ಬೆಂಗಳೂರು, ಜ.19- ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಹಾಗೂ ನಿಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆಯೊಡ್ಡಿದ್ದಾರೆ. ಬಜೆಟ್ ಅಧಿವೇಶನ ಹಾಗೂ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವರ್ಗಾವಣೆ ಹಾಗೂ ನಿಯೋಜನೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ ಯಾವುದೇ ಅಧಿಕಾರಿ, ನೌಕರರ ವರ್ಗಾವಣೆ ಹಾಗೂ ನಿಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ತಮಗೆ ಸಲ್ಲಿಸದಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈಗಾಗಲೇ ವರ್ಗಾವಣೆ ಅವ ಮುಗಿದಿರುವುದರಿಂದ ಹಾಗೂ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವರ್ಗಾವಣೆ, ನಿಯೋಜನೆ ಪ್ರಸ್ತಾವ ಸಲ್ಲಿಸಬಾರದು. ಒಂದು ವೇಳೆ ಸ್ಥಳ ನಿರೀಕ್ಷಣೆಯಲ್ಲಿರುವವರಿಗೆ ಖಾಲಿ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಪ್ರಸ್ತಾವನೆಗಳನ್ನು ಸಚಿವರ ಹಂತದಲ್ಲಿಯೇ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.
ರಾಜಧಾನಿ ಮಾಫಿಯಾ ಗ್ರಾಮಾಂತರಕ್ಕೆ ಶಿಫ್ಟ್ : ಹೆಡೆಮುರಿ ಕಟ್ಟುವರೇ ಅಲೋಕ್..?
ಈ ಸಂಬಂಧ ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ, ಲೋಕೋಪಯೋಗಿ
ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಈ ಸೂಚನೆ ನೀಡಿದ್ದಾರೆ. ವರ್ಗಾವಣೆ ಅವದಿ ಮುಗಿದ ಬಳಿಕ ವರ್ಗಾವಣೆ ಮಾಡಲು ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯಬೇಕಿದೆ.
CM Bommai, officers, transfer, stopped,