ಬೆಳಗಾವಿ,ಡಿ.28- ಕನ್ನಡ ಭಾಷೆ ಅಂತರ್ಗತ ಶಕ್ತಿ ಹೊಂದಿದ್ದು, ಜಗತ್ತಿನಲ್ಲಿ ಯಾರಿಂದಲೂ ಈ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಿಸಿ ಮುಂದಕ್ಕೆ ಕೊಂಡೊಯ್ಯಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ ನಗರದ ಕನ್ನಡ ಭವನದಲ್ಲಿ ನೂತನವಾಗಿ ನಿರ್ಮಿಸಲಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಯಾವುದೇ ಆತಂಕವಿಲ್ಲ. ಜಗತ್ತಿನಲ್ಲಿ ಯಾವುದೇ ದೇಶಕ್ಕೆ ಹೋಗಿ ಸಾಧನೆ ಮಾಡಿದರೂ ಕೂಡ ಕನ್ನಡತನವನ್ನು ಕನ್ನಡಿಗರು ಮರೆಯಬಾರದು ಎಂದು ಹೇಳಿದರು. ಭಾಷೆ ನಾಡಿಗೆ ಬಹಳ ಮುಖ್ಯ.
ಸಂಸ್ಕøತಿ ಇಲ್ಲದೆ ಮನಷ್ಯ ಸಮಾಜವಿಲ್ಲ. ಮನುಷ್ಯರ ಹಾಗೂ ಪ್ರಾಣಿಗಳಿಗೆ ಇರುವ ವ್ಯತ್ಯಾಸವೆಂದರೆ ಅಭಿವ್ಯಕ್ತಿ. ಮನುಷ್ಯರು ಮನದಾಳದ ಭಾವನೆಯನ್ನು ಭಾಷೆಯ ಮೂಲಕ ಅಭಿವ್ಯಕ್ತಿ ಮಾಡುತ್ತಾರೆ. ಅಭಿವ್ಯಕ್ತಿ ಮೂಲಕ ಮನುಷ್ಯ ಸಮಾಜದ ಒಡನಾಟವಿದ್ದು ಭಾಷೆ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಹಳೆಗನ್ನಡ, ನುಡಿ ಕನ್ನಡ, ಜನಪದ ಕನ್ನಡ ಹೀಗೆ ಕನ್ನಡ ಭಾಷೆ ವೈವಿಧ್ಯತೆಯಿದೆ. ವಚನ ಹಾಗೂ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿವೆ.
ವಚನ ಹಾಗೂ ದಾಸ ಸಾಹಿತ್ಯವನ್ನು ಬೆಳೆಸಬೇಕು. ಇದನ್ನು ನಾಡು ಹಾಗೂ ಪ್ರಪಂಚಕ್ಕೆ ಪಸರಿಸುವ ಕೆಲಸವಾಗಬೇಕಾಗಿದೆ ಎಂದರು.
ಜಮ್ಮು-ಶ್ರೀನಗರ ಹೆದ್ಧಾರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಪೊಲೀಸರು
ಭಾಷೆ ನಮ್ಮ ಅಸ್ಮಿತೆಯಾಗಿದ್ದು ಅದನ್ನು ಮರೆಯಬಾರದು. ಸಮಾಜಕ್ಕೆ ಭಾಷಾ ಅಸ್ಮಿತೆ ಬಗ್ಗೆ ಸ್ವಾಭಿಮಾನ ವಿರಬೇಕು. ನಾಗರಿಕತೆ ಹಾಗೂ ಸಂಸ್ಕೃತಿ ಬೇರೆ ಬೇರೆ. ನಾಗರೀಕತೆ ಭೌತಿಕವಾದದು. ಸಂಸ್ಕೃತಿ ಎಂದರೆ ನಮ್ಮ ನಡೆನುಡಿ. ಕನ್ನಡ ಭಾಷೆಯಲ್ಲಿ ಪ್ರಾಮಾಣಿಕತೆ ಹಾಗೂ ಒಳ್ಳೆಯತನವಿದೆ. ಕನ್ನಡ ಸಾಕ್ಷಿ ಪ್ರಜ್ಞೆ ಮಾನವೀಯ ನೆಲೆ ಹೊಂದಿದೆ. ಈ ಮಾನವೀಯ ನೆಲೆ ಬಸವಣ್ಣ, ಅಲ್ಲಮಪ್ರಭು, ದಾಸರ ಸಾಹಿತ್ಯದಲ್ಲಿ ಕಾಣಬಹುದು ಎಂದು ಹೇಳಿದರು.
ಗಡಿ ಭಾಗದಲ್ಲಿ ಇಲ್ಲದ ಸಮಸ್ಯೆ ಹುಟ್ಟಿಸಲಾಗುತ್ತಿದೆ. ಇಲ್ಲಿ ವಾಸಿಸುವ ಬಹಳ ಜನರು ಸಾಮರಸ್ಯದಿಂದ ಬುದುಕಿದ್ದಾರೆ. ನಾವೆಲ್ಲರೂ ಕನ್ನಡ ರಕ್ಷಣೆಗೆ ಸದಾ ನಿಲ್ಲಬೇಕು. ಕನ್ನಡ ನಾಡಿನಲ್ಲಿ ಹುಟ್ಟಿದವರು ಕನ್ನಡಿಗರು ಎಂಬುದನ್ನು ಮರೆಯಬಾರದು ಎಂದರು.
2ನೇ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ ಇಂಗಿತ:
ಗಡಿಭಾಗ ಹಾಗೂ ಗಡಿಭಾಗದ ಶಾಲೆಗಳ ಅಭಿವೃದ್ಧಿ ಸರ್ಕಾರ ಸಿದ್ದವಿದೆ. ಗಡಿಭಾಗದ ಆಚೆಯ ಶಾಲೆಗಳ ಬಗ್ಗೆ ಕಾಳಜಿ ವಹಿಸಲಾಗುವುದು. 100 ಕೋಟಿ ರೂ. ಗಡಿ ಭಾಗದ ಅಭಿವೃದ್ಧಿ ನೀಡಲಾಗಿದೆ. ಗಡಿ ಪ್ರಾಧಿಕಾರದ ಅಧ್ಯಕ್ಷರು ಗಡಿ ಭಾಗದಲ್ಲಿ ಪ್ರವಾಸ ನಡೆಸಿ ಇಲ್ಲಿನ ಜನಪ್ರತಿನಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಅವರೊಂದಿಗೆ ಚರ್ಚಿಸಿ ಬಜೆಟ್ನಲ್ಲಿ ವಿಶೇಷ ಅನುದಾನ ನೀಡುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.
ಇದೇ ವೇಳೆಯಲ್ಲಿ ಈ ಹಿಂದೆ ನಡೆದ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನೆನಪು ಮಾಡಿಕೊಂಡ ಮುಖ್ಯಮಂತ್ರಿಗಳು ರಾಜ್ಯದ ಬೇರೆ ನಗರದಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ ಇಂಗಿತ ವ್ಯಕ್ತಪಡಿಸಿದರು.
ಕೆ.ಎಲ್.ಇ ಸಂಸ್ಥೆ ಹಾಗೂ ಕನ್ನಡ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಪ್ರಭಾಕರ್ ಕೋರೆ ಮಾತನಾಡಿ, ಕಲೆ ಸಾಂಸ್ಕೃತಿಕ ಕಾರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕನ್ನಡಭವನ ನಿರ್ಮಿಸಲಾಗಿದೆ. ಪೂನಾದಲ್ಲಿ ಬಾಲಗಂಧರ್ವ ಹಾಲ್ ಮಾದರಿಯಲ್ಲಿ ರಂಗಮಂದಿರ ಕಾರ್ಯ ನಿರ್ವಹಿಸಲಿದೆ.
ಜಮ್ಮು-ಶ್ರೀನಗರ ಹೆದ್ಧಾರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಪೊಲೀಸರು
ಬೆಳಗಾವಿಯಲ್ಲಿ ಭಾಷಾತೀತವಾಗಿ ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲೀಷ್ ನಾಟಕಗಳು ನಡೆಯಬೇಕು. ನಶಿಸಿಹೋಗತ್ತಿರುವ ಗ್ರಾಮೀಣ ಭಾಗದ ಪಾರಿಜಾತ ಕಲೆ ಉಳಿಯವ ನಿಟ್ಟಿನಲ್ಲಿ ರಂಗಮಂದಿರ ಬಳಕೆಗೆ ಬರಲಿದೆ.
ಬೆಳಗಾವಿಯಲ್ಲಿ ಕನ್ನಡ ಭಾಷೆಗೆ ಉತ್ತೇಜನ ನೀಡಬೇಕು. ಚಿಕ್ಕೋಡಿಯಲ್ಲಿ ಕನ್ನಡ ಭವನ, ಗಡಿ ಭಾಗದ ಹಳ್ಳಿಗಳಲ್ಲಿ ಶಾಲೆಗಳು ತೆರೆಯಬೇಕು ಎಂದರು. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳಾ ಸುರೇಶ್ ಅಂಗಡಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ಜಿಲ್ಲಾಕಾರಿ ನಿತೇಶ್ ಪಾಟೀಲ್, ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಗಿರಿಜಾ ಲೊಕೇಶ್, ಕನ್ನಡ ಭವನ ಆಡಳಿತ ಮಂಡಳಿ ಗೌರವ ಅಧ್ಯಕ್ಷ ಅಲ್ಲಮಪ್ರಭು ಸ್ವಾಮೀಜಿ, ಎಂ.ಸಿ.ಎ ಅಧ್ಯಕ್ಷ ಎಂ.ಎಸ್.ಕರಿಗೌಡರ್ ಮತ್ತಿತರರು ಉಪಸ್ಥಿತರಿದ್ದರು.
CM Bommai, Belgaum, Kannada Bhavan,