ತೈಪೆ, ಆ.11- ಚೀನಾ ಯೋಧರು ತೈವಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹರಡುತ್ತಿದ್ದು, ಯುದ್ಧ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತೈವಾನ್ನ ಪೂರ್ವ ಕರಾವಳಿ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಯಾವಾಗ ಬೇಕಾದರೂ ಚೀನಾದ ಯೋಧರು ನುಗ್ಗಬಹುದು ಎಂದು ಹೇಳಲಾಗುತ್ತಿದೆ.
ಅಕ್ಕ-ಪಕ್ಕದ ದೇಶಗಳಾದ ಜಪಾನ್, ದಕ್ಷಿಣ ಕೋರಿಯಾ ಸೇರಿದಂತೆ ಯಾರೂ ಕೂಡ ನಮಗೆ ಪ್ರತಿರೋಧ ಒಡ್ಡಬಾರದು ಎಂಬ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಈ ದ್ವೀಪ ರಾಷ್ಟ್ರದ ಸುತ್ತ ಫೈಟರ್ ಜಟ್ಗಳನ್ನು ಹಾರಾಡುತ್ತಿವೆ. ಸುಮಾರು 370 ಫೈಟರ್ ಜಟ್ಗಳು, 14 ಸಮರ ನೌಕೆಗಳು ತೈವಾನ್ಗೆ ಆಘಾತ ನೀಡಲು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಷ್ಯಾ, ಕಂಬೋಡಿಯಾ ಸೇರಿದಂತೆ ಹಲವು ರಾಷ್ಟ್ರಗಳ ರಾಜ್ಯ ತಾಂತ್ರಿಕರಿಗೆ ತನ್ನ ಕಾರ್ಯಚರಣೆಗೆ ಅಡ್ಡ ಬರದಂತೆ ಚೀನಾ ಈಗಾಗಲೇ ಸೂಚನೆ ನೀಡಿದೆ. ಪೀಪಲ್ ಲಿಬರೇಷನ್ ಆರ್ಮಿ(ಪಿಎಲ್ಎ) ಕೂಡ ಈಗಾಗಲೇ ತೈವಾನ್ನನ್ನು ವಶಪಡಿಸಿಕೊಳ್ಳಲು ತಾಲೀಮು ನಡೆಸುತ್ತಿದೆ.
ಚೀನಾ ಅಧ್ಯಕ್ಷ ಜಿಂಗ್ಪಿಂಗ್ ಅವರು ಸದ್ಯದಲ್ಲೇ ಆದೇಶ ಹೊರಡಿಸುವ ಸಾಧ್ಯತೆ ಇದ್ದು, ಈಗಾಗಲೇ ಸೂಚನೆ ಮಾದರಿಯಲ್ಲಿ ಬಿಳಿ ಹಾಳೆಯನ್ನು ತೋರಿಸಲಾಗಿದೆ.
ಅಮೆರಿಕ ಕೆಂಡ: ತೈವಾನ್ ಮೇಲೆ ದಾಳಿ ನಡೆಸಿದರೆ ನಾವು ಅದಕ್ಕೆ ಪ್ರತಿ ಉತ್ತರ ನೀಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಜೊ ಬಿಡನ್ ಈಗಾಗಲೇ ಹೇಳಿದ್ದಾರೆ. ಚೀನಾದ ಅಕ್ರಮಕಾರಿ ದಬ್ಬಾಳಿಕೆ ನೀತಿಯನ್ನು ಜಾಗತಿಕ ಶಕ್ತಿ ಮೂಲಕ ಮಟ್ಟ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.