ಹೋಲ್‍ಸೆಲ್ ದರದಲ್ಲಿ ಬಟ್ಟೆ ಖರೀದಿಸಿ ಕೋಟ್ಯಾಂತರ ರೂ. ವಂಚನೆ

Social Share

ಬೆಂಗಳೂರು, ನ.22- ಹೋಲ್‍ಸೆಲ್ ದರದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಪೋಸ್ಟ್‍ಡೇಟೆಡ್ ಚೆಕ್ ನೀಡಿ ವಂಚಿಸುತ್ತಿದ್ದ ಇಬ್ಬರು ಅಂತರ್‍ರಾಜ್ಯ ವಂಚಕರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡು ಮೂಲದ ಪದಮ್ ಸಿಂಗ್ ಮತ್ತು ವಿಮಲ್ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ದೆಹಲಿ, ಪುಣೆ ಸೇರಿದಂತೆ ಆರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಜಯನಗರದ ಐಕಾನ್ ಫ್ಯಾಷನ್ ಗಾರ್ಮೆಂಟ್ಸ್‍ಗೆ 2021 ಮಾಚ್ 6ರಿಂದ 23ರ ನಡುವೆ ಸಿದ್ಧಿ ವಿನಾಯಕ ಟ್ರೇಡರ್ಸ್‍ನ ಮಾಲೀಕರೆಂದು ಈ ಇಬ್ಬರು ವಂಚಕರು ಪರಿಚಯಿಸಿಕೊಂಡು ಹೋಲ್‍ಸೆಲ್ ದರದಲ್ಲಿ 6.23 ಲಕ್ಷ ರೂ. ಮೌಲ್ಯದ ಹೊಸ ಬಟ್ಟೆಗಳನ್ನು ಖರೀದಿಸಿದ್ದಾರೆ.

ಆಯುಷ್ ಎಂಬುವವರಿಗೆ ಪೋಸ್ಟ್‍ಡೇಟೆಡ್ ಚೆಕ್‍ಗಳನ್ನು ನೀಡಿದ್ದು, ನಂತರ ಚೆಕ್ ಅನ್ನು ಬ್ಯಾಂಕಿಗೆ ಹಾಕಿದಾಗ ಸಹಿ ತಾಳೆಯಾಗುತ್ತಿಲ್ಲವೆಂದು ವಾಪಸ್ ಬಂದಿದೆ. ನಂತರ ಗಾರ್ಮೆಂಟ್ಸ್ ರವರು ಅವರ ಕಚೇರಿ ಬಳಿಗೆ ಹೋಗಿ ವಿಚಾರಿಸಿದಾಗ ಇನ್ನು ಹಲವಾರು ಗಾರ್ಮೆಂಟ್ಸ್‍ಗಳಿಂದ ಕೋಟ್ಯಾಂತರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಹಣ ನೀಡದೆ ಚೆಕ್ ನೀಡಿ ಅವರಿಗೂ ಸಹ ಮೋಸ ಮಾಡಿರುತ್ತಾರೆಂದು ತಿಳಿದು ನಂತರ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಂಚನೆ ಮಾಡಿದವನನ್ನು ಕೊಂದು ಶವದ ಜೊತೆ ಪೊಲೀಸರಿಗೆ ಶರಣಾದ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು 30 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಶೋಧ ಮುಂದುವರೆಸಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಲ್ಲಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವರ ಭೇಟಿ

ಆರೋಪಿಗಳ ಬಂಧನದಿಂದ ದೆಹಲಿಯ ಚಾಂದನಿಚೌಕ್ ಪೊಲೀಸ್ ಠಾಣೆ, ಪುಣೆಯ ಫರಸ್‍ಖಾನಾ ಠಾಣೆ, ವರುಣಾ ಜಿಲ್ಲೆ ಜೇತ್‍ಪುರಾ ಠಾಣೆಯ ಎರಡು ಪ್ರಕರಣಗಳು ಹಲಸೂರು ಗೇಟ್ ಹಾಗೂ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಯ ಪ್ರಕರಣಗಳು ಬೆಳಕಿಗೆ ಬಂದಿದೆ.

ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸಲು ಮೈಸೂರಲ್ಲಿ ತರಬೇತಿ ಪಡೆದಿದ್ದ ಕುಕ್ಕರ್ ಕ್ರಿಮಿ

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತರಾದ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರ ಉತ್ತಮ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಸಿಸಿರುತ್ತಾರೆ.

clothes, wholesale, Fraud, Two, arrested,

Articles You Might Like

Share This Article