ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ

Social Share

ಬೀಜಿಂಗ್, ಅ.22- ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕ್ಸಿ ಜಿನ್‍ಪಿಂಗ್ ಪುನರಾಯ್ಕೆಯಾಗಿದ್ದು, ತನ್ಮೂಲಕ ಚೀನಾದ ಅಧ್ಯಕ್ಷರಾಗಿ ಮೂರನೇ ಧಿಅವಗೆ ಮುಂದುವರೆದಿದ್ದಾರೆ. ಕ್ಸಿ ಜಿನ್‍ಪಿಂಗ್‍ಗಾಗಿ ಪಕ್ಷದ ಸಂವಿಧಾನವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.

68 ವರ್ಷ ಮೇಲ್ಪಟ್ಟವರು ಅಧಿಕಾರದ ರಾಜಕಾರಣದಿಂದ ನಿವೃತ್ತರಾಗಬೇಕು, ಎರಡು ಅವಧಿಗೆ ಮಾತ್ರ ಸಂವಿಧಾನಿಕ ಹುದ್ದೆಗಳನ್ನು ನಿಭಾಯಿಸಬಹುದು ಎಂಬ ನಿಯಮ ಬದಲಾವನೆಯಾಗಿದೆ. 69 ವರ್ಷದ ಕ್ಸಿ ಜಿನ್‍ಪಿಂಗ್ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಈಗಾಗಲೇ ಎರಡು ಅವಧಿಗೆ ಅಧ್ಯಕ್ಷರಾಗಿ ಕ್ಸಿ ಆಡಳಿತ ನಡೆಸಿದ್ದಾರೆ. ಇತ್ತೀಚೆಗೆ ಭ್ರಷ್ಟಚಾರದ ಆರೋಪಗಳಿಗಾಗಿ ಚೀನಾದ ಉನ್ನತಾಧಿಕಾರಿಗಳು ಹಾಗೂ ಸೇನೆಯ ಆಯಕಟ್ಟಿನ ಪ್ರಮುಖರನ್ನು ಶಿಕ್ಷೆಗೆ ಗುರಿ ಪಡಿಸುವ ತೀರ್ಪುಗಳು ಪ್ರಕಟಗೊಂಡಿದ್ದವು. ಅದರ ಬೆನ್ನಲ್ಲೆ ಸಿಡಿದೆದ್ದ ಚೀನಾದ ಪ್ರಮುಖ ಸೇನೆ ಪಿಪಲ್ಸ್ ಲಿಬರೇಷನ್ ಆರ್ಮಿ ಅಧ್ಯಕ್ಷರನ್ನು ಗೃಹ ಬಂಧನದಲ್ಲಿಟ್ಟಿದೆ ಎಂಬ ವದ್ಧಂತಿಗಳು ಹರಡಿದ್ದವು. ಎಲ್ಲವನ್ನೂ ಹುಸಿ ಮಾಡಿ ನಿನ್ನೆ ಮುಕ್ತಾಯಗೊಂಡ ಪಕ್ಷದ ಸಮಾವೇಶದಲ್ಲಿ ಕ್ಸಿ ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಮಾವೋ ಝೆಡೊಂಗ್ ನಂತರ ಮೂರನೇ ಅವಧಿಗೆ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಹಾಗೂ ಅಧಿಕಾರ ವಹಿಸಿಕೊಂಡ ದಿನದಿಂದ ಪ್ರಭಾವಿಯಾಗಿಯೇ ಮುಂದುವರೆಯುತ್ತಿರುವ ಕ್ಸಿ ಪಕ್ಷದಲ್ಲಿ ತಮ್ಮ ಉಕ್ಕಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ.

ಪನೋರಮಾ ಚಿತ್ರೋತ್ಸವದಲ್ಲಿ ಕನ್ನಡದ 3 ಚಿತ್ರಗಳ ಪ್ರದರ್ಶನ

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಕೇಂದ್ರ ಸಮಿತಿಯ ಒಂದು ವಾರಗಳ ಸಮಾವೇಶ ಶನಿವಾರ ಸಮಾರೋಪವಾಗಿದೆ. ಸಮಾವೇಶದಲ್ಲಿ ಕ್ಸಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಸಮಾವೇಶದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್ ನಿಯಂತ್ರಣದ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲನೆ ಮಾಡಿ ಭಾಗವಹಿಸಿದ್ದರು.

ಅದರಲ್ಲಿ ಪಕ್ಷದ ಕೇಂದ್ರ ಸಮಿತಿಗೆ 205ಕ್ಕೂ ಹೆಚ್ಚು ಹಿರಿಯ ನಾಯಕರನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿ ಪಾಲಿಟ್ ಬ್ಯೂರೋವನ್ನು ಚುನಾಯಿಸಲಿದ್ದು, ಪಾಲಿಟ್ ಬ್ಯೂರೋ ಸರ್ಕಾರ ನಡೆಸುವ ಕೇಂದ್ರ ಸಮಿತಿಯನ್ನು ಆಯ್ಕೆ ಮಾಡಲಿದೆ.

ರಾಷ್ಟ್ರ್ದ ಎರಡನೇ ಅಧಿಕೃತ ಮತ್ತು ಆರ್ಥಿಕ ಸುಧಾರಣೆಗಳ ಪ್ರತಿಪಾದಕರಾಗಿದ್ದ ಲೀ ಕೆಕಿಯಾಂಗ್‍ರನ್ನು ರಾಷ್ಟ್ರದ ಸರ್ವಶಕ್ತ ಪಾಲಿಟ್‍ಬ್ಯುರೊ ಸ್ಥಾಯಿ ಸಮಿತಿಯಿಂದ ಕೈ ಬಿಡಲಾಗಿದೆ. ಹೊರಗುಳಿದ ಏಳು ಸದಸ್ಯರಲ್ಲಿ ಲೀ ಕೆಕಿಯಾಂಗ್ ಕೂಡ ಸೇರಿದ್ದಾರೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ಶನಿವಾರ ಬಿಡುಗಡೆ ಮಾಡಲಾದ 205 ಸದಸ್ಯರ ಕೇಂದ್ರ ಸಮಿತಿ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಪಕ್ಷದ ಸಂವಿಧಾನಕ್ಕೆ ಪ್ರಮುಖ ತಿದ್ದುಪಡಿ ಮಾಡಲಾಗಿದೆ. ಅದು ಚೀನಾದ ಅಧ್ಯಕ್ಷರ ಸ್ಥಾನಮಾನವನ್ನು ಇನ್ನಷ್ಟು ಹೆಚ್ಚಿಸಲಿದೆ.

ತಿದ್ದುಪಡಿಯ ಸಾರಂಶವನ್ನು ತಕ್ಷಣವೇ ಬಿಡುಗಡೆ ಮಾಡಿಲ್ಲ, ಆದರೆ ಅನುಮೋದನೆಗೂ ಮೊದಲು ನಿರ್ಣಯದ ತಾರ್ಕಿಕತೆಯನ್ನು ಅನೌನ್ಸರ್ ಓದಿದ್ದಾರೆ. ಮಿಲಿಟರಿ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ಪಕ್ಷದ ಅಕಾರವನ್ನು ಬಲಪಡಿಸುವಲ್ಲಿ ಕ್ಸಿ ಮತ್ತು ಅವರ ಸಾಧನೆಗಳನ್ನು ಅನೌನ್ಸರ್ ಪದೇ ಪದೇ ಪ್ರಸ್ತಾಪಿಸಿದರು.

Articles You Might Like

Share This Article