ಹಂತ ಹಂತವಾಗಿ ಪೌರ ಕಾರ್ಮಿಕರ ಸೇವೆ ಖಾಯಂ

Social Share

ಬೆಂಗಳೂರು, ಸೆ.23- ಮೊದಲ ಹಂತದಲ್ಲಿ 11,600ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂ ಗೊಳಿಸಲಾಗಿದೆ. ಉಳಿದ ಕಾರ್ಮಿಕರನ್ನು ಎರಡು ಮತ್ತು 3ನೆ ಹಂತದಲ್ಲಿ ಶೀಘ್ರವೇ ಖಾಯಂ ಗೊಳಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ಬಹಳ ದಿನಗಳಿಂದ ಇದ್ದ ಬೇಡಿಕೆಯನ್ನು ಈಡೇರಿಸಲಾಗಿದೆ. ಇದಕ್ಕಾಗಿ ನಾವು ಸಮಿತಿಯೊಂದನ್ನು ರಚಿಸಿದ್ದೇವೆ. ಅದರಲ್ಲಿ ಅರ್ಹತೆ ಪಡೆದ ಸುಮಾರು 11 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮೊದಲ ಹಂತದಲ್ಲಿ ಖಾಯಂಗೊಳಿಸಲಾಗಿದೆ. ಕಾನೂನು ಬದ್ಧವಾಗಿ ಆದಷ್ಟು ಶೀಘ್ರದಲ್ಲಿ ಖಾಯಂಗೊಳಿಸಲಾಗುತ್ತದೆ.

ಕಾರ್ಮಿಕರನ್ನು ಉಪಹಾರಕ್ಕಾಗಿ ಇಂದು ಮನೆಗೆ ಆಹ್ವಾನಿಸಲಾಗಿತ್ತು. ಅವರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಅವರೊಂದಿಗೆ ಸರ್ಕಾರವಿದೆ ಎಂದು ಹೇಳುವುದು ನಮ್ಮ ಉದ್ದೇಶ. ಅವರ ಬದುಕಿಗೆ ಅಗತ್ಯವಾದ ಸೌಲಭ್ಯಗಳು ನ್ಯಾಯಯುತವಾಗಿ ಅವರಿಗೆ ಸಿಗಲಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.

Articles You Might Like

Share This Article