ಬೆಂಗಳೂರು ಫೆ.25- ರಾಜ್ಯದ ಎಲ್ಲ ಮುಖ್ಯಮಂತ್ರಿಗಳ ಬಗ್ಗೆ ಸಾಹಿತ್ಯ ರಚನೆ ಮಾಡಿ ಜನರಿಗೆ, ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಕಂಚಿನ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕ ಏಕೀಕರಣದ ಹೋರಾಟ, ಆಗಿನ ಜನರ ಮನಸ್ಥಿತಿ,
ಬೇರೆ ಬೇರೆ ಹೊರಾಟಗಳು, ಎಲ್ಲಾ ಮುಖ್ಯಮಂತ್ರಿಗಳು ತೆಗೆದುಕೊಂಡ ತಿರ್ಮಾನಗಳ ಒಂದು ಮ್ಯೂಸಿಯಂ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಕೆ.ಸಿ.ರೆಡ್ಡಿ ಅವರ ಹುಟ್ಟೂರಲ್ಲಿ ಸ್ಮಾರಕ ಮಾಡಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನಿಡಲಿದೆ. ಇಂತಹ ನಾಯಕರ ತ್ಯಾಗ ಬಲಿದಾನ ಮುಂದಿನ ಜನಾಂಗಕ್ಕೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ಆಡಳಿತ ವಿರೋಧಿ ಅಲೆ : ಬಿಜೆಪಿ ಶಾಸಕರಿಗೂ ಟಿಕೆಟ್ ತಪ್ಪುವ ಭೀತಿ
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ನಮ್ಮೆಲ್ಲರ ಆದರ್ಶ ಪ್ರಾಯರಾದ ಕೆಸಿ ರೆಡ್ಡಿಯವರ ಪ್ರತಿಮೆ ಅನಾವರಣ ಮಾಡಿದ್ದೇವೆ. ಅವರು ಸ್ವಾತಂತ್ರ್ಯ ಬಂದ ಕೂಡಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.ಅವರು ರೈತ ಕುಟುಂಬದಿಂದ ಬಂದು ವಕೀಲರಾಗಿ, ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಜಾ ಪ್ರತಿನಿಧಿ ಎಂಬ ಪಕ್ಷ ಕಟ್ಟಿದ್ದರು ಎಂದು ತಿಳಿಸಿದರು.
ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು. ಅವರು ಭವಿಷ್ಯದ ನಾಡು ಕಟ್ಟಲು ಅಗತ್ಯವಿರುವ ಶಾಸನ ರಚನೆ, ಸರ್ಕಾರದ ಯಂತ್ರ ರಚನೆ ಎಲ್ಲವನ್ನು ತಾವಿದ್ದ ನಾಲ್ಕೂವರೆ ವರ್ಷದಲ್ಲಿ ಬಿಟ್ಟು ಹೋಗಿದ್ದಾರೆ. ಅವರು ಆದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಶಿಕ್ಷಕರ ಹೆಣ ಬೇಕು..? ” ಸಿದ್ದರಾಮಯ್ಯ ಆಕ್ರೋಶ
ಆ ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎನ್ನುವುದು ನಮ್ಮ ನಂಬಿಕೆ ಎಂದರು. ನಾನು ಅವರ ಜನ್ಮ ದಿನಾಚರಣೆಗೆ ಬಂದಾಗ ಅವರ ಪ್ರತಿಮೆ ಮಾಡುವ ಬಗ್ಗೆ ಮಾತನಾಡಿದ್ದೇ. ಕರ್ನಾಟಕಕ್ಕೆ ಅಡಿಪಾಯ ಹಾಕಿದ ನಾಯಕನನ್ನು ನೆನೆಯಲು ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದು ಹೇಳಿದರು.
CM Bommai, KC Reddy, bronze, statue, vidhana soudha,