ಬೆಂಗಳೂರು, ಜ.22- ನೇಕಾರರು ತಯಾರಿಸಿರುವ ಎಲ್ಲ ಬಟ್ಟೆಗಳನ್ನು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಬಳಸಿಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘ ನಗರದಲ್ಲಿ ಆಯೋಜಿಸಿದ್ದ ಅಮೃತ ಮಹೋತ್ಸವ 2023ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರು ತಿಂಗಳು ಮೊದಲೇ ಸಮವಸ್ತ್ರಕ್ಕೆ ಆದೇಶ ನೀಡಲು ಸೂಚಿಸಿದ್ದೇನೆ. ಇದರಿಂದ ನೇಕಾರರಿಗೆ ಅನುಕೂಲವಾಗಲಿದೆ ಎಂದರು.
ನೇಕಾರರ ಎಲ್ಲ ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ. ಮಹಾತ್ಮಾ ಗಾಂಧಿಯವರು ದೊಡ್ಡ ಮಟ್ಟದ ಕಂಪನಿಗಳಿಂದ ಉತ್ಪಾದನೆ ಬೇಡ, ದೊಡ್ಡ ಪ್ರಮಾಣದ ಜನರಿಂದ ಉತ್ಪಾದನೆಯಾಗಬೇಕು ಎಂದು ಹೇಳಿದ್ದರು. ಬಾಂಗ್ಲಾ ದೇಶವು ನೇಕಾರಿಕೆಯಿಂದಲೇ ತನ್ನ ಆರ್ಥಿಕತೆಯನ್ನು ನಿಭಾಯಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ದುಬೈ ಅಧಿಕಾರಿಯಂತೆ ನಟಿಸಿ ಲೀಲಾ ಪ್ಯಾಲೇಸ್ಗೆ ವಂಚಿಸಿದ್ದ ಆರೋಪಿ ಸೆರೆ
ನೇಕಾರರ ಸಹಾಯಧನವನ್ನು ಶೇ. 30 ರಿಂದ ಶೇ. 50 ಕ್ಕೆ ಹೆಚ್ಚಳ ಮಾಡಿದ್ದೇವೆ. ನೇಕಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಿದ್ದೇವೆ. ಅದೇ ರೀತಿ ಮೀನುಗಾರಿಕೆ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳಿಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ದುಡಿಯುವ ವರ್ಗಕ್ಕೆ ಮಹತ್ವ ಕೊಡುವ ಕೆಲಸ ಮಾಡುತ್ತಿದ್ದೇನೆ. ಮೊದಲು ದುಡ್ಡೆ ದೊಡ್ಡಪ್ಪ ಅಂತಿದ್ದರು. ಈಗ ದುಡಿಮೆಯೇ ದೊಡ್ಡಪ್ಪ ಆಗಿದೆ. ದುಡಿಯುವ ಸಮುದಾಯ ನೇಕಾರರದ್ದಾಗಿದೆ.
ಹೀಗಾಗಿ ನೇಕಾರರ ಸಮುದಾಯದ ಮಕ್ಕಳು ಬೇರೆ ಬೇರೆ ವೃತ್ತಿ ಮಾಡಿ ಬೆಳೆಯುವಂತಾಗಬೇಕು ಎಂದರು.
ಗ್ರಾಮೀಣ ಮತ್ತು ನಗರದ ಕೊಳಗೇರಿಗಳಲ್ಲಿ ಮಹಿಳೆಯರಿಗೆ ನೇಕಾರಿಕೆ ತರಬೇತಿ ನೀಡಿದರೆ ಅವರ ಮನೆ ಉದ್ಧಾರವಾಗುತ್ತದೆ. ಈಗಾಗಲೇ ಅಮೆಜಾನ್, ಪ್ಲಿಪ್ ಕಾರ್ಟ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ನೇಕಾರರು ನೇಯ್ದ ಸೀರೆಗಳನ್ನು ಮಹಾನಗರಗಳಲ್ಲಿ ನಾಲ್ಕು ಐದು ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡುತ್ತಾರೆ. ಅದರ ಲಾಭ ನೇಕಾರರಿಗೆ ಸಿಗಬೇಕು. ನೀವು ಆತ್ಮ ಸ್ಥೈರ್ಯದಿಂದ ಮುನ್ನುಗ್ಗಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಅವರು ಭರವಸೆ ನೀಡಿದರು.
ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರ ಹಿಡಿಯಲು ಬೆಂಬಲ ನೀಡಿ: ನಿಖಿಲ್
ನೇಕಾರರ ಮೂಲ ವೃತ್ತಿ ಉಳಿಯಬೇಕು. ಅದರ ಜೊತೆಗೆ ನೇಕಾರರು ಬೆಳೆಯಬೇಕು. ಜಾಗತಿಕರಣವಾದ ಮೇಲೆ ನೇಕಾರರ ವೃತ್ತಿ ಗೆ ಹೊಡೆತ ಬಿದ್ದಿದೆ. ನೇಕಾರರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತಾಗ ಮಾತ್ರ ನೇಕಾರರು ಬೆಳೆಯಲು ಸಾಧ್ಯ. ನಮ್ಮ ತಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಡವರಿಗೆ ಸೀರೆ, ಬಟ್ಟೆ ಕೊಡಲು ತೀರ್ಮಾನಿಸಿದರು. ಇದರಿಂದ ಬಡವರಿಗೆ ಬಟ್ಟೆ ದೊರೆಯಿತು. ನೇಕಾರರಿಗೆ ಆದಾಯವು ಆಯಿತು ಎಂದರು.
CM Bommai, Nekara Sangh, school, uniforms,