ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ

Social Share

ಸಿರ್ಸಿ, ಜ.15- ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಒಬ್ಬ ಅಪರೂಪದ ವ್ಯಕ್ತಿತ್ವಳ್ಳವರು. ಅವರು ಸಾರ್ವಜನಿಕ ಜೀವನಕ್ಕೆ ಬಂದಿದ್ದು ಒಬ್ಬ ಪೂರ್ಣಕಾಲಿಕ ಕಾರ್ಯಕರ್ತರಾಗಿ. ಈಗ ರಾಜ್ಯದ ಎಲ್ಲರ ಮನೆ, ಮನಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಸಿದರು.

ವಿಶ್ವೇ ಹೆಗಡೆ ಕಾಗೇರಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸಭಾಧ್ಯಕ್ಷರಿಗೆ ಯಾವುದೇ ಗಾಢ್ ಪಾಧರ್‍ಗಳಿಲ್ಲ. ರಾಜ್ಯದಲ್ಲಿ ಬಹಳ ಜನರಿಗೆ ಗಾಡ್ ಪಾದರ್‍ಗಳ ಅಗತ್ಯವಿದೆ. ವಿಶ್ವೇಶ್ವರ ಹೆಗಡೆ ಕಾಗೆರಿ ಅವರಿಗೆ ಸಂಘಟನೆಯೇ ಗಾಢ್ ಪಾರ್ಧ. ಅವರದು ಹೊಂದಾಣಿಕೆ ಇಲ್ಲದ ವ್ಯಕ್ತಿತ್ವ. ಅವರನ್ನು ಒಪ್ಪಿಸುವುದು ಬಹಳ ಕಷ್ಟ. ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಅವರು ಮುಂದೆ ನಿಂತು ಮಾಡುತ್ತಾರೆ.

ಅವರು ಸ್ಥಿತ ಪ್ರಜ್ಞೆಯ ವ್ಯಕ್ತಿತ್ವವುಳ್ಳವರು ಎಂದು ಪ್ರಶಂಸಿದರು.ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಗೇರಿ ಅವರು ಏಳನೇ ಬಾರಿಯೂ ಆಯ್ಕೆಯಾಗುತ್ತಾರೆ. ಮಂತ್ರಿಯಾಗಿ, ಸಭಾಧ್ಯಕ್ಷರಾದರೂ ಯಾವುದೆ ಗರ್ವ ಇಲ್ಲದೆ ಅಧಿಕಾರ ನಡೆಸಿದ್ದಾರೆ.

ಅವರ ಜೊತೆ ಮಾತನಾಡಿದಾಗ ಸಭಾಧ್ಯಕ್ಷರ ಜೊತೆ ಮಾತನಾಡಿದ್ದೆವು ಅಂತ ಅನಿಸುವುದಿಲ್ಲ. ಸ್ನೇಹಿತನ ಜೊತೆ ಮಾತಾಡಿದ್ದೇವೆ ಎನಿಸುತ್ತದೆ. ಯಾವುದೇ ಕೆಲಸವನ್ನು ಅವರಿಗೆ ನೀಡಿದರೆ ಅವರು ಬದ್ದತೆಯಿಂದ ಕೆಲಸ ಮಾಡಿದ್ದಾರೆ ಎಂದರು.

ಸ್ಯಾಂಟ್ರೊ ರವಿ ಬಂಧನದಿಂದ ಸಚಿವರು ಸೇರಿ ಅನೇಕ ಗಣ್ಯರಿಗೆ ಶುರುವಾಯ್ತು ನಡುಕ

ಶಿಕ್ಷಣ ಮಂತ್ರಿಯಾಗಿ ಕೆಲಸ ಮಾಡುವುದು ಸುಲಭವಲ್ಲ. ಕಾಗೇರಿಯವರು ಶಿಕ್ಷಣ ಸಚಿವರಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಭಾಧ್ಯಕ್ಷರಾಗಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾ ತಿರುಗಾಡಬಹುದಿತ್ತು. ಆದರೆ, ಅವರು ಸಂವಿಧಾನದ ಬಗ್ಗೆ ಚರ್ಚಿಸಿ ಸಂಸತ್ತಿಗೆ ಕಳುಹಿದ್ದಾರೆ. ಚುನಾವಣಾ ಸುಧಾರಣೆಗೆ ಒಂದು ದೇಶ, ಒಂದು ಚುನಾವಣೆ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಜನ ಪ್ರತಿನಿಗಳ ಮೌಲ್ಯಗಳನ್ನು ಕಾಪಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಅತ್ಯಂತ ಮಾನವಿಯ ಗುಣಗಳ ಹೊಂದಿದ್ದಾರೆ ಎಂದು ಹೇಳಿದರು.

ದೇಶ ಮೊದಲು ಎನ್ನುವ ವಿಚಾರ ಬಂದಾಗ ಗಟ್ಟಿಯಾಗಿ ನಿಂತವರು ವಿಶ್ವೆಶ್ವರ ಹಗಡೆ ಕಾಗೇರಿಯವರು. ಬಡವರು, ಕಷ್ಟದಲ್ಲಿರುವ ಜನರ ಪರವಾಗಿ ಅತ್ಯಂತ ಪೂಜ್ಯ ಭಾವನೆಯಿಂದ ಅವರು ಕೆಲಸ ಮಾಡುತ್ತಿದ್ದಾರೆ. ಜೀವನದ ಉತ್ಸಾಹ ಇರುವವರಿಗೆ ಮಾತ್ರ ಬಡವರಪರ ಕಾಳಜಿ ಇರುತ್ತದೆ. ಮಲೆನಾಡಿನ ಪುಣ್ಯ ಭೂಮಿಯಲ್ಲಿ ಅವರನ್ನು ಪಡೆದಿರುವುದು ಸೌಭಾಗ್ಯ ಇದೆ.

ಇಷ್ಟೆಲ್ಲ ಸಾಧನೆ ಆಗಿದೆ ಎಂದರೆ ಶಿಖರಕ್ಕೆ ಏರುತ್ತಾರೆ ಎನ್ನುವ ವಿಶ್ವಾಸ ಇದೆ. ಸಚಿವ ಶಿವರಾಮ್ ಹೆಬ್ಬಾರ್ ಅವರು ಪಕ್ಷಕ್ಕೆ ಬಂದ ಮೇಲೆ ಕಾಗೇರಿಯವರಿಗೆ ದೊಡ್ಡ ಶಕ್ತಿ ಬಂದಿದೆ. ಇಬ್ಬರೂ ಸೇರಿ ಜಿಲ್ಲೆಯ ಅಭಿವೃದ್ದಿ ಮಾಡುತ್ತಿದ್ದಾರೆ ಎಂದು ಹೇಳಿದರು.

Articles You Might Like

Share This Article