ಎಂದು ವಾದಿಸುತ್ತಿರುವ ಚೀನಾ ಅಮೆರಿಕದ ನಿಲುವನ್ನು ಕಟುವಾಗಿ ಖಂಡಿಸಿ ತಕ್ಕ ಎದುರೇಟು ನೀಡಲು ಸಜ್ಜಾಗುತ್ತಿದೆ.

ಸ್ಯಾನ್ಸಿ ಅವರು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಂತೆ ಚೀನಾದ ಈ ಆಕ್ರೋಶಭರಿತ ನಡೆ ಭಾರೀ ಆತಂಕ ಮೂಡಿಸಿದೆ.
ಚೀನಾದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಹಿಂದೆ ಹೆಜ್ಜೆ ಇಡುವುದಿಲ್ಲ. ಪ್ರಜಾಪ್ರಭುತ್ವಕ್ಕಾಗಿ ನಾವು ಮತ್ತು ನಮ್ಮ ರಕ್ಷಣೆಗಾಗಿ ನಾವು ಸಜ್ಜಾಗಿದ್ದೇವೆ ಎಂದು ದಿಟ್ಟ ಉತ್ತರ ನೀಡಿದ್ದಾರೆ.

Articles You Might Like

Share This Article