ಹಾಲು ಉತ್ಪಾದನಾ ಘಟಕದಲ್ಲಿ ಕೋಟ್ಯಂತರ ಅವ್ಯವಹಾರ ಸಿಐಡಿ ತನಿಖೆಗೆ ಎನ್.ಆರ್.ರಮೇಶ್ ಆಗ್ರಹ

Social Share

ಬೆಂಗಳೂರು, ಫೆ.4- ಕನಕಪುರ ಹಾಲು ಉತ್ಪಾದನಾ ಘಟಕದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಿಐಡಿ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕನಕಪುರ ಹಾಲು ಉತ್ಪಾದನಾ ಕೇಂದ್ರ ಘಟಕದ ನಿರ್ಮಾಣ ಹಾಗೂ ಬಮೂಲ್ ಟ್ರಸ್ಟ್ ಸ್ಥಾಪನೆ ಹೆಸರಿನಲ್ಲಿ ಹತ್ತಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಭ್ರಷ್ಟ ಜನಪ್ರತಿನಿಗಳ ಸಹಕಾರದಿಂದ ಹಲವು ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ವಂಚನೆ ಮಾಡಿರುವುದು ಬಹಿರಂಗವಾಗಿರುವುದರಿಂದ ಸಹಕಾರ ಸಚಿವರು ಕೂಡಲೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಅವರು ಒತ್ತಾಯಿಸಿ ದ್ದಾರೆ.
ಕನಕಪುರ ಡೇರಿ ಸ್ಥಾವರ ಜಮೀನು ಖರೀದಿಗೆ, ಘಟಕ ನಿರ್ಮಾಣಕ್ಕೆ ಹಾಗೂ ಹಾಲಿನ ಪುಡಿ ಘಟಕಕ್ಕೆ ಸಹಕಾರ ಇಲಾಖೆಯ ಅನುಮತಿ ಪಡೆದಿಲ್ಲ. ಕನಕಪುರದಲ್ಲಿ ಘಟಕದ ಅವಶ್ಯಕತೆ ಇಲ್ಲದಿದ್ದರೂ ಹಾಲು ಮತ್ತು ಮೊಸರಿನ ಪ್ಯಾಕಿಂಗ್ ಸ್ಥಾಪನೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಆದರೆ, ಇದುವರೆಗೂ ಹಾಲು ಮತ್ತು ಮೊಸರು ಉತ್ಪಾದನೆ ಪ್ರಾರಂಭಿಸದೆ ಒಕ್ಕೂಟದ ಹಣ ಪೋಲು ಮಾಡಲಾಗಿದೆ.
ಹಾಲು ಒಕ್ಕೂಟದ ನಿಯನ್ನು ಡಿಸಿಸಿ ಬ್ಯಾಂಕ್ಗಳಲ್ಲಿ ಆರ್ಎಫ್ಡಿ ಮಾಡಿರು ವುದಿಲ್ಲ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಮೂಲ್ ಟ್ರಸ್ಟ್ ಸ್ಥಾಪಿಸಿ ಕೊಂಡು 40 ಕ್ಕೂ ಹೆಚ್ಚು ಸಿಬ್ಬಂದಿ ಗಳನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟಾರೆ, ಕನಕಪುರ ಹಾಲು ಒಕ್ಕೂಟದಲ್ಲಿ ಸಾರ್ವಜನಿಕರ ಕೋಟ್ಯಂತರ ರೂ.ಗಳನ್ನು ದುಂದು ವೆಚ್ಚ ಮಾಡಿಕೊಂಡಿರುವುದು ಸಾಬೀತಾಗಿರುವುದರಿಂದ ಕೂಡಲೆ ಪ್ರಕರಣ ವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಅವ್ಯವಹಾರ ನಡೆದಿರುವ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ವಜಾಗೊಳಿಸಿ ಸರ್ಕಾರದಿಂದ ಸೂಕ್ತ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.

Articles You Might Like

Share This Article