90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಮೇಲೆ ಸಿಎಂ

Social Share

ಬೆಂಗಳೂರು,ಅ.20- ವಿಧಾನಸೌಧ ಮುಂಭಾಗ ಲೋಕಾರ್ಪಣೆಗೊಂಡ 90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಫ್ಲಾಟ್‍ಫಾರ್ಮ್ ತೊಟ್ಟಿಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಸಂಸದ ಪಿ.ಸಿ.ಮೋಹನ್, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಅಮರ್‍ಕುಮಾರ್ ಪಾಂಡೆ ಕುಳಿತು ವೀಕ್ಷಣೆ ಮಾಡಿದರು.

ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ

90 ಮೀಟರ್ ಎತ್ತರದವರೆಗೂ ಏರಿಯಲ್ ಲ್ಯಾಡರ್‍ನ ತೊಟ್ಟಿಲಿನಲ್ಲಿ ನಿಂತು ಒಂದು ಸುತ್ತು ಬಂದು ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಗ್ನಿ ದುರಂತ ಉಂಟಾದ ಸಂದರ್ಭದಲ್ಲಿ 90 ಮೀಟರ್ ಎತ್ತರವಿರುವ ಈ ವಾಹನ ಸಮರ್ಥವಾಗಿ ಬೆಂಕಿಯನ್ನು ನಂದಿಸಿ ಜನರ ಪ್ರಾಣ ರಕ್ಷಣೆ ಮಾಡಲು ಸಹಕಾರಿಯಾಗಿದೆ ಎಂದರು.

ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

ಮುಂಬೈ ನಂತರ ಬೆಂಗಳೂರಿನಲ್ಲಿ ಈ ವಾಹನವಿದೆ. ವಿಧಾನಸೌಧದ ಶಿಲೆಗಳ ಕರಾರುವೊಕ್ಕು ಜೋಡಣೆ. ಅದರ ವಾಸ್ತು ಶಿಲ್ಪ ನೋಡಿ ಆಶ್ಚರ್ಯವಾಯಿತು. ವಿಧಾನಸೌಧದ ಮೇಲ್ಬಾಗದಲ್ಲಿರುವ ಗೋಪುರದ ಅಶೋಕ ಸ್ತಂಭವನ್ನು ಹತ್ತಿರದಿಂದ ನೋಡಿ ಬಹಳ ಸಂತೋಷವಾಯಿತು ಎಂದರು.

ಅಧಿಕಾರಿಗಳ ಚಳಿ ಬಿಡಿಸಿದ ಬಿಬಿಎಂಪಿ ಆಯುಕ್ತರು

ಈ ವಾಹನ ಬೆಂಗಳೂರಿಗೆ ಲಭ್ಯವಾಗಿರುವುದರಿಂದ ಅಗ್ನಿ ದುರಂತರ ನಿಯಂತ್ರಣಕ್ಕೆ ಸಹಕಾರಿಯಾಗುವುದರ ಜತೆಗೆ ಎತ್ತರದ ಕಟ್ಟಡಗಳು ನಿರ್ಮಾಣವಾಗಲು ಹಾಗೂ ನಗರ ಬೆಳೆಯಲು ಸಹಕಾರಿಯಾಗಿದೆ. ಈ ವಾಹನದಲ್ಲಿ 90 ಮೀಟರ್ ಎತ್ತರದವರೆಗೂ ಹೋಗಿದ್ದರಿಂದ ಯಾವುದೇ ರೀತಿಯ ಭಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

Articles You Might Like

Share This Article