ಹೆಚ್ಚಿದ ಸಚಿವಾಕಾಂಕ್ಷಿಗಳ ಒತ್ತಡ : ಸಂಪುಟ ವಿಸ್ತರಣೆಗೆ ಷಾ ಬಳಿ ಸಿಎಂ ಬೇಡಿಕೆ

Social Share

ಬೆಂಗಳೂರು,ಡಿ.28-ಸಚಿವ ಸಂಪುಟ ಆಕಾಂಕ್ಷಿಗಳ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಹಿರಿಯ ನಾಯಕರ ಮೂಲಕ ಮನವಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.

ಸಂಪುಟ ವಿಸ್ತರಣೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಸೋಮವಾರ ದೆಹಲಿಗೆ ಹೋಗಿದ್ದ ಬಸವರಾಜ ಬೊಮ್ಮಾಯಿ ಅವರು ವರಿಷ್ಟರ ಗ್ರೀನ್ ಸಿಗ್ನಲ್ ಪಡೆಯಲಾಗದೆ ವಾಪಸ್ ಆಗಿದ್ದರು. ಆದರೆ, ತಾವು ಬರಿಗೈಲಿ ವಾಪಸ್ ಆದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿ,ಸಧ್ಯದಲ್ಲೇ ಸಂಪುಟ ವಿಸ್ತರಣೆ ಖಚಿತ ಎಂದು ಭರವಸೆ ನೀಡಿದ್ದಾರೆ.

ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನಿಮ್ಮಿಬ್ಬರ ಜತೆ ಒಕ್ಕಲಿಗ ಸಮುದಾಯದ ಸಿ.ಪಿ.ಯೋಗೀಶ್ವರ್ ಅವರನ್ನು ಸೇರಿಸಿಕೊಳ್ಳಲು ನಾನು ಬಯಸಿದ್ದಾ. ಮತ್ತು ಇದೇ ಕಾರಣಕ್ಕಾಗಿ ದೆಹಲಿಗೆ ಹೋದಾಗ ವರಿಷ್ಟರ ಮುಂದೆ ಈ ಕುರಿತು ಪ್ರಸ್ತಾಪ ಮಂಡಿಸಿದ್ದೆ.

ಆದರೆ, ನಿಮ್ಮಿಬ್ಬರನ್ನು ಹೊರತುಪಡಿಸಿ ಬೇರೆಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ವರಿಷ್ಟರಿಗೆ ಒಲವಿಲ್ಲ. ಇವತ್ತು ಒಕ್ಕಲಿಗ ಕೋಟಾದಡಿ ಸಿ.ಪಿ.ಯೋಗೀಶ್ವರ್ ಅವರಿಗೆ ಮಂತ್ರಿಯಾಗುವ ಅವಕಾಶ ನೀಡಿದರೆ, ಲಿಂಗಾಯತ ಕೋಟಾದಲ್ಲಿ ಒಬ್ಬರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ.

ಶಬರಿ ಮಲೈಗೆ ಹರಿದು ಬಂದ ಭಕ್ತ ಸಾಗರ, 225 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ

ಯಾಕೆಂದರೆ ಉಮೇಶ್ ಕತ್ತಿ ಅವರ ನಿಧನದ ನಂತರ ಸಂಪುಟದಲ್ಲಿ ಲಿಂಗಾಯತರ ಕೋಟಾದಲ್ಲಿ ಯಾರನ್ನೂ ಮಂತ್ರಿ ಮಂಡಲಕ್ಕೆ ತೆಗೆದುಕೊಂಡಿಲ್ಲ. ಇದೇ ರೀತಿ ಒಕ್ಕಲಿಗ,ಲಿಂಗಾಯತರಿಗೆ ಅವಕಾಶ ನೀಡಿದರೆ ಗೊಲ್ಲರು ಸೇರಿದಂತೆ ಇನ್ನು ಕೆಲ ಸಮುದಾಯಗಳಿಗೆ ಅವಕಾಶ ನೀಡಬೇಕು ಎಂಬ ಕೂಗು ಏಳುತ್ತದೆ. ಹೀಗಾಗಿ ಒಕ್ಕಲಿಗ ಕೋಟಾದಡಿ ಯಾರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅಮಿತ್ ಷಾ ಮತ್ತು ನಡ್ಡಾ ಅವರು ಹೇಳಿದ್ದಾರೆ.

ಅರ್ಥಾತ್, ಪಕ್ಷದ ವರಿಷ್ಟರಿಗೆ ನಿಮ್ಮಿಬ್ಬರನ್ನು ಮಂತ್ರಿ ಮಾಡಲು ಇಷ್ಟವಿದೆ. ಆದರೆ ನಿಮ್ಮಿಬ್ಬರನ್ನು ಹೊರತುಪಡಿಸಿ ಬೇರೆಯವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವುದು ವರಿಷ್ಟರಿಗೆ ಒಪ್ಪಿಗೆಯಿಲ್ಲ. ಹೀಗಾಗಿ ಡಿ.29 ರಂದು ಕರ್ನಾಟಕಕ್ಕೆ ಬರುತ್ತಿರುವ ಅಮಿತ್ ಷಾ ಅವರ ಬಳಿ,ಹೈಕಮಾಂಡ್ ಪ್ರಮುಖರಾದ ಅರುಣ್ ಸಿಂಗ್ ಅವರ ಮೂಲಕ ಮನವಿ ಸಲ್ಲಿಸೋಣ.

ಯಾಕೆಂದರೆ ನಿಮ್ಮಿಬ್ಬರನ್ನೇ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಕೆಲಸ ನನ್ನಿಂದಾಗಿದೆ ಎಂದರೆ ಸಚಿವ ಪದವಿ ಆಕಾಂಕ್ಷಿಗಳು ಅಸಮಾಧಾನಗೊಳ್ಳುತ್ತಾರೆ.ಹೀಗಾಗಿ ವರಿಷ್ಟರ ನಡುವಣ ಚರ್ಚೆಯ ಫಲಶೃತಿಯಾಗಿ ನೀವು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾದಿರಿ ಎಂಬ ಸಂದೇಶ ರವಾನೆಯಾಗಬೇಕು.

ಹೀಗೆ ವರಿಷ್ಟರ ತೀರ್ಮಾನದ ಅನುಸಾರ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು ಎಂದಾಗ,ಇತರ ಸಚಿವ ಪದವಿ ಆಕಾಂಕ್ಷಿಗಳು ವಿರೋಧದ ಧ್ವನಿ ಎತ್ತುವ ಸಾಧ್ಯತೆ ಕಡಿಮೆ ಎಂದು ಬಸವರಾಜ ಬೊಮ್ಮಾಯಿ ಅವರು ಈ ಇಬ್ಬರು ನಾಯಕರಿಗೆ ವಿವರಿಸಿದ್ದಾರೆ.

ಆನ್‌ಲೈನ್‌ನಲ್ಲಿ ಆಸ್ತಿ ವಿವರಗಳ ವ್ಯವಸ್ಥೆ, ನಕಲಿ ದಾಖಲೆಗೆ ಕಡಿವಾಣ

ಅವರ ಭರವಸೆಯ ಹಿನ್ನೆಲೆಯಲ್ಲಿ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜ್ಯ ಪ್ರವಾಸದ ಮೇಲೆ ಗಮನ ನೆಟ್ಟಿದ್ದು, ಅವರು ಬಂದು ಹೋದ ನಂತರ ಹೊಸ ವರ್ಷದ ಆರಂಭದಲ್ಲಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವ ಲೆಕ್ಕಾಚಾರದಲ್ಲಿದ್ದಾರೆ.

CM Bommai, demands, Amit Shah, cabinet expansion,

Articles You Might Like

Share This Article