ಚಿತ್ರಕಲಾ ಪರಿಷತ್ತಿನಲ್ಲಿ ವನ್ಯಜೀವಿಗಳ ಪ್ರಪಂಚ ಅನಾವರಣ

Social Share

ಬೆಂಗಳೂರು,ನ.7- ಕೆನರಾ ಬ್ಯಾಂಕ್ನ ನಿವೃತ್ತ ಅಧಿಕಾರಿ ಹಾಗೂ ಹವ್ಯಾಸಿ ಛಾಯಾಗ್ರಾಹಕ ಸೂರ್ಯ ಪ್ರಕಾಶ್ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ನವೆಂಬರ್ 10 ರಿಂದ 13ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ನಡೆಯಲಿರುವ ವೈಲ್ಡï ಮೂಮೆಂಟ್ಸ್ ಪ್ರದರ್ಶನವನ್ನು ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ .ಎನ್ .ಜಯಕುಮಾರ್ ಉದ್ಘಾಟಿಸಲಿದ್ದಾರೆ.

ಪ್ರಧಾನಿ ಬಂದ್ರೆ ಮಾತ್ರ ಬೆಂಗಳೂರಿನ ರಸ್ತೆಗಳಿಗೆ ಮುಕ್ತಿನಾ..?

ಪತ್ರಕರ್ತ ರವೀಂದ್ರ ಭಟ್, ಡಾ.ಅಜಿತ್ ಕೆ ಹುಲ್ಗೋಲ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
2013ರಲ್ಲಿ ಕೆನರಾ ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಸೂರ್ಯ ಪ್ರಕಾಶ್ ಕೆ.ಎಸ್ ಅವರು ವನ್ಯಜೀವಿ ಛಾಯಾಗ್ರಹಣದತ್ತ ತಮ್ಮನ್ನು ತೊಡಗಿಸಿಕೊಂಡರು. ನಿಸರ್ಗದ ಛಾಯಾಗ್ರಹಣದ ವಿಶ್ವದ ಅಗ್ರ ಪ್ರದರ್ಶಕರಲ್ಲಿ ಒಬ್ಬರಾದ ಸೂರ್ಯಪ್ರಕಾಶ್ ಅವರು ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

Articles You Might Like

Share This Article