ಬೆಂಗಳೂರು, ಮಾ.3-ತಮ್ಮ ಚೊಚ್ಚಲ ರಾಜ್ಯ ಬಜೆಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ ಸ್ವರೂಪ ನೀಡಿದರು.ನಾಳೆ ಮಧ್ಯಾಹ್ನ 12.30 ಗಂಟೆಗೆ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳೊಂದಿ ಸಭೆ ನಡೆಸಿ 2022-23 ನೇ ಸಾಲಿನ ಆಯವ್ಯಯ ಅಂತಿಮಗೊಳಿಸಿದರು.
ಸಭೆಯಲ್ಲಿ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎಸ್ಎನ್ ಪ್ರಸಾದ್, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಏಕರೂಪ ಕೌರ್, ಜಾಫರ್, ಸಿಎಂ ಜಂಟಿ ಕಾರ್ಯದರ್ಶಿ ಜಿ. ಜಗದೀಶ, ಉಪ ಕಾರ್ಯದರ್ಶಿ ರಮೇಶ ಕೋನರೆಡ್ಡಿ ಉಪಸ್ಥಿತರಿದ್ದರು.
