ಬೆಂಗಳೂರು, ಫೆ.25- ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಟುಸತ್ಯ ಎದುರಿಸುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಬಡಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ.
ನಾನಲ್ಲ. ಈಗಾಗಲೇ ಏನು ಕ್ರಮ ಕೈಗೊಳ್ಳಬೇಕೊ ಅದನ್ನು ಮಾಡುತ್ತೇವೆ ಎಂದು ಹೇಳಿದರು. ಸಿದ್ದರಾಮಯ್ಯನವರು ಹೇಗೆ ಸುಳ್ಳು ಅಂತಾರೆ. ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದೇನೆ. ವರದಿ ಬಸವರಾಜ ಬೊಮ್ಮಾಯಿ ಪೈಂಡಿಂಗ್ ಅಲ್ಲ. ಸಿದ್ದರಾಮಯ್ಯ ಅವರು ನೇಮಿಸಿದ ನ್ಯಾಯಮೂರ್ತಿ ಕೆಂಪಣ್ಣ ಅವರು ತನಿಖೆ ನಡೆಸಿದ ವರದಿಯ ಪೈಂಡಿಂಗ್ ಅದು. ಅದನ್ನ ನಾನು ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡಿಗ ಕೆ.ಎಲ್.ರಾಹುಲ್ ನೆರವಿಗೆ ಬಂದ ಗಂಭೀರ್
ಧಿಅಕಾರಿಗಳು ತೆಗೆದುಕೊಂಡು ಬಂದಿದ್ದಾರೆ. ಅದನ್ನು ಅನುಮೋದಿಸಿದ್ದೇನೆ ಎಂದು ಬರೀದಿದ್ದೇನೆಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅವರು ಅಡ್ಮಿಷನ್ ಆದಾಗೆ ಅರ್ಥ ಅಲ್ವವೇ ಎಂದು ಪ್ರಶ್ನಿಸಿದರು.
ಅಲ್ಲದೆ ಅವರು ಅಡ್ವೇಕೇಟ್ ಜನರಲ್ ವಾದ ಹೇಳಿದ್ದಾರೆ. ಆದರೆ ಆದೇಶ ಏನು ಬಂತು ಅದು ಮುಖ್ಯ ಅಲ್ವವೇ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅದನ್ನು ನಾನು ಹೇಳಿದ್ದೇನೆ ಎಂದಿದ್ದಾರೆ.
CM Bommai, siddaramaiah, Arkavathy, layout, scheme,