ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅಸುರರ ಪಟ್ಟಿಯೇ ಇದೆ : ಸಿಎಂ ಗರಂ

Social Share

ಹುಬ್ಬಳ್ಳಿ, ಫೆ.19- ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅಸುರರ ಪಟ್ಟಿಯೇ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಬಿಜೆಪಿ ಭ್ರಷ್ಟಾಸುರ ಸರ್ಕಾರ ಎಂಬ ರಣದೀಪ್ ಸುರ್ಜೆವಾಲ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ಗೆ ಜನ ಈಗಾಗಲೇ ನರಕ ತೋರಿಸಿದ್ದಾರೆ.

ಆ ಪಕ್ಷದಲ್ಲಿ ಅಸುರರ ದೊಡ್ಡ ಪಟ್ಟಿಯೇ ಇದೆ. ಕರ್ನಾಟಕದ ಬಗ್ಗೆ ಸುರ್ಜೆವಾಲ ಅವರಿಗೆ ಏನು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷದ ಬಗ್ಗೆ ಹಾಗೂ ನಮ್ಮ ಆಡಳಿತದ ಕುರಿತು ಮಾತನಾಡುವ ಯಾವ ನೈತಿಕತೆಯೂ ಸುರ್ಜೆವಾಲ ಅವರಿಗೆ ಇಲ್ಲ. ಮೊದಲು ಕಾಂಗ್ರೆಸ್ ಪಕ್ಷದ ಒಳಜಗಳ ಸರಿಪಡಿಸಿಕೊಳ್ಳಲಿ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಮಸ್ಯೆಗಳಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಇವರ ಬೇಜವಾಬ್ದಾರಿ ಮಾತುಗಳಿಂದ ಏನೂ ಸಾಸಲು ಸಾಧ್ಯವಿಲ್ಲ. ಚುನಾವಣೆಗೋಸ್ಕರ ಆಕಾಶ ತೋರಿಸುತ್ತಿದ್ದಾರೆ. ಜನರನ್ನು ಮರುಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ನಡೆಯುವುದಿಲ್ಲ ಎಂದು ಹೇಳಿದರು.

ಗೃಹಿಣಿಶಕ್ತಿ ಯೋಜನೆ ನಾನು ಜಾರಿಗೊಳಿಸುವುದಾಗಿ ಹೇಳಿದ ಮೇಲೆ ಕಾಂಗ್ರೆಸ್‍ನವರು ಗೃಹಲಕ್ಷ್ಮಿ ಯೋಜನೆ ಮಾಡಿ ನಮ್ಮ ಯೋಜನೆ ನಕಲು ಮಾಡಿದ್ದಾರೆ. ನಮ್ಮ ಯೋಜನೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದ್ದೇನೆ. ಕಳೆದ ಬಾರಿ ಬಜೆಟ್ ಅನುಷ್ಠಾನಕ್ಕೆ ಸಮಿತಿ ಮಾಡಲಾಗಿತ್ತು. ಕಳೆದ ಬಜೆಟ್‍ನ ಶೇ.90ರಷ್ಟು ಅನುಷ್ಠಾನ ಮಾಡಿದ್ದೇವೆ ಎಂದು ಹೇಳಿದ ಅವರು, ಈ ಬಾರಿಯೂ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಬೇಜವಾಬ್ದಾರಿ ತೋರಿದ ಕಾರಣಕ್ಕೆ ಜನ ಅವರನ್ನು ದೂರ ಇರಿಸಿದ್ದಾರೆ. ಕಿವಿಮೇಲೆ ಹೂವಿಟ್ಟುಕೊಂಡು ಪ್ರತಿಭಟನೆ ಮಾಡಿದ ಕುರಿತು ನಾನು ಈಗಾಗಲೇ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ. ಕಾಂಗ್ರೆಸ್‍ನವರು ಇಷ್ಟುದಿನ ಜನರ ಕಿವಿ ಮೇಲೆ ಹೂವಿಟ್ಟಿದ್ದರು. ಈಗ ಜನರೇ ಅವರ ಕಿವಿಮೇಲೆ ಹೂವಿಟ್ಟಿದ್ದಾರೆ. ಚುನಾವಣೆ ಮುಗಿದರೂ ಅವರ ಕಿವಿಮೇಲೆ ಖಾಯಂ ಆಗಿ ಹೂವು ಇರಲಿದೆ. ಇನ್ನು ಮುಂದೆ ಅವರು ಹೂವು ಇಟ್ಟುಕೊಂಡೇ ಓಡಾಡಬೇಕು ಎಂದು ಹೇಳಿದರು.

ಪಾಕಿಸ್ತಾನ ದಿವಾಳಿಯಾಗಿದೆ : ಒಪ್ಪಿಕೊಂಡ ರಕಣಾ ಸಚಿವ

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಿಎಂ ಅಹವಾಲುಗಳನ್ನು ಸ್ವೀಕರಿಸಿದರು. ಹಾವೇರಿ ಜಿಲ್ಲೆ , ಶಿಗ್ಗಾಂವ್ ಸೇರಿದಂತೆ ನಾಡಿನ ಅನೇಕ ಕಡೆಗಳಿಂದ ಬಂದಿದ್ದ ಜನರು ದೇವಸ್ಥಾನ ನಿರ್ಮಾಣ, ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನ, ವರ್ಗಾವಣೆ, ಆಸ್ತಿ ವ್ಯಾಜ್ಯ ಪರಿಹಾರ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.

CM Bommai, Congress party

Articles You Might Like

Share This Article