ಮಹಾಪುಂಡರಿಗೆ ಮತ್ತೊಮ್ಮೆ ವಾರ್ನ್ ಮಾಡಿದ ಸಿಎಂ ಬೊಮ್ಮಾಯಿ

Social Share

ಹುಬ್ಬಳ್ಳಿ,ಡಿ.18- ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಸಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರ ಪುಂಡಾಟಿಕೆಗೆ ಕಿಡಿಕಾರಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅವರನ್ನು ಯಾವ ರೀತಿ ಇಡಬೇಕೊ ಅದನ್ನು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಹುಬ್ಬಳ್ಳಿಯ ಆದರ್ಶ ನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಸಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಅವರಿಗೆ ಸೌಹಾರ್ದಯುತವಾಗಿ ಇರಲು ಗೊತ್ತಿಲ್ಲ ಎಂದರು.

ಮಹಾರಾಷ್ಟ್ರ- ಕರ್ನಾಟಕ ಮುಖ್ಯಮಂತ್ರಿಗಳ ಹಾಗೂ ಪ್ರಮುಖರ ಜೊತೆಗೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ಸಭೆ ಮಾಡಿದ್ದಾರೆ. ಮಹಾರಾಷ್ಟ್ರ ಸಚಿವರಿಗೂ ತಾಕೀತು ಮಾಡಿದ್ದಾರೆ ಇನ್ನು ಸಹ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕ್ಯಾತೆ ಮುಂದುವರಿದ್ದು ಇದು ಸರಿಯಲ್ಲ ಎಂದು ಹೇಳಿದರು.

ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಮೊದಲನಿಂದಲೂ ಇದೇ ರೀತಿಯ ನಡೆದುಕೊಂಡು ಬಂದಿದೆ ಎಂದರು. ಈ ಕುರಿತು ಸಹ ಹಲವಾರು ಬಾರಿ ಚರ್ಚೆ ಆಗಿದೆ. ಎಂಇಎಸ್ ಪುಂಡಾಟಿಕೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಅವರನ್ನು ಯಾವ ರೀತಿ ನಿಯಂತ್ರಣ ಮಾಡಬೇಕೋ ಅದನ್ನೇ ಮಾಡುತ್ತೇವೆ ಎಂದರು.

ಶ್ರದ್ದಾ ಮಾದರಿಯಲ್ಲಿ ಮತ್ತೆರಡು ಹತ್ಯೆ, ಸಮಾಜವನ್ನು ಬೆಚ್ಚಿಬೀಳಿಸುತ್ತಿರುವ ವಿಕೃತ ಕೊಲೆಗಳು..!

ಬೆಳಗಾವಿ ಚಳಿಗಾಲ ಅವೇಶನದಲ್ಲಿ ಹಲವಾರು ಬಿಲ್ ಮಂಡನೆ ಮಾಡಲಾಗುವುದು ಎಂದ ಅವರು, ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಸಹ ಚರ್ಚೆ ಆಗಲಿದ್ದು , ಈಗಾಗಲೇ ಯಾವ ಬಿಲ್ ಮಂಡನೆ ಮಾಡಬೇಕು ಚಿಂತನೆ ಆಗಿದೆ ಅವುಗಳ ಕುರಿತು ಯಾವುದೇ ರೀತಿಯ ಸಂಶಯ ಬೇಡ. ಅವೇಶನದಲ್ಲಿ ಈ ಕುರಿತು ಸಮಗ್ರ ಚರ್ಚೆ ಮಾಡಲಾಗುವುದು ಎಂದರು.

ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಡಿಕೆಶಿ ಹಾಗೂ ಸಿದ್ದರಾಮಯ್ಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್‍ನವರು ಹೇಳಿಕೆ ಕೊಡುವಾಗ ಯೋಚಿಸಿ ಮಾತನಾಡಬೇಕು. ಸಿದ್ದರಾಮಯ್ಯ ಹಾಗೂ ಡಿಕೆಶಿ ಹೇಳುತ್ತಾರೆ ಇದೊಂದು ಆಕಸ್ಮಿಕ ಘಟನೆ ಎಂದು. ಇದು ಎಷ್ಟು ಸರಿ? ಎಲ್ಲವನ್ನೂ ಪರಿಶೀಲನೆ ಮಾಡಿ ಮಾತನಾಡಬೇಕು ಎಂದು ಸಲಹೆ ನೀಡಿದರು.

ಕಾಟಾಚಾರಕ್ಕೆ ಅಹವಾಲು ಸ್ವೀಕಾರ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆದರ್ಶನಗರದಲ್ಲಿನ ನಿವಾಸದಲ್ಲಿ ಅನೇಕ ಸಮಸ್ಯೆಗಳನ್ನು ಹೊತ್ತುಕೊಂಡಬಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು.
ಮನೆ ಇಲ್ಲದೇ ಮನೆ ಬೇಕು, ಪತಿ ಪತ್ನಿ ವರ್ಗಾವಣೆ ಆಗದೇ ಸಮಸ್ಯೆ ಆಗಿದೆ, ಸರಿಯಾದ ಪಿಂಚಣಿ ಬರತಾ ಇಲ್ಲ, ಮಕ್ಕಳು ಸರಿಯಾಗಿ ನಮ್ಮನ್ನ ನೋಡಿಕೊಳ್ಳತಾ ಇಲ್ಲಾ …ಹೀಗೆ ಹಲವಾರು ಸಮಸ್ಯೆಗಳನ್ನು ಹೊತ್ತು ಮುಖ್ಯಮಂತ್ರಿಗಳ ಮುಂದೆ ಅಲವತ್ತುಕೊಂಡರು.

ಆದರೆ ಕೇವಲ ಮನವಿ ಸ್ವೀಕಾರ ಮಾಡಿದ ಬೊಮ್ಮಾಯಿ, ನೋಡೋಣ.. ಮಾಡೋಣ ಎಂದಷ್ಟೇ ಭರವಸೆ ನೀಡುತ್ತಾ ಸಾಗಿದ್ದು, ಕಾಟಾಚಾರಕ್ಕೆ ಅರ್ಜಿ ಸ್ವೀಕರಿಸಿದಂತೆ ಭಾಸವಾಗುತ್ತಿತ್ತು.

#CM, #BasavarajBommai, #Warning, #MES, #Maharashtra,

Articles You Might Like

Share This Article