ಫಿಲಿಫೈನ್ಸ್ ನಲ್ಲಿ ಚೀನಾ ಉಪಗ್ರಹದ ಅವಶೇಷ ಪತ್ತೆ, ಮತ್ತೊಮ್ಮೆ ಜಾಗತಿಕ ಟೀಕೆಗೆ ಗುರಿಯಾದ ಡ್ರಾಗನ್ಸ್

Social Share

ಮನೀಲ, ಆ.1- ಬಾಹ್ಯಾಕಾಶಕ್ಕೆ ಕಕ್ಷೆಗೆ ಉಪಗ್ರಹ ಸೇರ್ಪಡೆಯಾದ ಬಳಿಕ ಕಳಚಿ ಬೀಳುವ ಸರಕು ಸಾಗಾಣಿಕೆಯ ವಾಹನದ ಅವಶೇಷಗಳ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿಸಿ ಚೀನಾ ಮತ್ತೊಮ್ಮೆ ಜಾಗತಿಕ ಟೀಕೆಗೆ ಗುರಿಯಾಗಿದೆ.

ಚೀನಾ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆಯ ದೂರ ಪ್ರಯಾಣದ 5ಬಿ ಉಪಗ್ರಹ ಭಾನುವಾರ ಅಂತಿಮ ಹಂತದಲ್ಲಿ ಕಕ್ಷೆಗೆ ಸೇರ್ಪಡೆಯಾಗಿದೆ. ಅದಕ್ಕೆ ಜೊತೆಯಾಗಿ ಹೋಗಿದ್ದ ಬೂಸ್ಟರ್ ವಾಹನ ಕಳಚಿ ನಿಯಂತ್ರಣ ತಪ್ಪಿ ಫಿಲಿಫೈನ್ಸ್ ಭಾಗದಲ್ಲಿ ಬಿದ್ದಿದೆ.

ಫಿಲಿಫೈನ್ಸ್‍ನ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿ ಮಾರ್ಕ್ ಟಾಲಂಪಾಸ್ ಅವರ ಪ್ರಕಾರ ಚೀನಾಗೆ ಸೇರಿದ ಉಪಗ್ರಹದ ಬೂಸ್ಟರ್ ವಾಹನದ ಅವಶೇಷಗಳು ಫಿಲಿಫೈನ್ಸ್‍ನ ಪಲವಾನ ರಾಜ್ಯದಲ್ಲಿ ಬಿದ್ದಿವೆ. ಜನರಿಗೆ ಹತ್ತಿರ ಹೋಗದಂತೆ ಸೂಚನೆ ನೀಡಲಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಈ ರೀತಿ ಉಪಗ್ರಹ ವಾಹನದ ಅವಶೇಷಗಳು ಪತ್ತೆಯಾದರೆ ತಕ್ಷಣವೇ ಸ್ಥಳೀಯ ಆಡಳಿತಕ್ಕೆ ತಿಳಿಸುವಂತೆ ಸೂಚಿಸಲಾಗಿದೆ.

ಅವಶೇಷ ಬಿದ್ದಿರುವುದರಿಂದ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಚೀನಾ ಉಪಗ್ರಹಗಳ ಅವಶೇಷಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದಕ್ಕೆ ಎರಡನೆ ಬಾರಿ ಟೀಕೆಗೆ ಗುರಿಯಾಗುತ್ತಿದೆ. ಈ ಮೊದಲು 2016ರಲ್ಲಿ ಬಿಜಿಂಗ್‍ನ ಬಾಹ್ಯಾಕಾಶ ಸಂಸ್ಥೆಯ ಟಿಯಾಂಗಾಂಗ್-1ನಿಲ್ದಾಣ ಫೆಸಿಫಿಕ್ ಒಷನ್‍ಗೆ ಅಪ್ಪಳಿಸಿತ್ತು. ಅದರ 18-ಟೊನ್ ರಾಕೇಟ್ ನಿಯಂತ್ರಣ ತಪ್ಪಿ 2020ರ ಮೇ ತಿಂಗಳಿನಲ್ಲಿ ಭಾರತೀಯ ಸಮುದ್ರ ಭಾಗದ ಮೇಲೆ ಬಿದ್ದಿತ್ತು.

ಈ ಪ್ರಕರಣಗಳಲ್ಲಿ ಚೀನಾ ಟೀಕೆ ಎದುರಿಸಬೇಕಾಯಿತು. 2017ರಲ್ಲಿ ಬಾಹ್ಯಾಕಾಶದಲ್ಲಿನ ಉಪಗ್ರಹದ ಅವಶೇಷಗಳನ್ನು ನಾಶಪಡಿಸಲು ಕ್ಷಿಪಣಿಯನ್ನು ಬಳಕೆ ಮಾಡಿದ್ದಕ್ಕಾಗಿಯೂ ಚೀನಾ ಟೀಕೆಗೆ ಗುರಿಯಾಗಿತ್ತು. ಈಗ ಜುಲೈ 24ರಂದು ಉಡಾವಣೆ ಮಾಡಿದ್ದ 5ಬಿ ಉಪಗ್ರಹ ಅತ್ಯಂತ ಪ್ರಬಲ ಅಸ್ತ್ರ ಎಂದು ಹೇಳಲಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಮೂವರು ವಾಸಿಸಬಹುದಾದ ಈ ಉಪಗ್ರಹ ಹೊತ್ತೊಯ್ದ ಬೂಸ್ಟರ್ ವಾಹನ ನಿಯಂತ್ರಣ ಇಲ್ಲದೆ ಭೂಮಿಯತ್ತ ಅಪ್ಪಳಿಸಿದೆ.

ಚೀನಾ ತನ್ನ ಉಪಗ್ರಹ ಬಿದ್ದಿರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಅವಶೇಷದ ಮುನ್ಸೂಚನೆ ಕುರಿತು ಅಧಿಕೃತ ಮಾಹಿತಿ ಹಂಚಿಕೆಯಾಗಿಲ್ಲ ಎಂದು ಫಿಲಿಫೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ಅವಶೇಷಗಳ ನಿರ್ವಹಣೆಯಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ ಎಂದು ಅಮೆರಿಕಾದ ನಾಸಾ ತಿಳಿಸಿದೆ.

Articles You Might Like

Share This Article