ಜೈಲಿನಲ್ಲಿ ಕ್ಲರ್ಕ್ ಆದ ನವಜೋತ್ ಸಿಧು..!

Spread the love

ಕೋಲ್ಕತ್ತಾ, ಮೇ 26- ಪಾಟಿಯಾಲದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‍ನ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಟಿಯಾಲಯದ ಜೈಲಿನ ಕೊಠಡಿ ಸಂಖ್ಯೆ 7ರಲ್ಲಿ 241383 ನಂಬರಿನ ಕೈದಿಯಾಗಿರುವ ಸಿಧು ಅವರು ಇರುವ ಕೋಣೆಗೆ ಭಾರೀ ಭದ್ರತೆಯನ್ನು ಕೂಡ ಅಳವಡಿಸಲಾಗಿದೆ.

ಕ್ಲರ್ಕ್ ಕೆಲಸಕ್ಕಾಗಿ ತರಬೇತಿ ಪಡೆಯುತ್ತಿರುವ ನವಜೋತ್ ಸಿಧು ಅವರಿಗೆ ಒಂದು ತಿಂಗಳ ಕಾಲ ಯಾವುದೇ ವೇತನವನ್ನು ನಿಗಪಡಿಸಿಲ್ಲ, ನಂತರದ ದಿನಗಳಲ್ಲಿ ಅವರ ಕೌಶಲ್ಯತೆ ಹಾಗೂ ಕಾರ್ಯಕ್ಷಮತೆಯ ಮೇರೆಗೆ ದಿನಕ್ಕೆ 40 ರೂ.ಗಳಿಂದ 90 ರೂ.ಗಳನ್ನು ನೀಡಲಾಗುವುದು. ಪ್ರತಿದಿನ ಎರಡು ಶಿಫ್ಟ್‍ಗಳಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿಧು ಅವರು ಬೆಳಗ್ಗೆ 9 ರಿಂದ 12 ಹಾಗೂ ಮಧ್ಯಾಹ್ನ 3 ಗಂಟೆಯಿಂದ 6ರವರೆಗೂ ಕರ್ತವ್ಯ ನಿರ್ವಹಿಸಲಿದ್ದಾರೆ.

ನವಜೋತ್ ಸಿಧು ಅವರ ಆರೋಗ್ಯದಲ್ಲಿ ಏರುಪೇರಾಗಿ ದ್ದರಿಂದ ಸೋಮವಾರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಸಿಧು ಅವರನ್ನು ಪರೀಕ್ಷೆ ನಡೆಸಿದ ವೈದ್ಯ ಎಚ್‍ಪಿಎಸ್ ವರ್ಮಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಧು ಅವರು ತಮ್ಮ ಆರೋಗ್ಯದ ದೃಷ್ಟಿಯಿಂದಾಗಿ ಜೈಲಿನಲ್ಲಿ ವಿಶೇಷ ರೀತಿಯ ಡಯಟ್‍ನಲ್ಲಿ ತೊಡಗಿದ್ದು ಅವರಿಗೆ ಉತ್ಕøಷ್ಟ ಮಟ್ಟದ ತಪಾಸಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಜೈಲಿನಲ್ಲಿ ಶಿಕ್ಷೆ ಅನುಭವಿಸು ತ್ತಿರುವ ಸಿಧುಗೆ ಗೋಧಿ, ಸಕ್ಕರೆ ಹಾಗೂ ಮೈದಾದಂತಹ ಪದಾರ್ಥಗಳಿಂದ ದೂರ ಉಳಿಯಲು ವೈದ್ಯರು ಸೂಚಿಸಿದ್ದು, ಬೇರಿಸ್ ರೀತಿಯ ಹಣ್ಣುಗಳು, ಪಪ್ಪಾಯ, ಚೇಪೆ ಕಾಯಿ, ಡಬ್ಬಲ್ ಟೋನ್ಡ್ ಹಾಲು ಸೇರಿದಂತೆ ಫೈಬರ್ ಹಾಗೂ ಕಾರ್ಬೊರೇಟ್ಸ್ ಅನ್ನು ಹೇರಳವಾಗಿ ಹೊಂದಿರುವ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದು ವರ್ಮಾ ತಿಳಿಸಿದ್ದಾರೆ.

1988, ಡಿಸೆಂಬರ್ 27 ರಂದು ಪಾರ್ಕಿಂಗ್ ವಿಷಯಕ್ಕೆ ಸಂಬಂಸಿದಂತೆ ಪಾಟಿಯಾಲಯದ ನಿವಾಸಿ ಗುರ್ನಮ್‍ಸಿಂಗ್‍ರ ಮೇಲೆ ಸಿಧು ಹಾಗೂ ಆತನ ಸ್ನೇಹಿತರಾದ ರೂಪೆಂದರ್ ಸಿಂಗ್ ಸಂಧು ಅವರು ವಾಗ್ವಾದ ನಡೆಸಿದ್ದರು, ಈ ಪ್ರಕರಣದಲ್ಲಿ ಗಾಯಗೊಂಡಿದ್ದ ಗುರ್ನಮ್ ಸಿಂಗ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಸಿದಂತೆ ಸುಪ್ರೀಂಕೋರ್ಟ್ ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಸಿದೆ.

Facebook Comments