ಬೆಂಗಳೂರು,ಜ.11- ಕಾಂಗ್ರೆಸ್ ಪಕ್ಷದವರು ಹಿಂದೆ ನಾವು ಬಿಡುಗಡೆ ಮಾಡಿದ್ದ ಚಾರ್ಜ್ಶೀಟ್ಗೆ ರಾಜ್ಯದ ಜನತೆಯ ಮುಂದೆ ಉತ್ತರ ಕೊಟ್ಟು ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಮಾಜಿ ಪ್ರಧಾನಿ ಲಾಲ್ ಬಹು ದ್ದೂರ್ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅವರಿಗಿಂತ ಮೊದಲೇ ಚಾರ್ಜ್ಶೀಟ್ನ್ನು ಬಿಡುಗಡೆ ಮಾಡಿದ್ದೆವು. ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಚಾರ್ಜ್ಶೀಟ್ನಲ್ಲಿ ಯಾವುದೇ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ. ಮೊದಲು ನಿಮ್ಮ ಕಾಲದಲ್ಲಿ ನಡೆದಿರುವ ಕರ್ಮಕಾಂಡಗಳಿಗೆ ಉತ್ತರ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ವರ್ಷ ಆಗಿರುವುದರಿಂದ ಇಂತಹ ಆರೋಪಗಳು ಬರುವುದು ಸರ್ವೆ ಸಾಮಾನ್ಯ. ಇದಕ್ಕೆ ನಾವು ಹೆಚ್ಚು ಗಮನಹರಿಸಬೇಕಾದ ಅಗತ್ಯವಿಲ್ಲ. ಮೊದಲು ನಿಮ್ಮ ಸರ್ಕಾರದ ಹಗರಣಗಳು ಏನಾದವು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಿರುಗೇಟು ಕೊಟ್ಟರು.
ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ
ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಸತ್ಯ, ನಿಷ್ಠೆಯಿಂದ ಕೆಲಸ ಮಾಡಿದ ಅಪರೂಪದ ರಾಜಕಾರಣಿ. ಅವರು ಇನ್ನಷ್ಟು ದಿನ ಬದುಕಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ನೆಲೆಯೂರಲೆಂದು ತಾಸ್ಕೆಂಟ್ಗೆ ಹೋದಾಗ ಅನಿರೀಕ್ಷಿತವಾಗಿ ಸಾವನ್ನಪ್ಪಿದರು. ಇದು ಅತ್ಯಂತ ದುರಂತಮಯ ಎಂದು ವಿಷಾದಿಸಿದರು.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ RRR ಸಿನಿಮಾದ ನಾಟು ನಾಟು ಹಾಡು
ಲಾಲ್ಬಹುದ್ದೂರ್ ಶಾಸ್ತ್ರಿಯವರು ಬಡ ಕುಟುಂಬದಿಂದ ಬಂದವರು. ಶ್ರೀಮಂತರಾಗಬೇಕೆಂಬ ಹಂಬಲ ಎಂದೂ ಇಟ್ಟುಕೊಂಡಿರಲಿಲ್ಲ. ಜೈ ಜವಾನ್, ಜೈ ಕಿಶಾನ್ ಘೋಷಣೆ ನೀಡಿ ಇಡೀ ಭಾರತೀಯರಲ್ಲೇ ಸ್ವಾಭಿಮಾನದ ಕಿಚ್ಚು ಹಚ್ಚಿದರು. ಈ ಘೋಷಣೆಯಲ್ಲಿ ದೇಶದ ಸ್ವಾವಲಂಬನೆ, ಸಮೃದ್ದಿ, ಅಭಿವೃದ್ಧಿಗೆ ಬೇಕಾದ ಅಂಶಗಳಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.
CM Bommai, BJP, Congress,