ಬೀಜಿಂಗ್, ಮಾ. 5 -ಮುಂದಿನ ಆರ್ಥಿಕ ವರ್ಷಕ್ಕೆ ತನ್ನ ರಕ್ಷಣಾ ಬಜೆಟ್‍ನಲ್ಲಿ 7.2 ಶೇಕಡಾ ಹೆಚ್ಚಳವನ್ನು ಚೀನಾ ಘೋಷಿಸಿದೆ, ಕಳೆದ 2022ಕ್ಕೆ ಹೋಲಿಸಿದರೆ ಕೇವಲ ಶೇಕಡಾ 1 ರಷ್ಟು ಹೆಚ್ಚಾಳವಾಗಿದೆ. ದೇಶದ ಜಿಡಿಪಿ ಶೇ5.1ಕ್ಕೆ ತಲುಪುವ ನಿರೀಕ್ಷೆ ಇದೆ. ಆರ್ಥಿಕ ಸಂಕಷ್ಟದ ನಡುವೆಯೂ ಸೇನೆಗೆ ಹೆಚ್ಚಿನ ಅನುದಾನ ನೀಡಲಾಗಿದೆ.
ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಬಜೆಟ್‍ನಲ್ಲಿ ಎಂದು ವ್ಯಾಕ್ಯಾನಿಸಲಾಗಿದ್ದು ಸತತ 8ನೇ ವರ್ಷವೂ ಏರಿಕೆ ಪ್ರಮಾಣ ಮುಂದುವರೆದಿದೆ ಅಂಕಿ ಅಂಶಗಳ ಪ್ರಕಾರ 1.55 ಟ್ರಿಲಿಯನ್ ಯುವಾನ್ (224 ಶತಕೋಟಿ ಡಾಲರ್) ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಭೂ ಸೇನೆ ಜೊತೆಗೆ, ಚೀನಾ ವಿಶ್ವದ ಅತಿದೊಡ್ಡ ನೌಕಾಪಡೆಯನ್ನು ಹೊಂದಿದೆ ಮತ್ತು ಇತ್ತೀಚೆಗೆ ತನ್ನ ಮೂರನೇ ವಿಮಾನವಾಹಕ ನೌಕೆಯನ್ನು ಸೇರ್ಪಡೆ ಮಾಡಿದೆ.
ಇದಲ್ಲದೆ ಇಂಡೋ-ಪೆಸಿಫಿಕ್‍ನಲ್ಲಿ ಅತಿದೊಡ್ಡ ವಾಯು ಪಡೆಯನ್ನು ಹೊಂದಿದೆ, ಅದರ ಅರ್ಧಕ್ಕಿಂತ ಹೆಚ್ಚು ಯುದ್ಧ ವಿಮಾನಗಳು ನಾಲ್ಕನೇ ಅಥವಾ ಐದನೇ ತಲೆಮಾರಿನವು ಎಂದು ಹೇಳಿದೆ.
ದಶಪಥ ಹೆದ್ದಾರಿಗೆ ದೇವೇಗೌಡರ ಹೆಸರು ನಾಮಕರಣ ಮನವಿಗೆ ಪರಿಶೀಲನೆ
ಬಾಂಬರ್‍ಗಳು, ಸುಧಾರಿತ ಹಡಗುಗಳು ಮತ್ತು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳ ಜೊತೆಗೆ ಕ್ಷಿಪಣಿಗಳ ಬೃಹತ್ ಸಂಗ್ರಹವನ್ನು ಚೀನಾ ಹೊಂದಿದೆ ಎಂದು ಅಂತರಾಷ್ಟ್ರೀಯ ವಿದೇಶಾಂಗ ಪರಿಣಿತರು ಅಂದಾಜಿಸಿದ್ದಾರೆ.
China, Increase, Defense, Budget, Security,