ಮತದಾರರ ಓಲೈಕೆಗೆ ಪ್ರತಿಮೆಗಳ ಹಿಂದೆ ಬಿದ್ದ ಸಿಎಂ ಬೊಮ್ಮಾಯಿ

Social Share

ಬೆಂಗಳೂರು, ಮಾ.18- ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪ್ರತಿಮೆ ಅನಾವರಣ ಮೂಲಕ ಮತದಾರರ ಗಮನ ಸೆಳೆಯಲು ನೋಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಿಎಂ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 15 ಪ್ರತಿಮೆಗಳನ್ನು ಅನಾವರಣಗೊಳಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಬೊಮ್ಮಾಯಿ ಇನ್ನಷ್ಟು ಪ್ರತಿಮೆಗಳನ್ನು ಅನಾವರಣಗೊಳಿಸುವ ಆತುರ ತೋರುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿಯೇ ಅವರು ಕನಿಷ್ಠ ಏಳು ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ. ಪ್ರತಿಯೊಂದು ಪ್ರತಿಮೆಯು ಒಂದು ನಿರ್ದಿಷ್ಟ ಜಜಾತಿ ಅಥವಾ ಪ್ರದೇಶವನ್ನು ಪ್ರತಿನಿಧಿಸುತ್ತದೆ ಮತ್ತು ಇದು ವಿವಿಧ ಸಮುದಾಯಗಳನ್ನು ತಲುಪಲು ಬೊಮ್ಮಾಯಿ ಅವರ ಪ್ರಯತ್ನವಾಗಿದೆ.

ಕೆಲವು ಜನರು ಮತ್ತು ಅವರ ಸ್ವಂತ ಪಕ್ಷದ ನಾಯಕರು ಇದನ್ನು ಸ್ವಾಗತಿಸಿದರೆ, ಇತರರು ಪ್ರತಿಮೆಗಳಿಗೆ ಸರ್ಕಾರಿ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ದೂಷಿಸುತ್ತಿದ್ದಾರೆ.

ಸಮೃದ್ಧಿಯ ಪ್ರತಿಮೆ ಎಂದು ಕರೆದ ಸರ್ಕಾರವು ನವೆಂಬರ್‍ನಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿತು. ಪ್ರತಿಮೆ ಅನಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದರು.

ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ಕಣಕ್ಕೆ..?

ಇದೇ ತಿಂಗಳಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೊಮ್ಮಾಯಿ ಅವರು 6.5 ಅಡಿ ಎತ್ತರದ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಅನಾವರಣಗೊಳಿಸಿದರು. ಉಡುಪಿಯಲ್ಲಿ 33 ಅಡಿ ಎತ್ತರದ ಪರಶುರಾಮಮೂರ್ತಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 12 ಅಡಿ ಪ್ರತಿಮೆ,

ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ 22 ಅಡಿ ಎತ್ತರದ ಮೂರ್ತಿ, ಬೆಳಗಾವಿಯಲ್ಲಿ 36 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆ, ಇತ್ತೀಚೆಗೆ ಡಾ.ರಾಜ್‍ಕುಮಾರ್ ಅವರ ಪ್ರತಿಮೆಗಳನ್ನು ಪ್ರತಿಮೆಯನ್ನು ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅನಾವರಣಗೊಳಿಸಿದ್ದು ಇನ್ನೂ ಕೆಲವು ಅನಾವರಣಗೊಳಿಸಬೇಕಾಗಿದೆ.

ಇದೇ ವೇಳೆ ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಸುಭಾಷ್‍ಚಂದ್ರ ಬೋಸ್ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಸ್ಥಾಪಿಸುವುದಾಗಿ ಬೊಮ್ಮಾಯಿ ಘೋಷಿಸಿದರು. ವಿಧಾನಸೌಧದ ಆವರಣ ಈಗ ಡಾ.ಬಿ.ಆರ್.ಅಂಬೇಡ್ಕರ್, ಕೆಂಗಲ್ ಹನುಮಂತಯ್ಯ, ಮಹಾತ್ಮಗಾಂಧಿ ಮತ್ತಿತರ ಮಹನೀಯರ ಶಿಲ್ಪಗಳಿಂದ ಜನಮನ್ನಣೆ ಗಳಿಸಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಬಸವಣ್ಣನವರ ಪ್ರತಿಮೆಗೆ ಸಂಪುಟ ಅನುಮೋದನೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಕಳೆದ ವರ್ಷ ಕೆಂಪೇಗೌಡ ಜಯಂತಿಯಂದು ಕೆಂಪೇಗೌಡ ಪ್ರತಿಮೆ ಸ್ಥಾಪಿಸುವುದಾಗಿ ಬೊಮ್ಮಾಯಿ ಘೋಷಿಸಿದ್ದರು. ಎರಡೂ ಪ್ರತಿಮೆಗಳನ್ನು ಮಾರ್ಚ್ 23ರಂದು ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ.

ಹೌರಾ-ನವದೆಹಲಿ ಎಕ್ಸ್ ಪ್ರೆಸ್ ರೈಲು ಹರಿದು ಮೂವರ ದೇಹ ಛಿದ್ರ

ಮತದಾನದ ಸಮಯದಲ್ಲಿ ಪ್ರತಿಮೆಗಳ ಅನಾವರಣವು ಮತಗಳನ್ನು ಗಳಿಸಲು ಸಮಯ-ಪರೀಕ್ಷಿತ ವಿಧಾನವಾಗಿದೆ. ಪ್ರತಿಮೆಗಳು ಕೇವಲ ಚಿಹ್ನೆಗಳಲ್ಲ, ಐತಿಹಾಸಿಕ ಸಂಪರ್ಕಗಳನ್ನು ಹೊಂದಿವೆ.ಪ್ರತಿಮೆಗಳ ಮೂಲಕ, ರಾಜಕೀಯ ನಾಯಕರು ಹಳೆಯ ನೆನಪುಗಳನ್ನು ಅಳಿಸಿ ಹೊಸ ನೆನಪುಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಕಾಂಗ್ರೆಸ್ ಸರ್ಕಾರವಿದ್ದಾಗ ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಯೋಜನೆಗಳಿಗೆ ಒಂದು ಕುಟುಂಬದ ಹೆಸರನ್ನು ಹೆಸರನ್ನು ಇಡುತ್ತಿತ್ತು. ಪ್ರತಿಮೆಗಳು ಮತ್ತು ಪಠ್ಯಪುಸ್ತಕಗಳ ಮೂಲಕ ಬಿಜೆಪಿ ತನ್ನ ಸಿದ್ಧಾಂತದ ನಿರೂಪಣೆಯನ್ನು ರಚಿಸುತ್ತಿದೆ. ಜನರು ಈ ಪ್ರತಿಮೆಗಳು/ಹೆಸರುಗಳನ್ನು ಆಗಾಗ್ಗೆ ನೋಡುತ್ತಾರೆ ಇದು ಮತದಾರರನ್ನು ಒಲಿಯುವಂತೆ ಮಾಡುತ್ತದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.

CM Bommai, assembly, election, statues,

Articles You Might Like

Share This Article