ಚೇತೇಶ್ವರ ಪೂಜಾರ, 7 ಸಾವಿರ ರನ್ ಸರದಾರ

Social Share

ಮಿರ್ಪುರ್, ಡಿ. 23- ಬಾಂಗ್ಲಾ ದೇಶ ವಿರುದ್ಧ ನಡೆಯುತ್ತಿರುವ 2ನೆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಚೇತೇಶ್ವರ್ ಪೂಜಾರ ಅವರು ನೂತನ ದಾಖಲೆ ನಿರ್ಮಿಸಿದ್ದಾರೆ.

ಛತ್ತೋಗ್ರಾಮ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 90 ಹಾಗೂ ಅಜೇಯ 102 ರನ್ ಗಳಿಸಿ ಗಮನ ಸೆಳೆದಿದ್ದ ಚೇತೇಶ್ವರ ಪೂಜಾರ, ದ್ವಿತೀಯ ಟೆಸ್ಟ್ನಲ್ಲಿ 55 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 24 ರನ್ ಗಳಿಸಿ ತೈಜ್ಮುಲ್ ಇಸ್ಲಾಮ್ಗೆ ಔಟಾದರು.

ಕನಕಪುರ : ತಲೆ ಮೇಲೆ ಕಲ್ಲು ಹಾಕಿ RTI ಕಾರ್ಯಕರ್ತನ ಭೀಕರ ಕೊಲೆ

ಚೇತೇಶ್ವರ ಪೂಜಾರ ಅವರು ಈ ಪಂದ್ಯದಲ್ಲಿ 24 ಗಳಿಸುವ ಮೂಲಕ ಭಾರತ ತಂಡದ ಪರ 7 ಸಾವಿರ ರನ್ ಗಳಿಸಿದ 8ನೆ ಆಟಗಾರ ಎನಿಸಿಕೊಂಡರು. ಚೇತೇಶ್ವರ ಪೂಜಾರ ಅವರು 97 ಟೆಸ್ಟ್ ಪಂದ್ಯಗಳ 166 ಇನ್ನಿಂಗ್ಸ್ನಿಂದ 7008 ರನ್ ಗಳಿಸಿದ್ದಾರೆ. ಬಿಸಿಸಿಐ ತನ್ನ ಅಕೃತ ವೆಬ್ಸೈಟ್ನಲ್ಲಿ ಪೂಜಾರ ಅವರ ಈ ಸಾಧನೆಯನ್ನು ಕೊಂಡಾಡಿದ್ದಾರೆ.

ಕ್ರೀಡಾ ಪ್ರೇಮಿಗಳ ಮನಗೆದ್ದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿ

ಭಾರತದ ಪರ 7 ಸಾವಿರ ರನ್ ಗಳಿಸಿದ ಆಟಗಾರರು:
ಸಚಿನ್ ತೆಂಡೂಲ್ಕರ್- 15921 ರನ್
ರಾಹುಲ್ದ್ರಾವಿಡ್- 13265 ರನ್
ಸುನೀಲ್ ಗವಾಸ್ಕರ್- 10122 ರನ್
ವಿವಿಎಸ್ ಲಕ್ಷ್ಮಣ್: 8781 ರನ್
ವಿರೇಂದ್ರ ಸೆಹ್ವಾಗ್: 8503 ರನ್
ವಿರಾಟ್ ಕೊಹ್ಲಿ: 8108 ರನ್
ಸೌರವ್ ಗಂಗೂಲಿ: 7202 ರನ್
ಚೇತೇಶ್ವರ್ ಪೂಜಾರ: 7008 ರನ್

7000 Test,, runs, India, Cheteshwar Pujara,

Articles You Might Like

Share This Article