ಅರಣ್ಯ ವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ : ಸಿಎಂ

Social Share

ಸಿರ್ಸಿ, ಜ.15- ಅರಣ್ಯ ವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಿಂದ ನಿರ್ಣಯ ಆಗುವವರೆಗೂ ಅರಣ್ಯ ವಾಸಿಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದರು.

ಪ್ರವಾಹ ಬಂದಾಗ ಅರಣ್ಯ ವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಅರಣ್ಯ ವಾಸಿಗಳಿಗೆ ಪರಿಹಾರ ನೀಡಲು ಕಾನೂನು ಸಮಸ್ಯೆ ಇದ್ದರೂ ಪರಿಹಾರ ಕೊಟ್ಡಿದ್ದೇವೆ. ಅರಣ್ಯ ವಾಸಿಗಳಿಗೆ ಮನೆ, ಜಮೀನು ಕೊಡುವ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅರಣ್ಯ ವಾಸಿಗಳಿಗೆ ಮೂರು ತಲೆಮಾರು ಬದಲು ಒಂದು ತಲೆಮಾರು ಎಂದು ಪರಿಗಣಿಸಿ ಜಮಿನು ಮಂಜೂರು ಮಾಡಲಾಗುವುದು ಎಂಬ ಭರವಸೆ ನೀಡಿದರು.

ಸಿರ್ಸಿಯಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯ ಕಾಲೇಜ್ ಗಳನ್ನು ಸಮೀಕರಿಸಿ ಪರಿಸರ ಮತ್ತು ಇತರ ಅಧ್ಯಯನಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಮುಂದಿನ ಬಜೆಟ್ ನಲ್ಲಿ ಈ ಭಾಗದ ಜನರಿಗೆ ಈ ಘೋಷಣೆ ಮಾಡಲಾಗುವುದು ಹೇಳಿದರು.

ಸಿರ್ಸಿ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಬಗ್ಗೆ ಹಲವು ಕಡೆಗಳಿಂದಲೂ ಇದೆ. ಅದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಬಹುಮುಖ ಪ್ರತಿಭೆಯುಳ್ಳವರಗಿದ್ದು, ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕಕ್ಕೆ ಲೋಕಾಯುಕ್ತ ತಂದಿದ್ದಾರೆ. ಯಾವ ವಿಚಾರದ ಮೇಲೆ ಅವರ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಉತ್ತರೋತ್ತರ ಅಭಿವೃದ್ದಿ ಆಗುತ್ತದೆ ಎನ್ನುವ ನಂಬಿಕೆ ನನ್ನದು. ಸಿರ್ಸಿ ಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದು, ಇಲ್ಲಿ ಅಭಿವೃದ್ಧಿ ಮತ್ತು ನಾಗರಿಕತೆ ಜೊತೆ ಜೊತೆಗೆ ಹೋಗುತ್ತದೆ.

250 ಕೋಟಿಗಿಂತ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ. ಇದಕ್ಕೆ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು120 ಕೋಟಿ ಆಸ್ಪತ್ರೆ ನಿರ್ಮಾಣ, ಸರ್ಕಾರಿ ಶಾಲೆ, ಉನ್ನತ ಶಿಕ್ಷಣ, ಲೋಕೊಪಯೊಗಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಂದ ಅನುದಾನ ತಂದಿದ್ದಾರೆ ಎಂದು ಹೇಳಿದರು.

ಕಳ್ಳನನ್ನು ಹಿಡಿದುಕೊಟ್ಟ ಖಾಲಿ ವಾಟರ್ ಬಾಟಲ್

ಸಿರ್ಸಿ, ಮುಂಡಗೊಡ, ಹಳಿಯಾಳ, ಯಲ್ಲಾಪುರ, ವೈವಿದ್ಯಮಯ ನಿಸರ್ಗದತ್ತವಾದವಾಗಿವೆ. ಇದಕ್ಕೆ ಇನ್ನಷ್ಟು ಯೋಜನಾಬದ್ದ ಅಭಿವೃದ್ಧಿ ಆಗಬೇಕಿದೆ. ಯಲ್ಲಾಪುರದಲ್ಲಿ ವಿಶೇಷವಾದ ಆಸಕ್ತಿಯನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಪುನರ್ ವಸತಿ ಮಾಡುವ ಕುರಿತು ಚರ್ಚೆಯಾಗಿದೆ. ಕೆಲವರು ಬೇರೆ ಕಡೆ ಹೋಗಬೇಕೆಂದು ಬಯಸುತ್ತಾರೆ. ಕೆಲವರು ಇಲ್ಲಿಯೇ ಇರಲು ಬಯಸುತ್ತಾರೆ. ಅದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಜಾರಿ ಮಾಡುತ್ತೇವೆ:
ರಾಜ್ಯ ಸರ್ಕಾರದ ಮಹತ್ವದ ಕಳಸಾ ಬಂಡೂರಿ ಯೊಜನೆಗೆ ಸುಪ್ರೀಂ ಕೊರ್ಟ್ ಹಲವಾರು ವರ್ಷ ಚರ್ಚಿಸಿ ಆದೇಶ ನೀಡಿದೆ. ಅದೆಲ್ಲವನ್ನು ನೋಡಿಯೆ ನಾವು ಕಾನೂನು ಬದ್ದವಾಗಿಯೇ ಯೋಜನೆಯನ್ನು ಜಾರಿಗೊಳಿಸುತ್ತೇವೆ. ಗೋವಾದವರು ಅನಗತ್ಯವಾಗಿ ವಿರೋದ ಮಾಡುತ್ತಿದ್ದಾರೆ. ನಾವು ಯೋಜನೆ ಮಾಡಿಯೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಹಲವಾರು ಚರ್ಚೆ ನಡೆಸಲಾಗಿದೆ ಹೈ ಕಮಾಂಡ್ ಯಾವಾಗ ಸೂಚನೆ ನೀಡುತ್ತದೆಯೊ ಆಗ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Articles You Might Like

Share This Article