ಕಳೆದೊಂದು ವರ್ಷದಿಂದ ಚೀನಾದಲ್ಲಿ ಕ್ಷೀಣಿಸುತ್ತಿದೆ ಜನಸಂಖ್ಯೆ ..!

Social Share

ಬೀಜಿಂಗ್,ಜ.17- ವಿಶ್ವದ ಅತ್ಯಂತ ದೊಡ್ಡ ಜನಸಂಖ್ಯೆ ಹೊಂದಿರುವ ಚೀನಾ ದೇಶದಲ್ಲಿ ಕಳೆದ ಒಂದು ವರ್ಷದಿಂದ ಜನಸಂಖ್ಯೆ ಪ್ರಮಾಣ ಗಣನೀಯವಾಗಿ ಕುಸಿತಗೊಳ್ಳತೊಡಗಿದೆ ಎನ್ನಲಾಗಿದೆ.

1961ರಿಂದ ವಿಶ್ವದ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಖ್ಯಾತಿಯನ್ನು ಉಳಿಸಿಕೊಂಡು ಬಂದಿದ್ದ ಚೀನಾದಲ್ಲಿ ಕಳೆದ ವರ್ಷ ಸಂಭವಿಸಿದ ಆಪಾರ ಸಾವು-ನೋವಿನ ಘಟನೆಗಳ ನಂತರ ಅಲ್ಲಿನ ಜನಸಂಖ್ಯೆ ಕ್ಷೀಣಿಸತೊಡಗಿದೆ.

1,4126 ಶತಕೋಟಿ ಜನಸಂಖ್ಯೆ ಹೊಂದಿದ್ದ ಚೀನಾದಲ್ಲಿ ಕಳೆದ ವರ್ಷ 1.4118 ಶತಕೋಟಿಗೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೋ ವರದಿ ಪ್ರಕಟಿಸಿದೆ.

ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

ಚೀನಾದಲ್ಲಿ ತಾಯಂದಿರು ಕಳೆದ ವರ್ಷ 9.56 ಮಿಲಿಯನ್ ಮಕ್ಕಳನ್ನು ಹೊಂದಿದ್ದರು, 2021 ರಲ್ಲಿ 10.62 ಮಿಲಿಯನ್‍ನಿಂದ 9.98 ಶೇಕಡಾ ಇಳಿಕೆಯಾಗಿದೆ. ರಾಷ್ಟ್ರೀಯ ಜನನ ಪ್ರಮಾಣವು 2022 ರಲ್ಲಿ ಪ್ರತಿ 1,000 ಜನರಿಗೆ 6.77 ಜನನಗಳ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ, ಇದು 7.52 ರಲ್ಲಿ ಕಡಿಮೆಯಾಗಿದೆ.

ಜನಸಂಖ್ಯೆಯ ಕಡಿತವು ಹೆಚ್ಚಿನ ಮಕ್ಕಳ ಪಾಲನೆ ವೆಚ್ಚಗಳು, ಮದುವೆ ಮತ್ತು ಕುಟುಂಬದ ಬಗ್ಗೆ ಹೊಸ ತಲೆಮಾರಿನ ಬದಲಾಗುತ್ತಿರುವ ದೃಷ್ಟಿಕೋನಗಳು, ಚೀನಾದ ಕಟ್ಟುನಿಟ್ಟಾದ ಕರೋನ ವೈರಸ್ ನಿಯಮಗಳ ಮಧ್ಯೆ ನಿಧಾನಗತಿಯ ಆರ್ಥಿಕತೆ ಮತ್ತು ಆರ್ಥಿಕ ಬೆಳವಣಿಗೆಯ ಕುಸಿತ ಸೇರಿದಂತೆ ಹಲವಾರು ಅಂಶಗಳಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯ ಲೋಪ : ಇಬ್ಬರು ಕಾನ್ಸ್‌ಸ್ಟೇಬಲ್‌ಗಳ ಅಮಾನತು

ಚೀನಾದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಮುಂದಿನ ಒಂದು ವರ್ಷದಲ್ಲಿ ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಲಿರುವ ರಾಷ್ಟ್ರವಾಗಿ ಹೊರ ಹೊಮ್ಮುವ ಸಾಧ್ಯತೆಗಳಿವೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ.

China, population, shrinks,

Articles You Might Like

Share This Article