ಗುರಿ ತಲುಪದ ಬಜೆಟ್ ಯೋಜನೆಗಳ ಅನುಷ್ಠಾನ

Social Share

ಬೆಂಗಳೂರು,ಡಿ.13- ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಿ 9 ತಿಂಗಳು ಕಳೆದರೂ ಯೋಜನೆಗಳ ಅನುಷ್ಠಾನ ಮಾತ್ರ ನಿರೀಕ್ಷಿತ ಮಟ್ಟ ತಲುಪಿಲ್ಲ. ಬಜೆಟ್ ಮಂಡಿಸಿದ ಬಳಿಕ ಯೋಜನೆಗಳ ಅನುಷ್ಠಾನಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ನೇತೃ ತ್ವದಲ್ಲಿ ಸಮಿತಿಯನ್ನು ರಚನೆ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದರು.

ಈಗಾಗಲೇ ಬಜೆಟ್ ಮಂಡಿಸಿ 9 ತಿಂಗಳು ಕಳೆದು ಹೊಸ ಬಜೆಟ್‍ಗೆ ಸಿದ್ದತೆ ನಡೆಯುತ್ತಿರುವಾಗ ಘೋಷಣೆ ಮಾತ್ರ ಕಾಗದಕ್ಕೆ ಸೀಮಿತವಾಗಿದೆ. ಹಣಕಾಸು ವರ್ಷದ ಇಷ್ಟು ಅಧಿವಯಲ್ಲಿ ಒಟ್ಟು ಇಲಾಖಾವಾರು ಆರ್ಥಿಕ ಪ್ರಗತಿ ಕಂಡಿರುವುದು ಕೇವಲ ಶೇ.44 ರಷ್ಟು. ಬಜೆಟ್ ವರ್ಷ ಮುಗಿಯಲು ಇನ್ನೇನು ನಾಲ್ಕು ತಿಂಗಳು ಉಳಿದಿದ್ದು, ಕನಿಷ್ಠ 50% ಆದರೂ ಪ್ರಗತಿ ಕಾಣಬೇಕಾಗಿತ್ತು.

ಆದರೆ ಸದ್ಯದ ಪ್ರಗತಿ ತೆವಳುತ್ತಾ ಸಾಗುತ್ತಿದೆ.ಈ ಸಾಲಿನಲ್ಲಿ ಎಲ್ಲಾ ಇಲಾಖೆಗಳಿಗೆ ಈವರೆಗೆ ಒಟ್ಟು 2,55,962.98 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ನವೆಂಬರ್‍ವರೆಗೆ ಎಂಟು ತಿಂಗಳಲ್ಲಿ ಒಟ್ಟು 1,27,651 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು 1,11,550.30 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಈ ಆರ್ಥಿಕ ವರ್ಷದಲ್ಲಿ ಆದಾಯ ಮೂಲಗಳು ಚೇತರಿಸಿಕೊಂಡಿದ್ದು, ನಿರೀಕ್ಷಿತ ಗುರಿ ಮೀರಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಆದರೆ ಇಲಾಖಾವಾರು ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿ ಮಾತ್ರ ನಿರಾಶಾದಾಯಕವಾಗಿದೆ.

ಪೂಜಾ ಹೆಗ್ಡೆ ಬಲೆಗೆ ಬಿದ್ದಸಲ್ಮಾನ್..!?

ಇತ್ತ ಬೊಮ್ಮಾಯಿ ಅವರು ಬಜೆಟ್ ಅನುಷ್ಠಾನಕ್ಕೆ ವೇಗ ನೀಡುವ ಸಂಬಂಧ ಇಲಾಖಾವಾರು ಸಭೆ ನಡೆಸುತ್ತಲೇ ಇದ್ದಾರೆ. ಆದರೂ ಕೂಡ ಇಲಾಖಾವಾರು ಬಜೆಟ್ ಅನುಷ್ಠಾನಕ್ಕೆ ವೇಗ ನೀಡುವಲ್ಲಿ ಸಿಎಂ ಎಡವಿದರೇ ಎಂಬ ಪ್ರಶ್ನೆ ಮೂಡಿದೆ.

ನವೆಂಬರ್ ಅಂತ್ಯದವರೆಗೆ ಎಲ್ಲಾ ಇಲಾಖೆಗಳಲ್ಲಿ ಒಟ್ಟು ಹಂಚಿಕೆಗೆ ಕೇವಲ ಶೇ.44.32 ರಷ್ಟು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ನವೆಂಬರ್ ತಿಂಗಳಲ್ಲಿ ಶೇ.54.52 ರಷ್ಟು ಮಾತ್ರ ಪ್ರಗತಿ ಸಾಸಲು ಸಾಧ್ಯವಾಗಿದೆ. ಸುಮಾರು 25 ಇಲಾಖೆಗಳು ನವೆಂಬರ್‍ವರೆಗೆ ಶೇ.44 ರ ಆಸುಪಾಸಿನಲ್ಲಿ ಪ್ರಗತಿ ಸಾಧಿಸಿರುವುದು ನೋಡಿದರೆ ಬಜೆಟ್ ಅನುಷ್ಠಾನದ ಗತಿ ಏನಿದೆ ಎಂಬುದು ಗೊತ್ತಾಗುತ್ತದೆ.

ಸುಮಾರು 14 ಇಲಾಖೆಗಳು ಪ್ರಮುಖವಾಗಿ ಕಂದಾಯ, ಗೃಹ, ಮೂಲಸೌಕರ್ಯ, ಸಣ್ಣ ನೀರಾವರಿ, ಪಶುಸಂಗೋಪನೆ, ನಗರಾಭಿವೃದ್ಧಿ, ಉನ್ನತ ಶಿಕ್ಷಣ, ಸಹಕಾರಿ, ಶಿಕ್ಷಣ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆಗಳು ಮಾತ್ರ ಶೇ.50-60 ರ ಆಸುಪಾಸಿನಲ್ಲಿ ಉತ್ತಮ ಪ್ರಗತಿ ಕಂಡಿವೆ.

ಮೋದಿ ವಿರುದ್ಧ ಹೇಳಿಕೆ : ಕಾಂಗ್ರೆಸ್‍ನ ರಾಜಾ ಪಟೇರಿಯಾ ಬಂಧನ

ಸಮಿತಿ ರಚನೆ:
ಪ್ರಮುಖ ಇಲಾಖೆಗಳ ಆರ್ಥಿಕ ಪ್ರಗತಿ ಹೀಗಿದೆ:1) ಕಾರ್ಮಿಕ ಇಲಾಖೆ:ಒಟ್ಟು ಅನುದಾನ- 608.30 ಕೋಟಿ
ಬಿಡುಗಡೆ – 379.97 ಕೋಟಿ
ಪ್ರಗತಿ – 45.42%2) ಸಮಾಜ ಕಲ್ಯಾಣ ಇಲಾಖೆ:
ಒಟ್ಟು ಅನುದಾನ – 6,354.99 ಕೋಟಿ
ಬಿಡುಗಡೆ – 3,980.56 ಕೋಟಿ
ಪ್ರಗತಿ – 42%3) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
ಒಟ್ಟು ಅನುದಾನ – 5,589.09 ಕೋಟಿ
ಬಿಡುಗಡೆ – 2,382.78 ಕೋಟಿ
ಪ್ರಗತಿ – 32.09%4) ಆರೋಗ್ಯ ಇಲಾಖೆ:
ಒಟ್ಟು ಅನುದಾನ – 15,743.15 ಕೋಟಿ
ಬಿಡುಗಡೆ – 7,494.91 ಕೋಟಿ
ಪ್ರಗತಿ – 43.08%5) ಜಲಸಂಪನ್ಮೂಲ ಇಲಾಖೆ:
ಒಟ್ಟು ಅನುದಾನ – 21,011.99 ಕೋಟಿ
ಬಿಡುಗಡೆ – 8,183.17 ಕೋಟಿ
ಪ್ರಗತಿ – 42.10%6) ಇಂಧನ ಇಲಾಖೆ:
ಒಟ್ಟು ಅನುದಾನ – 12,663.55 ಕೋಟಿ
ಬಿಡುಗಡೆ – 4,913.17 ಕೋಟಿ
ಪ್ರಗತಿ – 44.73%7) ಅರಣ್ಯ ಇಲಾಖೆ:
ಒಟ್ಟು ಅನುದಾನ – 2,281.53 ಕೋಟಿ
ಬಿಡುಗಡೆ – 1353.30 ಕೋಟಿ
ಪ್ರಗತಿ -41.22%8) ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:
ಒಟ್ಟು ಅನುದಾನ – 1,569.91 ಕೋಟಿ
ಬಿಡುಗಡೆ – 727.84 ಕೋಟಿ
ಪ್ರಗತಿ – 34.95%9) ಗ್ರಾಮೀಣಾಭಿವೃದ್ಧಿ ಇಲಾಖೆ:
ಒಟ್ಟು ಅನುದಾನ – 25,018.88 ಕೋಟಿ
ಬಿಡುಗಡೆ – 9,490.54 ಕೋಟಿ
ಪ್ರಗತಿ- 35.87%10) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಒಟ್ಟು ಅನುದಾನ – 2,949.35 ಕೋಟಿ
ಬಿಡುಗಡೆ – 1,224.60 ಕೋಟಿ
ಪ್ರಗತಿ – 27.42%11) ಕೃಷಿ ಇಲಾಖೆ:
ಒಟ್ಟು ಅನುದಾನ – 7,784.51 ಕೋಟಿ
ಬಿಡುಗಡೆ – 2,599.47 ಕೋಟಿ
ಪ್ರಗತಿ – 22.65%12) ಆಹಾರ ಇಲಾಖೆ:
ಒಟ್ಟು ಅನುದಾನ – 2,984.59 ಕೋಟಿ
ಬಿಡುಗಡೆ – 1,419.84 ಕೋಟಿ
ಪ್ರಗತಿ – 30.73%13) ವಸತಿ ಇಲಾಖೆ:
ಒಟ್ಟು ಅನುದಾನ – 5,984.86 ಕೋಟಿ
ಬಿಡುಗಡೆ – 1,272.41 ಕೋಟಿ
ಪ್ರಗತಿ – 34.10%14) ಸಾರಿಗೆ ಇಲಾಖೆ:
ಒಟ್ಟು ಅನುದಾನ – 4,554.75 ಕೋಟಿ
ಬಿಡುಗಡೆ – 2,227.73 ಕೋಟಿ
ಪ್ರಗತಿ – 27.31%
15) ಪ್ರವಾಸೋದ್ಯಮ ಇಲಾಖೆ:
ಒಟ್ಟು ಅನುದಾನ- 344.74 ಕೋಟಿ
ಬಿಡುಗಡೆ- 147.64 ಕೋಟಿ
ಪ್ರಗತಿ- 22.01%

CM Bommai, budget projects, implementation,

Articles You Might Like

Share This Article