ಐಫೋನ್ ಘಟಕ ಸ್ಥಾಪನೆ ಕುರಿತು ಬೊಮ್ಮಾಯಿ ಸುಳ್ಳು ಹೇಳಿದ್ದಾರೆ : ಕಾಂಗ್ರೆಸ್

Social Share

ಬೆಂಗಳೂರು,ಮಾ.5- ಕರ್ನಾಟಕದಲ್ಲಿ ಆಪಲ್ ಐ-ಫೋನ್ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾರ್ಚ್ 3ರಂದು ತೈವಾನ್ ಮೂಲದ ಫಾಕ್ಸ್‍ಕಾನ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯಕಾರ್ಯ ನಿರ್ವವಧಿಣಾಕಾರಿ ಯಂಗ್ ಲಿಯು ತಮ್ಮ 17 ಮಂದಿ ಅಧಿಕಾರಿಗಳ ನಿಯೋಗದ ಜೊತೆ ಕರ್ನಾಟಕಕ್ಕೆ ಭೇಟಿ ನೀಡಿದ್ದರು.

ದೊಡ್ಡಬಳ್ಳಾಪುರ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿ ಪಡಿಸಿದ ನಿವೇಶನದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಮತ್ತೊಂದು ಪ್ರಕರಣ : ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿನೆ

ಫಾಕ್ಸ್‍ಕಾನ್ ಸಂಸ್ಥೆ ರಾಜ್ಯದಲ್ಲಿ ಐದು ಸಾವಿರ ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲಿದೆ, ಇದರಿಂದ ರಾಜ್ಯದಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಕಚೇರಿ ಸಹಿತವಾಗಿ, ಸಂಬಂಧ ಪಟ್ಟ ಸಚಿವರು ಹೇಳಿಕೆ ನೀಡಿದ್ದರು.

ಇದು ಔದ್ಯೋಗಿಕ ವಲಯದಲ್ಲಿ ಸಂಚಲನ ಮೂಡಿಸಿತ್ತು. ಈ ಮೊದಲು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಿದ್ದ ಐ-ಫೋನ್ ತಯಾರಿಕಾ ಸಂಸ್ಥೆ ನೆರೆ ರಾಜ್ಯಕ್ಕೆ ವಲಸೆ ಹೋಗಿತ್ತು. ಇದರಿಂದಾಗಿ ರಾಜ್ಯಕ್ಕಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಫಾಕ್ಸ್‍ಕಾನ್ ಸಂಸ್ಥೆ ಹೂಡಿಕೆ ರಾಜ್ಯ ಸರ್ಕಾರಕ್ಕೆ ಆಸರೆಯಾಗಿತ್ತು.

ಆದರೆ ಭಾರತದಲ್ಲಿ ಹೂಡಿಕೆ ಸಂಬಂಧ ಪಟ್ಟಂತೆ ಯಾವುದೆ ಒಡಂಬಡಿಕೆಯಾಗಿಲ್ಲ ಎಂದು ಫಾಕ್ಸ್‍ಕಾನ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ ಎಂದು ನಿನ್ನೆ ವರದಿಯಾಗಿದೆ. ಇದನ್ನು ಮೂಲಾಧಾರವಾಗಿಟ್ಟುಕೊಂಡು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ, ಕೆಪಿಸಿಸಿ ಸೇರಿದಂತೆ ಅನೇಕರ ಅಕೃತ ಟ್ವಿಟರ್ ಖಾತೆಗಳಲ್ಲಿ ಫಾಕ್ಸ್‍ಕಾನ್ ಹೂಡಿಕೆ ನಿರಾರಕಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ, ಕಿವಿಮೇಲೆ ಹೂವಿಟ್ಟಿದ್ದಾರೆ ಎಂಬರ್ಥದ ಟ್ವೀಟ್‍ಗಳು ವ್ಯಾಪಕವಾಗಿವೆ.

ಕೆಪಿಸಿಸಿ ಖಾತೆಯಲ್ಲಿ ಮಾಡಲಾದ ಟ್ವೀಟ್‍ನಲ್ಲಿ, ಫಾಕ್ಸ್‍ಕಾನ್ ಕಂಪೆನಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಯ್ತು ಎಂದಿರುವ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹೇಳಿಕೆಯನ್ನು ಫಾಕ್ಸ್‍ಕಾನ್ ಕಂಪೆನಿ ನಿರಾಕರಿಸಿದೆ. ರಾಜ್ಯಕ್ಕೆ ಸುಳ್ಳು ಹೇಳಿದ್ದೇಕೆ? ಸಿಎಂ ಹುದ್ದೆಯ ಜವಾಬ್ದಾರಿ ಮರೆತು ಫೇಕ್ ನ್ಯೂಸ್ ಹರಿಬಿಟ್ಟಿದ್ದೇಕೆ ?, ಉದ್ಯೋಗ ಬಯಸುತ್ತಿರುವ ಯುವಕರಿಗೆ ಕಿವಿ ಮೇಲೆ ಹೂ ಇಟ್ಟಿದ್ದೇಕೆ? ಎಂದು ಪ್ರಶ್ನಿಸಲಾಗಿದೆ.

ಸುಳ್ಳೇ ಬಿಜೆಪಿಯ ಮನೆದೇವ್ರು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸ್ವತಃ ಸಿಎಂ ಸುಳ್ಳು ಹೇಳಿದ್ದು ನಾಚಿಕೆಗೇಡಿನ ಸಂಗತಿ. ಬಸವರಾಜ ಬೊಮ್ಮಾಯಿ ಅವರೇ, ತಾವು ಬಲು ಶಾಣ್ಯ ಇದಿರ್ರಿ. ಬಾಳ್ ಚೆನ್ನಾಗಿಕಿವಿ ಮೇಲೆ ಹೂ ಇಡತ್ತೀರಿ. ಒಪ್ಪಂದವೇ ಆಗದೆ ಐಫೆÇೀನ್ ತಯಾರಿಕಾ ಘಟಕ ಸ್ಥಾಪನೆ ಆಗಿಯೇ ಬಿಡುತ್ತದೆ ಎಂದು ಸುಳ್ಳು ಹೇಳಿದ್ದೇಕೆ. ಬಿಜೆಪಿಯ ಸುಳ್ಳಿಗೆ ಮತ್ತೊಂದು ಪುರಾವೆ ಸಿಕ್ಕಿದೆ. ಸುಳ್ಳು ಹೇಳುವ ಮೂಲಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯ ಘನತೆ ಕಳೆದಿದ್ದಾರೆ. ರಾಜ್ಯದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ : ಮತ್ತೋರ್ವ ಆರೋಪಿಯನ್ನು ಬಂಧಿಸಿದ NIA

ಮತ್ತೊಂದೆಡೆ ರಣದೀಪ್‍ಸಿಂಗ್ ಸುರ್ಜೇವಾಲ, ಸುಳ್ಳುಗಾರ, ಸುಳ್ಳುಗಾರ ಅವರ ಹೆಸರು ಬಸವರಾಜ ಬೊಮ್ಮಾಯಿ ಎಂದು ಲೇವಡಿ ಮಾಡಿದ್ದಾರೆ. ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಹೂಡಿಕೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು, ಬಹುಶಃ ಶೇ.40ರಷ್ಟು ಕಮಿಷನ್ ಕೊಟ್ಟಿರಲಿಕ್ಕಿಲ್ಲ, ಅದಕ್ಕಾಗಿ ಒಪ್ಪಂದ ರದ್ದುಗೊಂಡಿರಬಹುದು ಎಂದು ಲೇವಡಿ ಮಾಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮೊದಲು ಬಜೆಟ್‍ನಲ್ಲಿ ಕಾರ್ಯಸಾಧುವಾದ ಭರವಸೆಗಳನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಶಾಸಕರು ಕಿವಿ ಮೇಲೆ ಹೂವಿಟ್ಟುಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.

Articles You Might Like

Share This Article