ಪಾಕ್,ಆಫ್ಘಾನ್, ಬಾಂಗ್ಲಾ ನಿರಾಶ್ರಿತರ ಪೌರತ್ವ ನೀಡುವ ಪ್ರಕ್ರಿಯೆ ಸರಳೀಕರಣ

Social Share

ನವದೆಹಲಿ,19-ಪಾಸ್‍ಪೋರ್ಟ್ ಮತ್ತು ವೀಸಾ ಅವಗಳು ಪೂರ್ಣಗೊಂಡಿರುವ ಪಾಕಿಸ್ತಾನ್, ಆಫ್ಘಾನಿಸ್ತಾನ ಮತ್ತು ಬಾಂಗ್ಲಾ ಅಲ್ಪಸಂಖ್ಯಾತರಿಗೆ ನೀಡುವ ಪೌರತ್ವ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಭಾರತ ತೀರ್ಮಾನಿಸಿದೆ.

ಪಾಕಿಸ್ತಾನದ ಹಿಂದೂ, ಸಿಖ್, ಪಾರ್ಸಿ, ಕ್ರಿಶ್ಚಿಯನ್, ಬೌದ್ಧ ಮತ್ತು ಜೈನ ಸಮುದಾಯಗಳ ಸದಸ್ಯರ ಪೌರತ್ವ ಅರ್ಜಿ ಸ್ವೀಕರಿಸಲು ಅವರ ಅವ ಮೀರಿದ ಪಾಸ್‍ಪೋರ್ಟ್ ಮತ್ತು ವೀಸಾಗಳನ್ನು ಪೋಷಕ ದಾಖಲೆಗಳಾಗಿ ಸ್ವೀಕರಿಸಲು ಪೌರತ್ವ ಪೋರ್ಟಲ್ ಮರು ಜೋಡಣೆ ಮಾಡಲಾಗುತ್ತಿದೆ.

ಡಿಸೆಂಬರ್ 31, 2009 ರ ಮೊದಲು ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಅರ್ಜಿದಾರರ ಪೌರತ್ವ ಪೋರ್ಟಲ್ ಪ್ರಸ್ತುತ ಅವ ಮೀರಿದ ಪಾಸ್‍ಪೋರ್ಟ್‍ಗಳನ್ನು ಪೋಷಕ ದಾಖಲೆಗಳಾಗಿ ಸ್ವೀಕರಿಸಲಾಗುತ್ತಿದೆ. 2018 ರಲ್ಲಿ, ಭ್ರಷ್ಟಾಚಾರದ ವರದಿಗಳು ಕೇಳಿ ಬಂದ ನಂತರ ಎಲ್ಲಾ ಪೌರತ್ವ ಪ್ರಕ್ರಿಯೆಗಳು ಆನ್‍ಲೈನ್‍ಗೆ ಸೇರಿಸಲಾಗಿತ್ತು.

ಕೊಲ್ಲಾಪುರ ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಪ್ರವೇಶ ನಿಷೇಧ..!

ಭಾರತದಲ್ಲಿ ಪಾಕಿಸ್ತಾನಿ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸ ಮಾಡುವ ಸೀಮಂತ್ ಲೋಕ ಸಂಘಟನೆ ಅಧ್ಯಕ್ಷ ಹಿಂದೂ ಸಿಂಗ್ ಸೋಧಾ ಅವರು ಜನವರಿ 1, 2010ರ ನಂತರ ಬಂದ ಜನರಿಗೆ ಅವಧಿ ಮೀರಿದ ಪಾಕಿಸ್ತಾನಿ ಪಾಸ್‍ಪೋರ್ಟ್‍ಗಳನ್ನು ಪೋರ್ಟಲ್ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

2015 ರಲ್ಲಿ, ಪೌರತ್ವ ನಿಯಮಗಳನ್ನು ಎಂಎಚ್‍ಎ ತಿದ್ದುಪಡಿ ಮಾಡಿತು ಮತ್ತು ಈ ಆರು ಸಮುದಾಯಗಳಿಗೆ ಸೇರಿದ ವಿದೇಶಿ ವಲಸಿಗರಿಗೆ ಡಿಸೆಂಬರ್ 31, 2014 ರಂದು ಅಥವಾ ಮೊದಲು ಧಾರ್ಮಿಕ ಕಿರುಕುಳದ ಕಾರಣದಿಂದ ಭಾರತಕ್ಕೆ ಪ್ರವೇಶಿಸಿದ ವಿದೇಶಿ ವಲಸಿಗರನ್ನು ಪಾಸ್‍ಪೋರ್ಟ್ ಕಾಯಿದೆ ಮತ್ತು ವಿದೇಶಿಯರ ಕಾಯಿದೆಯ ನಿಬಂಧನೆಗಳಿಂದ ವಿನಾಯಿತಿ ನೀಡುವ ಮೂಲಕ ಕಾನೂನುಬದ್ಧಗೊಳಿಸಿತು.

ಅವರ ಪಾಸ್‍ಪೋರ್ಟ್‍ಗಳ ಅವಧಿ ಮುಗಿದಂತೆ. ಭಾರತದಲ್ಲಿ ಅಕ್ರಮವಾಗಿ ತಂಗಿದ್ದಕ್ಕಾಗಿ ಯಾವುದೇ ಕ್ರಿಮಿನಲ್ ಕ್ರಮವನ್ನು ಎದುರಿಸುವುದರಿಂದ ಅವರಿಗೆ ವಿನಾಯಿತಿ ನೀಡಲಾಗಿದ್ದರೂ, ಅವರ ಪೌರತ್ವ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಅವಧಿ ಮೀರಿದ ದಾಖಲೆಗಳನ್ನು ಆನ್‍ಲೈನ್ ಫೋರ್ಟಲ್‍ನಲ್ಲಿ ಸ್ವೀಕರಿಸುತ್ತಿರಲಿಲ್ಲ.

ಸಂಪುಟದಿಂದ ನನ್ನನ್ನು ಏಕೆ ದೂರವಿಟ್ಟಿದ್ದಾರೆಂದು ಬೊಮ್ಮಾಯಿಯವರೇ ಹೇಳಬೇಕು : ಈಶ್ವರಪ್ಪ

ಆನ್‍ಲೈನ್ ಫೋರ್ಟಲ್‍ಗೆ ಬದಲಾವಣೆಗಳನ್ನು ಮಾಡಲಾಗುವುದು, ಇದರಿಂದಾಗಿ ವಿದೇಶಿ ಪಾಸ್‍ಫೋರ್ಟ್‍ಗಳು ಮತ್ತು ಅವುಗಳ ಸಿಂಧುತ್ವವನ್ನು ದಾಟಿದ ವೀಸಾವನ್ನು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಫೋಷಕ ದಾಖಲೆಯಾಗಿ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.

ಭಾರತೀಯ ಪೌರತ್ವವನ್ನು ಬಯಸುವ ಜನರು ದೀರ್ಘಾವಧಿಯ ವೀಸಾಗಳಲ್ಲಿ ಅಥವಾ ಯಾತ್ರಿ ವೀಸಾಗಳಲ್ಲಿ ಬರುತ್ತಾರೆ. ಐದು ವರ್ಷಗಳ ಕಾಲ ನೀಡಿದ ಪೌರತ್ವದ ಪೂರ್ವಗಾಮಿ ಎಂದು ಪರಿಗಣಿಸಲಾಗುತ್ತದೆ.

Citizenship, path, 6 minority groups, 3 nations,

Articles You Might Like

Share This Article