ಟೋಕಿಯೊ.ಆ.5- ತೈವಾನ್ ಭೂ ಪ್ರದೇಶದ ಮೇಲೆ ಚೀನಾ ಕ್ಷಿಪಣಿ ದಾಳಿ ನಡೆಸಿರುವುದನ್ನು ಜಪಾನ್ ಖಂಡಿಸಿದೆ.
ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ.
ಚೀನಾ ಸಮರಾಭ್ಯಾಸ ಹೆಸರಿನಲ್ಲಿ ಐದು ಕ್ಷಿಪಣಿಗಳು ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಬಿದ್ದಿವೆ ಎಂದು ಅವುಗಳಲ್ಲಿ ನಾಲ್ಕು ತೈವಾನ್‍ನ ಮುಖ್ಯ ದ್ವೀಪದ ಮೇಲೆ ಹಾರಿವೆ ಎಂದು ಶಂಕಿಸಲಾಗಿದೆ. ಚೀನಾದ ಈ ಕ್ರಮ ನಮ್ಮ ಪ್ರದೇಶ ಮತ್ತು ಅಂತರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಪ್ರಧಾನಿ ಫ್ಯೂಮಿಯೊ ಕಿಶಿಡಾ ಸುದ್ದಿಗಾರರಿಗೆ ತಿಳಿಸಿದರು.
ತೈವಾನ್,ಕೊರಿಯಾ ನಂತರ ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಜಪಾನ್‍ಗೆ ಭೇಟಿ ನೀಡಿದ್ದು ಟೋಕಿಯೊದಲ್ಲಿ ಗೌರವಾರ್ತ ಏರ್ಪಡಿಸಿದ್ದ ಉಪಹಾರ ಬೇಟಿ ಮತುಕತೆ ನಂತರ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮಾತನಾಡಿದರು.
ಸೇನಾ ಕವಾಯತುಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಹೇಳಿದ್ದೇವೆ, ಉತ್ತರ ಕೊರಿಯಾ, ಚೀನಾ ಮತ್ತು ರಷ್ಯಾಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಪರಮಾಣು ಮುಕ್ತ ಪ್ರಪಂಚದ ಪ್ರಯತ್ನಗಳು ಸೇರಿದಂತೆ ಭೌಗೋಳಿಕ ರಾಜಕೀಯ ವಿಷಯಗಳ ಕುರಿತು ತಾನು ಮತ್ತು ಪೆಲೋಸಿ ಚರ್ಚಿಸಿದ್ದೇವೆ ಎಂದರು.
ಜಪಾನ್‍ನ ದಕ್ಷಿಣದ ಓಕಿನಾವಾ ಪ್ರದೇಶದ ಭಾಗಗಳು ತೈವಾನ್ ಸಮೀಪದಲ್ಲಿವೆ, ಟೋಕಿಯೊ ಮತ್ತು ಬೀಜಿಂಗ್ ನಡುವಿನ ದೀರ್ಘಕಾಲದ ವಿವಾದದ ಕೇಂದ್ರದಲ್ಲಿರುವ ದ್ವೀಪಗಳು . ವಿಶೇಷ ಆರ್ಥಿಕ ವಲಯ ಪ್ರಾದೇಶಿಕ ಸಮುದ್ರ ನೀರಿನ ಮಿತಿಗಳನ್ನು ಮೀರಿ ವಿಸ್ತಾರವಾಗಿದೆ.