ಚುನಾವಣೆಯಲ್ಲಿ ಗೆದ್ದರಷ್ಟೇ ಸಾಲದು ಜನರ ಮನಸ್ಸನ್ನೂ ಗೆಲ್ಲಬೇಕು : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಜ.5- ವಿಧಾನಪರಿಷತ್ ಹಾಗೂ ವಿಧಾನಸಭೆಗೆ ಆಯ್ಕೆ ಆಗುವಂತೆ ಜನರ ಹೃದಯದಲ್ಲಿ ಸ್ಥಾನ ಗಳಿಸುವುದೂ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಕಾಸಸೌಧದಲ್ಲಿ ಏರ್ಪಡಿಸಿದ್ದ ವಿಧಾನಪರಿಷತ್ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಶಾಸನಸಭೆಗೆ ಆಯ್ಕೆಯಾದರಷ್ಟೇ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಆಯ್ಕೆಯಾದ ನಂತರ ಜನರ ಹೃದಯ ಗೆಲ್ಲುವಂತಹ ಕೆಲಸಗಳನ್ನು ಮಾಡಬೇಕು. ಆಗಲೇ ಜನಪ್ರತಿನಿಗಳ ಗೌರವ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಕ್ಷೇತ್ರದ ಪ್ರಮುಖರು ವಿಧಾನ ಪರಿಷತ್‍ಗೆ ಬರುತ್ತಾರೆ, ತಮ್ಮ ಅನುಭವಗಳನ್ನು ಧಾರೆ ಎರೆಯುತ್ತಾರೆ . ಹಲವಾರು ಸಂದÀರ್ಭದಲ್ಲಿ ವಿಧಾನ ಪರಿಷತ್ ಬೇಕಾ? ಎಂಬುದರ ಬಗ್ಗೆ ಚರ್ಚೆ ಆಗುತ್ತದೆ, ವಿಧಾನ ಪರಿಷತ್ ಹಾಗೂ ವಿಧಾನಪರಿಷತ್ ಸದಸ್ಯರ ಕಾರ್ಯದ ಬಗ್ಗೆ ಸಿಂಹಾವಲೋಕನ ಆಗತ್ಯ ಎಂದು ಸಲಹೆ ಮಾಡಿದರು.
ರಾಜಕಾರಣಕ್ಕೆ ನಿವೃತ್ತಿ, ವಿದ್ಯಾರ್ಹತೆ ಇರುವುದಿಲ್ಲ. ಇಂದು ನಿವೃತ್ತರಾಗುತ್ತಿರುವವರನ್ನು ನಿವೃತ್ತಿ ಎಂದುಹೇಳುವುದಿಲ್ಲ. ರಾಜಕಾರಣದಲ್ಲಿ ರಿಲವೆಂಟ್ ಆಗಿರುವುದು ತುಂಬ ಮುಖ್ಯ. ಕ್ರಿಯಾಶೀಲತೆಯಿಂದ ಮಾತ್ರ ರಾಜಕಾರಣದಲ್ಲಿ ಬೇರೆ ಬೇರೆ ಆಯಾಮಗಳಿಂದ ಪುನರಾಯ್ಕೆ ಆಗಲು ಸಾಧ್ಯ ಎಂದರು.
ವಿಧಾನಪರಿಷತ್ ಡ್ಯೂಯಲ್ ಕ್ಯಾಮೆರಾ ಸಿಸ್ಟಮ್‍ನಂತೆ ವಿಧಾನ ಪರಿಷತ್‍ಗೆ ದಿವ್ಯ ಪರಂಪರೆಯಿದೆ, ಮಹತ್ವದ ಚರ್ಚೆಗಳು ಇಲ್ಲಿ ನಡೆದಿವೆ. 7-8 ದಿನಗಳು ವಿಶ್ವವಿದ್ಯಾಲಯದ ವಿಧೇಯಕಗಳ ಬಗ್ಗೆ ಚರ್ಚೆಯಾಗಿದೆ. ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿರುವುದು ಈ ಪರಿಷತ್‍ನ ಘನತೆಯನ್ನು ಹೆಚ್ಚಿಸಿದೆ ಎಂದು ಹೊಗಳಿದರು.
ನಾನೂ ಕೂಡ ವಿಧಾನ ಪರಿಷತ್ ಸದಸ್ಯನಾಗಿದ್ದವನು. ನಾವು ಹೋದಾಗ ಹಂಗೆ ಹೋಗಿದ್ದು, ಈ ರೀತಿ ಕಾರ್ಯಕ್ರಮ ಮಾಡಿರಲಿಲ್ಲ. ಆಗಿನ ಸಭಾಪತಿಯವರಿಗೆ ಈ ರೀತಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಬೇಕು ಎಂದು ಅನಿಸಿರಲಿಲ್ಲ. ಆದರೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಇಂದು ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ಬೀಳ್ಕೊಡುಗೆ ಕೊಡುತ್ತಿರುವುದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಷ್ಟಾಚಾರದಂತೆ ಮೊದಲು ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಅವರು ಮಾತನಾಡಬೇಕಿತ್ತು. ಆದರೆ ಸಿಎಂ ಅವರು ನಾನು ಮಾತನಾಡುತ್ತೇನೆ ಎಂದು ಸಿಎಂ ಹೇಳುತ್ತಿದ್ದಂತೆ ಅವರ ಮನವಿಗೆ ಸಭಾಪತಿ ಸ್ಪಂದಿಸಿದರು. ಸದಸ್ಯರಿಗೆ ಬೀಳ್ಕೊಡುಗೆ: ಅಕಾರಾವ ಮುಗಿದ ವಿಧಾನಪರಿಷತ್‍ನ ಸದಸ್ಯರನ್ನು ಇಂದು ಅತ್ಯಂತ ಆತ್ಮೀಯವಾಗಿ ಬೀಳ್ಕೊಡಲಾಯಿತು.
ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕರಾಗಿದ್ದ ಎಸ್.ಆರ್.ಪಾಟೀಲ್, ಸದಸ್ಯರಾದ ವಿಜಯಸಿಂಗ್, ಬಿಜೆಪಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಗೋಟ್ನೇಕರ್ ಲಕ್ಷ್ಮಣ್, ಬಸವರಾಜ ಪಾಟೀಲ್ ಇಟಗಿ, ಕೆ.ಸಿ.ಕೊಂಡಯ್ಯ, ಜಿ.ರಘು ಆಚಾರ್, ಆರ್.ಪ್ರಸನ್ನಕುಮಾರ್, ಕೆ.ಪ್ರತಾಪಚಂದ್ರ ಶೆಟ್ಟಿ, ಎಂ.ಎ.ಗೋಪಾಲಸ್ವಾಮಿ, ಕಾಂತರಾಜ್, ಎನ್.ಅಪ್ಪಾಜಿಗೌಡ, ಎಂ.ನಾರಾಯಣಸ್ವಾಮಿ, ಸಿ.ಆರ್.ಮನೋಹರ್, ಸುನೀಲ್ ಸುಬ್ರಹ್ಮಣ್ಯ, ಆರ್.ಧರ್ಮಸೇನ, ಸಂದೇಶ್ ನಾಗರಾಜ್ ಅವರುಗಳ ಅಕಾರ ಅವ ಇಂದಿಗೆ ಮುಕ್ತಾಯವಾಯಿತು.
ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಪರಿಷತ್ ಚುನಾವಣೆಯಲ್ಲಿ ಸುನೀಲ್ ಪಾಟೀಲ್, ಬಿ.ಜಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ರಾಣೇಶ್.ಎಂ.ಕೆ, ಎಸ್. ರವಿ ಅವರುಗಳು ಪರಿಷತ್‍ಗೆ ಪುನಾರಾಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿ, ಬಿ.ಎಲ್.ಶಂಕರ್ ಉಪಸ್ಥಿತರಿದ್ದರು.

Articles You Might Like

Share This Article