ಭಾರತದಲ್ಲಿ ನಡೆಯುವ IMF ದುಂಡು ಮೇಜಿನ ಸಭೆಗೆ ಚೀನಾ ಹಣಕಾಸು ಸಚಿವರು

Social Share

ನವದೆಹಲಿ,ಫೆ.6-ಇದೇ ತಿಂಗಳು ಭಾರತದಲ್ಲಿ ನಡೆಯಲಿರುವ ಸಾಲದಾತರು ಮತ್ತು ಸಾಲ ಪಡೆಯುವ ದೇಶಗಳ ದುಂಡು ಮೇಜಿನ ಸಭೆಯಲ್ಲಿ ಚೀನಾ ಹಣಕಾಸು ಸಚಿವ ಹಾಗೂ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ತಿಳಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಷಯ ಖಚಿತಪಡಿಸಿರುವ ಅವರು, ಕಡಿಮೆ ಆದಾಯದ ದೇಶಗಳು ಸಾಲ ಪಾವತಿಸಲು ಸಾಧ್ಯವಾಗದ ಕಾರಣ ಚೀನಾ ತನ್ನ ಕೆಲವು ನೀತಿಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು

ನಾವು ಎಲ್ಲಾ ಸಾಲಗಾರರನ್ನು, ಮುಂದುವರಿದ ಆರ್ಥಿಕತೆಯ ಸಾಂಪ್ರದಾಯಿಕ ಸಾಲದಾತರು, ಚೀನಾ, ಸೌದಿ ಅರೇಬಿಯಾ, ಭಾರತ ಮತ್ತು ಖಾಸಗಿ ವಲಯದಂತಹ ಹೊಸ ಸಾಲಗಾರರನ್ನು ತರಲು ಮತ್ತು ಸಾಲಗಾರ ದೇಶಗಳೊಂದಿಗೆ ಚರ್ಚಿಸುವ ಉದ್ದೇಶದಿಂದ ನಾವು ದುಂಡು ಮೇಜಿನ ಸಭೆ ಆಯೋಜಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಐ 20 ಹಣಕಾಸು ಅಧಿಕಾರಿಗಳ ಗುಂಪಿನ ಸಭೆಯ ಹಿನ್ನೆಲೆಯಲ್ಲಿ ಇಂತಹ ಮೊದಲ ಕೂಟವು ಈ ತಿಂಗಳು ನಡೆಯಲಿದೆ ಎಂದು ಜಾರ್ಜಿವಾ ಹೇಳಿದರು.

ಬಿಜೆಪಿಗರಿಗೆ ಶಶಿ ತರೂರು ತಿರುಗೇಟು

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರಾಗಿರುವ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಯ ಮೊದಲ ವ್ಯಕ್ತಿ ಜಾರ್ಜಿವಾ, ಸಾಮಾಜಿಕ ಸೇವೆಗಳಲ್ಲಿ ಕಡಿತ ಮತ್ತು ಇತರ ಪರಿಣಾಮಗಳನ್ನು ತಪ್ಪಿಸಲು ಭಾರೀ ಸಾಲದ ರಾಷ್ಟ್ರಗಳಿಗೆ ಸಾಲ ಪರಿಹಾರವು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

China, finance minister, central-bank, governor, attend, debt, roundtable, India,

Articles You Might Like

Share This Article