ಯುವತಿಗೆ ತಂದೆ ಹಾಗೂ ಸಹೋದರನಿಂದಲೇ ಲೈಂಗಿಕ ಕಿರುಕುಳ

Social Share

ಗುರುಗ್ರಾಮ,ಫೆ.21- ತಂದೆ ಹಾಗೂ ಸಹೋದರನೇ 17 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಲೈಂಗಿಕ ಕಿರುಕುಳ ನೀಡಿರುವ ತಂದೆ ಹಾಗೂ ಸಹೋದರನನ್ನು ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನನ್ನ ತಂದೆ ಹಾಗೂ ಸಹೋದರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ತನ್ನ ತಂದೆ ಹಾಗೂ ಸಹೋದರನ ಕೃತ್ಯದಿಂದ ರೋಸಿಹೋಗಿದ್ದ 11 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಯುವತಿ ತನ್ನ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ನಡೆದ ವಿಷಯ ತಿಳಿಸಿದ್ದಾರೆ.

ಸಂಕಷ್ಟ ಸವಾಲುಗಳ ನಡುವೆ ಆರ್ಥಿಕ ಸದೃಢತೆ : ಬೊಮ್ಮಾಯಿ

ವಿಷಯ ತಿಳಿಯುತ್ತಿದ್ದಂತೆ ಶಾಲಾ ಶಿಕ್ಷಕ ವೃಂದವೇ ಠಾಣೆಗೆ ತೆರಳಿ ದೂರು ನೀಡಿದೆ. ದೂರು ನೀಡಿದ ತಕ್ಷಣ ಪೊಲೀಸರು ಸಂತ್ರಸ್ಥ ಯುವತಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಕೌನ್ಸಿಲಿಂಗ್ ನಡೆಸಿತು ನಂತರ ತಂದೆ ಹಾಗೂ ಸಹೋದರನನ್ನು ಬಂಧಿಸಿದ ಖೇರ್ಕಿ ದೌಲಾ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

student, accuses, father, brother, sexual, assault, Gurugram,

Articles You Might Like

Share This Article