ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಅಧಿಕಾರ ಸ್ವೀಕಾರ

Social Share

ವೆಲ್ಲಿಂಗ್ಟನ್, ಜ.25- ಕ್ರಿಸ್ ಹಿಪ್ಕಿನ್ಸ್ ಅವರು ನ್ಯೂಜಿಲೆಂಡ್‍ನ 41 ನೇ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆರ್ಥಿಕತೆ ವೃದ್ದಿ ಮೇಲೆ ಕೇಂದ್ರೀಕರಿಸಿ ಮತ್ತು ಹಣದುಬ್ಬರ ನಿಯಂತ್ರಣ ಮತ್ತು ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವುದಾಗಿ 44ರ ಹರೆಯದ ಹಿಪ್ಕಿನ್ಸ್ ಭರವಸೆ ನೀಡಿದ್ದಾರೆ.

ಸಾರ್ವತ್ರಿಕ ಚುನಾವಣೆಗೆ ಇನ್ನು ಒಂಬತ್ತು ತಿಂಗಳಿಗಿಂತ ಕಡಿಮೆ ಸಮಯದಲ್ಲಿ ಅವರ ಲೇಬರ್ ಪಕ್ಷವು ವರ್ಚಸ್ಸು ಹೆಚ್ಚಿಸಿ ಪ್ರಸ್ತುತ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ನಿಯಂತ್ರಿಸುವ ಕಷ್ಟದ ದಿನಗಳು ಎದುರಾಗಿದೆ.

ಇದು ನನ್ನ ಜೀವನದ ದೊಡ್ಡ ಜವಾಬ್ದಾರಿಯಾಗಿದೆ ಮುಂದಿರುವ ಸವಾಲು ಎದುರಿಸಲು ಉತ್ಸುಕನಾಗಿದ್ದೇನೆ ಎಂದು ಕ್ರಿಸ್ ಹಿಪ್ಕಿನ್ಸ್ ಹೇಳಿದರು.

ರಾಹುಲ್ ಯಾತ್ರೆಯಲ್ಲಿ ಊರ್ಮಿಳಾ ಕಲರವ

ಇದೇ ವೇಳೆ ಕಾರ್ಮೆಲ್ ಸೆಪುಲೋನಿ ಅವರು ಉಪ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು, ದೇಶದ ರಾಜಕೀಯ ಪರಂಪರೆಯಲ್ಲಿ ಮಹಿಳೆಯೊಬ್ಬರು ಮೊದಲ ಬಾರಿಗೆ ಈ ಸ್ಥಾನ ವಹಿಸಿಕೊಂಡಿದ್ದಾರೆ. ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ಧನ್ಯವಾದಂದು ಚುಟುಕು ಮಾತಿನ ಬಾಷಣದಲ್ಲಿ ಹೇಳಿದಳು.

Chris Hipkins, sworn, New Zealand, PM,

Articles You Might Like

Share This Article