ಸುಗಮ ಸಂಚಾರ ಜಾರಿ- ಅಪಘಾತ ತಡೆ ಸಭೆಯಲ್ಲಿ ಸಾರ್ವಜನಿಕರ ಸಲಹೆ ಆಲಿಕೆ

Social Share

ಬೆಂಗಳೂರು, ಡಿ.10- ನಗರ ಸಂಚಾರ ಪೊಲೀಸ್ ವಿಭಾಗವು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾಗರಿಕ ಸಂಚಾರ ವೇದಿಕೆ ಸಭೆ ನಗರದ ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ನಡೆಸಲಾಯಿತು.

ನಗರದ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಜಾರಿಗೊಳಿಸಲು ಹಾಗೂ ಅಪಘಾತಗಳನ್ನು ಸಮರ್ಥವಾಗಿ ತಡೆಗಟ್ಟಲು ಸಾರ್ವಜನಿಕರ ಸಹಕಾರ ಪ್ರಮುಖ ಪಾತ್ರವನ್ನು ವಹಿಸಿದೆ.

ಈ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ನಿವಾರಿಸುವುದರ ಜೊತೆಗೆ ಸಂಚಾರವನ್ನು ಸುಗಮಗೊಳಿಸುವ ಹಾಗೂ ರಸ್ತೆ ಸುರಕ್ಷತೆಯನ್ನು ವೃದ್ಧಿಸುವಂತಹ ಸಲಹೆಗಳನ್ನು ಸಹ ಸಾರ್ವಜನಿಕರಿಂದ ಪೊಲೀಸರು ಪಡೆದುಕೊಂಡರು.

ರೌಡಿ ಕಾರಿನ ಮೇಲೆ ಗುಂಡಿನ ಸುರುಮಳೆಗೈದಿದ್ದ ಮೂವರ ಬಂಧನ

ಸಾರ್ವಜನಿಕರು ನೀಡುವ ಉತ್ತಮ ಸಲಹೆಗಳನ್ನು ಪರಿಗಣಿಸಿ ಅವುಗಳನ್ನು ನಿಯಮಗಳನ್ನಾಗಿ ಪರಿವರ್ತಿಸಿ ಕಾರ್ಯಗತಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಸಾರ್ವಜನಿಕರು ಸಂಚಾರದ ಬಗ್ಗೆ ನೀಡಿದ ದೂರು, ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಸಾರ್ವಜನಿಕರು ತಮ್ಮ ಹಿಂದಿನ ಪ್ರಕರಣಗಳ ಬಗ್ಗೆ ವಿವರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ಪಡೆದುಕೊಂಡರು. ನಗರದ ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ಇಂದು ನಡೆದ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ತಮ್ಮ ಸಲಹೆಗಳನ್ನು ಮುಕ್ತವಾಗಿ ನೀಡಿದರು.

ವೇಗದ ದ್ವಿಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಇಶಾನ್ ಕಿಶನ್

ನಗರದಲ್ಲಿ ಸುಗಮ ಸಂಚಾರವನ್ನು ಜಾರಿಗೊಳಿಸಿ ಅಪಘಾತಗಳನ್ನು ತಡೆಗಟ್ಟಲು ಸಂಚಾರ ಪೊಲೀಸರೊಂದಿಗೆ ಸಹಕರಿಸುವಂತೆ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾದ ಎಂ.ಎ. ಸಲೀಂ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಹಲವಾರು ಮಂದಿ ಪಾಲ್ಗೊಂಡು ಪೊಲೀಸರಿಗೆ ಕೆಲವು ಸಲಹೆಸೂಚನೆಗಳನ್ನು ನೀಡಿದರು.

City Traffic Police, Public prevention, meeting,

Articles You Might Like

Share This Article