ನ್ಯೂಜಿಲ್ಯಾಂಡ್‍ಗೆ ಕ್ರಿಸ್ ಹಿಪ್ಕಿನ್ಸ್ ಪ್ರಧಾನಿಯಾಗುವ ಸಾಧ್ಯತೆ

Social Share

ವೆಲ್ಲಿಂಗ್ಟನ್,ಜ.21- ನ್ಯೂಜಿಲ್ಯಾಂಡ್ ಪ್ರಧಾನಿ ಸ್ಥಾನಕ್ಕೆ ಜಸಿಂಡಾ ಅರ್ಡೆನ್‍ರ ರಾಜೀನಾಮೆ ಘೋಷಣೆ ಬಳಿಕ ಮುಂದಿನ ಪ್ರಧಾನಿ ಸ್ಥಾನದ ರೇಸ್‍ಗೆ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಪ್ರವೇಶಿಸಿದ್ದಾರೆ.

ನಾಳೆ ಲೇಬರ್ ಪಾರ್ಟಿಯ ಪ್ರಮುಖರ ಅನುಮೋದನೆ ಪಡೆಯುವ ಮೂಲಕ ನಾಳೆ ಕ್ರಿಸ್ ಹಿಪ್ಕಿನ್ಸ್ ಪ್ರಧಾನಿಯಾಗುವ ಸಾಧ್ಯತೆಗಳಿವೆ. ಐದೂವರೆ ವರ್ಷಗಳ ಪ್ರಧಾನಿಯಾಗಿದ್ದ ಅರ್ಡೆರ್ನ್ ನಿನ್ನೆ ತಮ್ಮ ರಾಜೀನಾಮೆ ಘೋಷಿಸಿ, 5 ಮಿಲಿಯನ್ ಜನಸಂಖ್ಯೆ ಹೊಂದಿರುವ ದೇಶವನ್ನು ಬೆಚ್ಚಿಬೀಳಿಸಿದರು.

ಪ್ರಧಾನಿ ಅಭ್ಯರ್ಥಿ ಕೊರತೆ ಅನುಭವಿಸುತ್ತಿರು ಪರಿಸ್ಥಿತಿಯಲ್ಲಿ ಅರ್ಡೆರ್ನ್ ನಿರ್ಗಮನವಾಗಿದೆ. ಮುಂದಿನ ಬೆಳವಣಿಗೆಯಲ್ಲಿ ಅನೈತಿಕ ರಾಜಕಾರಣ ಮತ್ತು ಇತರ ಬೆಳವಣಿಗೆಗಳು ನಡೆಯಬಾರದು ಎಂಬ ಪ್ರಜ್ಞಾವಂತಿಕೆಯಿಂದ ಲೇಬರ್ ಪಕ್ಷದ ಸಂಸದರು ಹಿಪ್ಕಿನ್ಸ್‍ರ ನಾಯಕತ್ವವನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದರು. ನ್ಯೂಜಿಲ್ಯಾಂಡ್‍ನಲ್ಲಿ ಶೀಘ್ರವೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಬಾಕಿ ಇರುವ ಎಂಟು ತಿಂಗಳಿಗಾಗಿ 44 ವರ್ಷದ ಹಿಪ್ಕಿನ್ಸ್ ಪ್ರಧಾನಿಯಾಗಲಿದ್ದಾರೆ.

ಕರೋನವೈರಸ್ ಸಂಕಷ್ಟ ಸಮಯದಲ್ಲಿ ಹಿಪ್ಕಿನ್ಸ್ ಪ್ರಮುಖ ಪಾತ್ರ ವಹಿಸಿದ್ದರು. ಆ ವೇಳೆ ಅವರು ಬಿಕ್ಕಟ್ಟು ನಿರ್ವಹಣೆಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ದೀರ್ಘ ಕಾಲ ಅರ್ಡೆರ್ನ್ ಆಪ್ತರಾಗಿದ್ದ ಅವರು, ಎಡಪಂಥೀಯ ಹಾಗೂ ಉದಾರವಾಗಿ ನಾಯಕತ್ವಕ್ಕೆ ಉದಾಹರಣೆಯಾಗಿದ್ದಾರೆ.

ಕುಸ್ತಿ ಫೆಡರೇಷನ್‍ಗೆ ಉಸ್ತುವಾರಿ ಸಮಿತಿ ರಚನೆ : 3 ದಿನಗಳ ಧರಣಿ ಅಂತ್ಯ

ಅರ್ಡೆರ್ನ್ 37 ನೇ ವಯಸ್ಸಿನಲ್ಲಿ ದೇಶದ ಚುಕ್ಕಾಣಿ ಹಿಡಿದಿದ್ದರು. ಆದರೆ ಕೊರೊನಾ ಎಂಬ ಸಾಂಕ್ರಾಮಿಕ ಪರಿಸ್ಥಿತಿ ಕೆಟ್ಟ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆರಂಭದಲ್ಲಿ ರೋಗವನ್ನು ಹತ್ತಿಕ್ಕಿದ ಅರ್ಡೆರ್ನ್ ನಂತರ ಸರಣಿ ಸಾವುಗಳಿಂದ ಟೀಕೆಗೆ ಗುರಿಯಾದರು. ಇದರ ನೈತಿಕ ಹೊಣೆ ಹೊತ್ತು ಫೆಬ್ರವರಿ 7 ರ ನಂತರ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಆಕೆ ನಿನ್ನೆ ಘೋಷಿಸಿದರು.

ಸಾರ್ವಜನಿಕ ಅಭಿಪ್ರಾಯಗಳು ಮತ್ತು ಟೀಕೆಗಳ ಹಿನ್ನೆಲೆಯಲ್ಲಿ ಆಡಳಿತ ರೂಢ ಲೇಬರ್ ಪಕ್ಷ , ಪ್ರಮುಖ ಪ್ರತಿಪಕ್ಷವಾಗಿರುವ ಕನ್ಸರ್ವೇಟಿಟ್ ನ್ಯಾಷನಲ್ ಪಾರ್ಟಿಗಿಂತಲೂ ಹಿಂದಿದೆ. ಮುಂದಿನ ಚುನಾವಣೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Chris Hipkins, New Zealand, next, Prime Minister,

Articles You Might Like

Share This Article