ಬೆಂಗಳೂರು, ಜ.17- ವಿವಿಧ ಆರೋಪಗಳಿರುವ ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಯಾವುದೇ ಅನುಮಾನಗಳು ಬಾರದಂತೆ ಮತ್ತು ಮತ್ತಷ್ಟು ಪಾರದರ್ಶಕವಾಗಿ ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಈ ಸಂಬಂಧ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮೈಸೂರು ಪೊಲೀಸರು ಈ ಪ್ರಕರಣದ ತನಿಖೆ ಮಾಡುತ್ತಿದ್ದರು. ತನಿಖೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲು ಮತ್ತು ಯಾವುದೇ ಅನುಮಾನ ಈ ಪ್ರಕರಣದಲ್ಲಿ ಬಾರದಂತೆ ತನಿಖೆ ಮಾಡಲು ಸಿಐಡಿಗೆ ವಹಿಸಲಾಗಿದೆ. ಪಿಎಸ್ಐ ಪ್ರಕರಣ ತನಿಖೆ ಮಾಡಿದ ತಂಡವೇ ಈ ಪ್ರಕರಣದ ತನಿಖೆ ಮಾಡುತ್ತದೆ. ತನಿಖೆ ಪ್ರಾಮಾಣಿಕವಾಗಿ ನಡೆದು ತಪ್ಪಿತಸ್ಥರಿಗೆ ಕ್ರಮ ಆಗಬೇಕೆಂದು ಸೂಚನೆ ನೀಡಿದ್ದೇವೆ ಎಂದರು.
4 ದಿಕ್ಕುಗಳಿಂದಲೂ ರಥಯಾತ್ರೆಗೆ ಬಿಜೆಪಿ ಸಿದ್ಧತೆ
ಸ್ಯಾಂಟ್ರೋ ರವಿ ಮೇಲೆ ಅತ್ಯಾಚಾರ, ಕೊಲೆ, ಕಿರುಕುಳ, ವರದಕ್ಷಿಣೆ ಸೇರಿದಂತೆ ಅನೇಕ ಆರೋಪ ಪ್ರಕಣಗಳು ಇವೆ. ಇದರ ಸಂಪೂರ್ಣ ತನಿಖೆ ಆಗುತ್ತದೆ. ಸಾರ್ವಜನಿಕವಾಗಿ ಚರ್ಚೆಯಾಗಿರೋ ಪ್ರಕರಣವಿದು. ಇದರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಾಗಬೇಕು. ಯಾರೇ ಆತನ ಜೊತೆಗಿದ್ದರೊ ಅವರ ಮುಖವಾಡ ಕಳಚಿ ಹೊರಗೆ ತೆಗೆಯಬೇಕು. 20 ವರ್ಷ ಯಾರ ಜೊತೆ ಸಂಬಂಧ ಹೊಂದಿದ್ದ ಎಂಬುದು ಜನರಿಗೆ ಗೊತ್ತಾಗಬೇಕು. ಹೀಗಾಗಿ ಒಳ್ಳೆ ರೀತಿ ತನಿಖೆ ಆಗಬೇಕು ಅಂತಾ ಸಿಐಡಿಗೆ ವಹಿಸಲಾಗಿದೆ ಎಂದರು.
ಪ್ರಕರಣ ಸಿಐಡಿ ತನಿಖೆಗೆ ವಹಿಸಲು ಅಗತ್ಯ ದಾಖಲೆ ಇಲ್ಲ ಎಂಬ ಸ್ಯಾಂಟ್ರೋ ರವಿ ವಕೀಲರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ತನಿಖೆ ಮಾಡಿದರೂ ಕಷ್ಟ, ಮಾಡದೇ ಹೋದರೂ ಕಷ್ಟ. ಸರ್ಕಾರ ಈಗಾಗಲೇ ನಿರ್ಧಾರ ಮಾಡಿದ್ದು, ಸಿಐಡಿ ತನಿಖೆ ಆಗುತ್ತದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗೇ ಆಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪದ ವಿಚಾರದ ಬಗ್ಗೆ ಮಾತನಾಡಿದ ಅವರು, ಮಲೆನಾಡು ಮಿತ್ರವೃಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ಭಾವುಕನಾಗಿದ್ದೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರಿಗೆ ಮಸಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ. ಯಾರನ್ನು ಬೇಕಾದರೂ ಕೇಳಿ ಎಲ್ಲರಿಗೂ ನಾನು ಸಿಗುತ್ತೇನೆ. ಒಂದು ಫೋಟೋಗೆ ಇಷ್ಟು ಕಥೆ ಕಟ್ಟಿದರೆ ಹೇಗೆ ಎಂದು ಪ್ರಶ್ನಿಸಿದರು.
ಬೈಕ್ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಸ್ನೇಹಿತರ ದುರ್ಮರಣ
ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ರಾಜಕೀಯ ಮಾಡಿದ್ದೇನೆ. ಆದರೂ ಕೆಸರು ಎರೆಚಿದರೆ ನೋವಾಗುತ್ತದೆ. ಇಂತಹುದ್ದೇ ವ್ಯವಹಾರ ಮಾಡೋರಿಗೆ ಏನು ಸಮಸ್ಯೆ ಆಗೊಲ್ಲ. ಆದರೆ ನಮ್ಮಂತಹವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ವಿರುದ್ದ ಸಚಿವರು ವಾಗ್ದಾಳಿ ನಡೆಸಿದರು.
CID, probe, Santro Ravi, case, Home Minister, Araga Jnanendra,