ರಕ್ಷಣಾ ವಲಯದಲ್ಲಿ ಪೂರ್ಣಪ್ರಮಾಣದ ಸ್ವಾವಲಂಬನೆಯತ್ತ ಭಾರತದ ಚಿತ್ತ : ಸಿಎಂ

Social Share

ಟಿ.ದಾಸರಹಳ್ಳಿ,ಸೆ.15- ರಕ್ಷಣಾ ವಲಯದಲ್ಲಿ ಭಾರತ ಸದ್ಯದಲ್ಲೇ ಪೂರ್ಣ ಪ್ರಮಾಣದ ಸ್ವಾವಲಂಬನೆ ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಶಾಖೆ ಹಾಗೂ ಐಎಂಎಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿಆಯೋಜನೆಗೊಂಡಿರುವ ಮೂರು ದಿನಗಳ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ ನಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ಪಾದನೆಯಲ್ಲಿ ಸ್ವಾವಲಂಬಿಯಾಗದ ದೇಶ ಸ್ವಾಭಿಮಾನಿ ದೇಶವಾಗಲು ಸಾಧ್ಯವೇ ಇಲ್ಲ. ಇದನ್ನು ಮನಗಂಡಿರುವ ಭಾರತ, ಕಳೆದ ಏಳು ವರ್ಷಗಳಿಂದೀಚೆ ಶೇ 60 ರಷ್ಟು ರಕ್ಷಣಾ ಉತ್ಪನ್ನಗಳನ್ನು ತಾನೇ ಉತ್ಪಾದಿಸಿಕೊಳ್ಳುತ್ತಿದ್ದುಪೂರ್ಣ ಪ್ರಮಾಣದ ಸ್ವಾವಲಂಬನೆ ಸಾಸುವುದರ ಜತೆಗೆ ರಫ್ತು ಮಾಡುವ ಮಟ್ಟಕ್ಕೆ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು .
ಮೊದಲ್ಲೇ ಶೇ.90 ರಷ್ಟು ರಕ್ಷಣಾ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕ್ ಇನ್ ಇಂಡಿಯಾ ಮೇಕ್ ಫಾರ್ ವಲ್ರ್ಡ್ ಫಲಪ್ರದವಾದ ನಂತರ ಭಾರತ ರಕ್ಷಣಾ ವಲಯದ ಉತ್ಪನ್ನಗಳ ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ದೇಶವಾಗಿ ಈಗಾಗಲೇ ಹೊರಹೊಮ್ಮಿರುವ ಭಾರತ ಸ್ವಾಭಿಮಾನಿ ದೇಶವಾಗಿ ವಿಶ್ವದ ಗಮನ ಸೆಳೆದಿದೆ.ಕಚ್ಚಾವಸ್ತುಗಳು ಹಾಗೂ ತೈಲೋತ್ಪನ್ನಗಳ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದಲ್ಲಿ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರ ಹೊಮ್ಮಲು ಸಾಧ್ಯ ಎಂದರು.

ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಅಮೋನಿಯಾ ಉತ್ಪಾದನೆಯಲ್ಲಿ ಗಲ್ಫ್ ಬಿಟ್ಟರೆ ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.ಭಾರತದಲ್ಲಿ ಶೇ 40 ರಷ್ಟು ಯುವ ಸಮುದಾಯವಿದ್ದು ಅಗತ್ಯ ಮಾರ್ಗದರ್ಶನ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದರೆ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಲಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ ಎಂದರು.

ಇದನ್ನೂ ಓದಿ : ವಿಧಾನಸಭೆ ಕಲಾಪಕ್ಕೆ ಸಚಿವರು ಚಕ್ಕರ್, ಸ್ಪೀಕರ್ ತರಾಟೆ

ಉತ್ಪಾದನಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಖಾತೆಗಳ ಸಚಿವ ಪ್ರಹ್ಲಾದ ಜೋಶಿ, ಕೋವಿಡ್ ನಂತರ ಆರ್ಥಿಕವಾಗಿ ಪ್ರಗತಿ ಸಾಸಿದ ದೇಶಗಳಲ್ಲಿ ಭಾರತ ವಿಶ್ವದಲ್ಲೇ 5 ನೇ ಸ್ಥಾನದಲ್ಲಿದೆ. ಹಾಗಾಗಿ ವಿಶ್ವವೇ ಭಾರತವನ್ನು ವಿಶ್ವಾಸದಿಂದ ನೋಡುತ್ತಿದ್ದು.ಮುಂಬರುವ ವರ್ಷಗಳಲ್ಲಿ ಭಾರತ ವಿಶ್ವ ಮುಖಂಡತ್ವ ವಹಿಸಲಿದೆ ಎಂದು ತಿಳಿಸಿದರು.

ಓಟಿನ ಸಲುವಾಗಿ ಎಲ್ಲವೂ ಉಚಿತ ಎಂಬ ಮನೋಭಾವದ ನಡುವೆಯೂ ಭಾರತ ಅಭಿವೃದ್ಧಿ ರಾಷ್ಟ್ರವಾಗಿ ಶಕ್ತಿಯುತವಾಗುತ್ತಿದೆ.ಕೈಗಾರಿಕೆಗಳ ಆರಂಭಕ್ಕೆ ಬೆಂಗಳೂರು ಕೇಂದ್ರ ಸ್ಥಾನವಾಗುತ್ತಿರುವುದು ಗಮನಾರ್ಹ ಎಂದು ಜೋಶಿ ಶ್ಲಾಘನೆ ವ್ಯಕ್ತಪಡಿಸಿದರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಾತನಾಡಿ ಕೈಗಾರಿಕಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾನೂನಿನಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತರಲಾಗಿದ್ದು ಕೈಗಾರಿ ಕೋದ್ಯಮಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ : “ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧ”

ಭಾರತೀಯ ಉತ್ಪಾದನಾ ಪ್ರದರ್ಶನ ಅಧ್ಯಕ್ಷ ಎಚ್ ವಿ ಎಸ್ ಕೃಷ್ಣ,ಲಘು ಉದ್ಯೋಗ ಭಾರತಿ ರಾಷ್ಟ್ರಾಧ್ಯಕ್ಷ ಬಲದೇವ್ ಭಾಯಿ ಪ್ರಜಾಪತಿ,ಕರ್ನಾಟಕ ಶಾಖೆ ಅಧ್ಯಕ್ಷ ಸಚಿನ್ ಸಬ್ನೀಸ್, ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸನ್ನ, ಸೈರ್ರಿಲ್ ಪೆರೈರಾ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.

ಏರೋಸ್ಪೇಸï, ಡಿಫೆನ್ಸ್ ಮತ್ತು ಜನರಲ್ ಇಂಜಿನಿಯರಿಂಗ್ ವಿಭಾಗಗಳಿಗೆ ಸಂಬಂಸಿದಂತೆ ಡಿಆರ್ ಡಿಓ,ಇಸ್ರೋ,ಎಚ್ ಎಎಲï, ಬಿಇಎಲï,ಬಿಎಚ್ ಇಎಲ, ಬಿಇಎಂಎಲ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು ಹಾಗೂ ಖಾಸಗಿ ಕೈಗಾರಿಕೆಗಳು ಸೇರಿದಂತೆ 400 ಕ್ಕೂ ಹೆಚ್ಚು ಮಳಿಗೆಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಪ್ರದರ್ಶನದಲ್ಲಿ ಸುಮಾರು 20 ಸಾವಿರ ವ್ಯಾಪಾರ ಪ್ರತಿನಿಗಳು ಭಾಗವಹಿಸಿದ್ದಾರೆ.

Articles You Might Like

Share This Article